ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದಿಂದ ಮಾಹಿತಿ

ದಾವಣಗೆರೆ: ಇಂದು ಹರಿಹರ ನಗರದ ಹೊಲದಲ್ಲಿರುವ ವೈಜಿಪಿ ಫಾರಂ ಹೌಸಿನಲ್ಲಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಸ್ಥಾಪಕರಾದ ಶ್ರೀಯುತ ಕೆ ಅಮರ್ ನಾರಾಯಣ್ IAS ನಿವೃತ್ತ ಅಧಿಕಾರಿಗಳು ಮಾರ್ಗದರ್ಶನದಲ್ಲಿ ದಾವಣಗೆರೆ ಜಿಲ್ಲೆಯ ಶ್ರೀಗಂಧ ಮತ್ತು ಬಿದಿರು ಬೆಳೆಯುವುದರ ಬಗ್ಗೆ ಮತ್ತು ಅದರ ಮಾರುಕಟ್ಟೆ ಬೆಳೆ ಸಂರಕ್ಷಣೆ ಕುರಿತು ತರಬೇತಿ ನೀಡಿದರು ಇದರ ಜೊತೆಯಲ್ಲಿ ದಾವಣಗೆರೆ ಜಿಲ್ಲೆಯ ನೂತನ ಶ್ರೀಗಂಧ ಮತ್ತು ವನಕೃಷಿ ಸಂಘದ ನೂತನ ಸಮಿತಿಯನ್ನು ರಚಿಸಲಾಗಿತು.
ಸಮಿತಿ ಅಧ್ಯಕ್ಷರಾಗಿ ಶ್ರೀಯುತ ಶಿವಕುಮಾರ್ ಜಗಳೂರು ಆಯ್ಕೆ ಮಾಡಲಾಗಿತ್ತು ಈ ಸಂದರ್ಭದಲ್ಲಿ ಶ್ರೀಯುತ ಶರಣಪ್ಪ ನವರ್ IPS ನಿವೃತ್ತ ಅಧಿಕಾರಿಗಳು ಗಂಗಾವತಿ, ಫಾರ್ಮಸ್ ನ ಮಾಲಿಕರಾದ ಪ್ರಕಾಶ್,ಮಾಜಿ ಶಾಸಕರಾದ ಮೈಮಾ ಪಾಟೀಲ್ ಸರ್, ಮಾರ್ಸ್ ಕೆ ಸಂಸ್ಥೆಯ ರವಿಕುಮಾರ್, ಮಂಜುನಾಥ್, ಒಂದುಗೂಡು ಸೇವಾ ಸಂಸ್ಥೆಯ ಸಾಕ್ಷಿ ಅನಿತಾ, ಶ್ರೀಮತಿ ಸುನೀತಾ ಮತ್ತು ಜಿಲ್ಲೆಯ ಶ್ರೀಗಂಧ ಮತ್ತು ಬಿದಿರು ಬೆಳೆಗಾರರು ಭಾಗವಹಿಸಿದ್ದರು.

 
                         
                       
                       
                       
                       
                       
                       
                      