ದೊಟ್ಟಮಟ್ಟದ ಅನಾಹುತ ತಪ್ಪಿಸಿದ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಭೀಳಗಿ: ಎಸ್ ಪಿ ನೇತೃತ್ವದಲ್ಲಿ ಎಸ್ಕಾರ್ಟ್ ಬಳಸಿ ಆಕ್ಸಿಜನ್ ಸಿಲಿಂಡರ್ ತರುವಲ್ಲಿ ಯಶಸ್ವಿಯಾದ ಜಿಲ್ಲಾಡಳಿತ.

ಹೆಚ್ ಎಂ ಪಿ ಕುಮಾರ್

ದಾವಣಗೆರೆ : ದಾವಣಗೆರೆಗೆ ಬರಬೇಕಿದ್ದ ಆಕ್ಸಿಜನ್ ಸಿಲಿಂಡರ್ ಪೂರೈಕೆಯಲ್ಲಿ 4 ಗಂಟೆ ವಿಳಂಬ ಹಿನ್ನೆಲೆ ಕೆಲ ಕಾಲ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಸಮಸ್ಯೆಯಿಂದ ಗಲಿಬಿಲಿ, ಗೊಂದಲ ಏರ್ಪಾಡಾಗಿತ್ತು. ಆದರೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆಕ್ಸಿಜನ್ ಕೊರತೆಯಿಂದ ಆಗಬಹುದಾಗಿದ್ದ ದೊಡ್ಡಮಟ್ಟದ ಅನಾಹುತವನ್ನ ತಪ್ಪಿಸಿದ್ದಾರೆ.

ಸ್ಥಳೀಯ ಖಾಸಗಿ ಆಸ್ಪತ್ರೆಗಳಿಂದ ಹಾಗೂ ಗ್ಯಾಸ್ ಏಜೆನ್ಸಿಗಳಿಂದ ತಕ್ಷಣಕ್ಕೆ ಕಾರ್ಯೊನ್ಮುಖರಾದ ಡಿಸಿ ಖುದ್ದು ತಾವೇ ಸ್ಥಳಕ್ಕೆ ಬಂದು ಎಲ್ಲರ ಜೊತೆ ಫೋನಿನಲ್ಲಿ ಸಂಪರ್ಕ ಮಾಡಿ ಆಕ್ಷಿಜನ್ ಸಿಲಿಂಡರ್ ತರಿಸಿದ್ದಾರೆ, ಆಕ್ಷಿಜನ್ ತರುವ ವಾಹನಗಳಿಗೆ ಎಸ್ ಪಿ ಹನುಮಂತರಾಯ ಹಾಗೂ ದಾವಣಗೆರ ಬಡಾವಣೆ ಠಾಣೆ ಹಾಗೂ ಕೆ ಟಿ ಜೆ ನಗರ ಪೋಲೀಸ್ ಸಿಬ್ಬಂದಿಗಳ ಜೊತೆ ಆಕ್ಷಿಜನ್ ಸಿಲಿಂಡರ್ ವಾಹನವನ್ನ ಕಳಿಸಿದ್ದಲ್ಲದೆ, ರಸ್ತೆಯಲ್ಲಿ ಬರುವಾಗ ಯಾವುದೇ ತೊಂದರೆ ಆಗದಂತೆ ನೋಡಿಕೊಂಡು ಜಿಲ್ಲಾ ಆಸ್ಪತ್ರೆಗೆ ಸಿಲಿಂಡರ್ ತರಿಸಿದ್ದಾರೆ.

ಜಿಲ್ಲಾಧಿಕಾರಿ ಮಹಾಂತೇಶ್ ಭೀಳಗಿ ಹಾಗೂ ಎಸ್ ಪಿ ಹನುಮಂತರಾಯ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಕ್ಷಿಜನ್ ಸರಬರಾಜು ಮಾಡುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಆಕ್ಸಿಜನ್ ಕೊರತೆಯಿಂದ ಆಗಬಹುದಾಗಿದ್ದ ಅನಾಹುತವನ್ನ ತಪ್ಪಿಸಿದ್ದಲ್ಲದೆ ಮುಂದೆ ಯಾವುದೇ ರೀತಿಯಾದಂತಹ ಆಕ್ಸಿಜನ್ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ. ಅಲ್ಲದೆ ಆಸ್ಪತ್ರೆ ಆವರಣದಲ್ಲಿರುವ ಆಕ್ಷಿಜನ್ ಟ್ಯಾಂಕರ್ ನಲ್ಲಿ ಏನಾದರೂ ತೊಂದರೆ ಕಾಣಿಸಿದರೆ, ಪರ್ಯಾಯವಾಗಿ 200 ಕ್ಕೂ ಹೆಚ್ಚು ಜಂಬೋ ಸಿಲಿಂಡರ್ ಗಳ ವ್ಯವಸ್ಥೆಯನ್ನ ಮಾಡಿಕೊಳ್ಳಲಾಗಿದೆ.

ಇಂದು ಮುಂಜಾನೆ ತೋರಣಗಲ್ಲಿನಿಂದ ವಾಹನ ಬರುವುದ ತಡವಾಗಿದೆ ಎಂದು ತಿಳಿದ ತಕ್ಷಣ ಜಿಲ್ಲಾ ಆಸ್ಪತ್ರೆಗೆ ಮುಂಜಾನೆಯೆ ತೆರೆಳಿ ಆಕ್ಷಿಜನ್ ಘಟಕದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳನ್ನ ಹಾಗೂ ಸಿಬ್ಬಂದಿಗಳನ್ನ ಕೆಲ ಕಾಲ ತರಾಟೆಗೆ ತೆಗೆದುಕೊಂಡರು.ನಂತರ ಆಕ್ಸಿಜನ್ ಸಿಲಿಂಡರ್ ಬಂದ ನಂತರ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಬೆಳಗಿನ ಉಪಹಾರವನ್ನ ಸ್ಥಳಕ್ಕೆ ತರಿಸಿ ಎಲ್ಲರೂ ಉಪಹಾರ ಸೇವಿಸುವವರೆಗೂ ಅಲ್ಲೆ ಇದ್ದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಆಸ್ಪತ್ರೆಯ ಆಕ್ಷಿಜನ್ ಯುನಿಟ್ ನಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಗಳಿಗೆ ಉಪಹಾರ ಸೇವಿಸುವಂತೆ ಆದೇಶ್ ಮಾಡಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ವಿಜಯನಗರ ಜಿಲ್ಲೆಯ ತೋರಣಗಲ್ಲಿನಿಂದ ಪ್ರತಿ ನಿತ್ಯ 6,000 ಲೀಟರ್ ಲಿಕ್ವಿಂಡ್ ಆಕ್ಸಿಜನ್ ಮುಂಜಾನೆ 8 ಗಂಟೆಗೆ ಬರಬೇಕಿತ್ತು ಆದರೆ ಅಲ್ಲಿ ಬಿಲ್ಲಿಂಗ್ ಮಾಡಿ ಆಕ್ಷಿಜನ್ ತುಂಭಿದ್ದ ಟ್ಯಾಂಕರ್ ಅನ್ನು ಕಳಿಸಲು ತಡ ಮಾಡಲಾಗಿತ್ತು. ನಾವು ಅಲ್ಲಿಯ ಸಿಬ್ಬಂದಿ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿದ್ದಲ್ಲದೆ ನಮ್ಮ ಜಿಲ್ಲೆಯ ಪೋಲೀಸ್ ಬಂದೋಬಸ್ತ ನೊಂದಗೆ ಟ್ಯಾಂಕರ್ ದಾವಣಗೆರೆಗೆ ಬರಲಿದೆ.

ಹೆಚ್ಚು ಕಮ್ಮಿ ಟ್ಯಾಂಕರ್ ಇಂದು ಬರುವುದು 4 ಗಂಟೆ ತಡವಾಯ್ತು. ಸದ್ಯ ಜಿಲ್ಲಾಸ್ಪತ್ರೆಯಲ್ಲಿ 350 ಸೋಂಕಿತರಿದ್ದಾರೆ, ಅವರಿಗೆ ಆಕ್ಸಿಜನ್ ಕೊರತೆ ಆಗಬಾರದು ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆ ಹಾಗೂ ಏಜೆನ್ಸಿಗಳಿಂದ ಜಂಬೋ ಆಕ್ಸಿಜನ್ ಸಿಲಿಂಡರ್ ತರಿಸಿದ್ದೇವೆ, ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಕೊರತೆ ಆಗದಂತೆ ವ್ಯವಸ್ಥೆ ಮಾಡಿದ್ದೇವೆ, ಪ್ರಸ್ತುತ, ಪರಿಸ್ಥಿತಿ ನಿಯಂತ್ರಣದಲ್ಲಿದೆ  ಇನ್ನು ಕೆಲವೇ ಗಂಟೆಗಳಲ್ಲಿ 6KL ಲಿಕ್ವಿಡ್ ಆಕ್ಸಿಜನ್ ಸಿಲಿಂಡರ್ ದಾಸ್ತಾನು ದಾವಣಗೆರೆಗೆ ಬಂದು ನಮ್ಮ ಆಸ್ಪತ್ರೆಯ ಆವರಣದಲ್ಲಿರುವ ಟ್ಯಾಕರ್ ಗೆ ತುಂಬಿಸಲಿದೆ ಎಂದು ಮಾಹಿತಿ ನೀಡಿದ್ರು.

 

 

Leave a Reply

Your email address will not be published. Required fields are marked *

error: Content is protected !!