ಕೈಮರದ ಬಳಿ ಅಪಘಾತವಾಗುವ ಸ್ಥಳವೆಂದು ಗುರುತಿಸಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿ – ಡಾ ಎಚ್ ಕೆ ಎಸ್ ಸ್ವಾಮಿ

ಚಿತ್ರದುರ್ಗ:- ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಸಂಚರಿಸುವ ಎಲ್ಲ ವಾಹನಗಳು ಕೈಮರದ ಅಡ್ಡರಸ್ತೆಯ ಬಳಿ ವೇಗವಾಗಿ ದಾಟುವಾಗ ಅಪಘಾತಗಳ ಆಗುವ ಸಂಭವಗಳು ಹೆಚ್ಚಾಗಿದ್ದು, ಅಲ್ಲಿ ಯಾವುದೇ ರೀತಿಯ ಅಪಘಾತವಾಗುವ ಸ್ಥಳ ಎಂದು ಗುರುತಿಸಿ, ಮುಂಜಾಗ್ರತ ಕ್ರಮವಾಗಿ ಯಾವುದೇ ಎಚ್ಚರಿಕೆ ಫಲಕಗಳನ್ನು ಅಳವಡಿಸದೇ ಬಿಟ್ಟಿರುವುದರಿಂದ ಅಪಘಾತಗಳಾಗುವ ಸಂಭವಗಳು ಹೆಚ್ಚಾಗುತ್ತಿವೆ, ಅಲ್ಲಿ ಕೇವಲ ಎರಡು ಕಬ್ಬಿಣದ ಬ್ಯಾರಿ ಕೇಟ್ ಗಳನ್ನ ಇಟ್ಟಿದ್ದು, ಅವುಗಳನ್ನು ಸಹ ಜನರು ಪಕ್ಕಕ್ಕೆ ಸರಿಗಿಸಿ ವೇಗವಾಗಿ ವಾರಗಳ ಚಲಾಯಿಸುತ್ತಿದ್ದಾರೆ.
ಅಲ್ಲಿ ಗ್ರಾಮೀಣ ಜನರು ರಸ್ತೆದಾಡಲು ಜೀವ ಕೈಲಿದುಕೊಂಡು ದಾಟ ಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದೆ, ಹಾಗಾಗಿ ಸಂಚಾರಿ ಇಲಾಖೆ ಮತ್ತು ಜಿಲ್ಲಾಡಳಿತ ಕೈಮರದ ಬಳಿ ಅಪಘಾತವಾಗುವ ಸ್ಥಳ ಎಂಬ ಎಚ್ಚರಿಕೆಯ ಸಂದೇಶ ನೀಡವ ಬೋರ್ಡ್ ಗಳನ್ನ ಮತ್ತು ಸಿಗ್ನಲ್ ಲೈಟ್ಗಳನ್ನ, ರಸ್ತೆ ಮೇಲೆ ಹಾಕುವ ಕೆಂಪು ಬಣ್ಣದ ಪ್ರತಿಫಲಕಗಳನ್ನ ಅಳವಡಿಸಿ, ಜನರು ಸುರಕ್ಷಿತವಾಗಿ ರಸ್ತೆ ದಾಟುವಂತೆ ಹಾಗೂ ವಾಹನಗಳು ಸಹ ಸುರಕ್ಷತೆಯಿಂದ ರಸ್ತೆ ದಾಟುವಂತೆ ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಬಾ ಎಚ್ ಕೆ ಎಸ್ ಸ್ವಾಮಿಯವರು ವಿನಂತಿಸಿಕೊಂಡಿದ್ದಾರೆ.
ರಾತ್ರಿ ಹೊತ್ತು ಮುಖ್ಯರಸ್ತೆಯಲ್ಲಿವೇಗವಾಗಿ ಸಂಚರಿಸುವ ವಾಹನಗಳಿಗೆ ಕೈಮರದ ಬಳಿ ಗ್ರಾಮೀಣ ಜನರ ಅಡ್ಡರಸ್ತೆ ಇದೆ ಮತ್ತು ಅಲ್ಲಿ ಸಹ ಗ್ರಾಮೀಣ ಜನರು ವೇಗವಾಗಿ ವಾಹನಗಳನ್ನು ಚಲಾಯಿಸುತ್ತಿರುವುದರಿಂದ ಹೆಚ್ಚು ಅಪಘಾತವಾಗುವ ಸಂಭವವಿದೆ ಎಂಬ ಅರಿವಿಲ್ಲದೆ ವಾಹನ ಚಲಾಯಿಸುತ್ತಿದ್ದಾರೆ
ಜನರು ಕೈಯಲ್ಲಿ ಜೀವ ಹಿಡಿದು ಬದುಕುವಂತಹ ಅವ್ಯವಸ್ಥೆಯಾಗಿದೆ, ಇದರ ಬಗ್ಗೆ ಯಾರು ಹೆಚ್ಚು ಗಮನ ಹರಿಸದೆ ತಟಸ್ಥ ರೀತಿಯಿಂದ ಇರುವುದರಿಂದ, ರಸ್ತೆ ಸುರಕ್ಷತೆ ಬಗ್ಗೆ ಅರಿವಿರುವವರು ಇಲ್ಲಿಯ ಜನರ ಮತ್ತು ಮಕ್ಕಳ ಜೀವದ ಬಗ್ಗೆ ಚಿಂತಿಸುವಂಥಾಗಿದೆ. ಈ ಗ್ರಾಮೀಣ ಜನರಿಗೆ ಒಂದಿಷ್ಟು ವಿದ್ಯುತ್ ದೀಪಗಳನ್ನು ಅಳವಡಿಸಿ, ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸಿ, ರಸ್ತೆಯ ಮೇಲೆ ಪ್ರತಿಫಲಕಗಳನ್ನು ಅಳವಡಿಸಿ, ಸಾಧ್ಯವಾದರೆ ಒಂದು ರಸ್ತೆ ಉಬ್ಬನ್ನ ರಚಿಸಿ, ಅದಕ್ಕೊಂದು ಒಂದಿಷ್ಟು ಬಿಳಿ ಮತ್ತು ಕಪ್ಪು ಬಣ್ಣವನ್ನು ಬಳಿದು, ಇಲ್ಲೊಂದು ಅಡ್ಡರಸ್ತೆ ಇದೆ, ವೇಗವಾಗಿ ಗಾಡಿ ಚಲಾಯಿಸಬೇಡಿ ಎಂಬ ಸಂದೇಶವನ್ನ ಮುಖ್ಯ ರಸ್ತೆಯಲ್ಲಿ ಗಾಡಿ ಓಡಿಸುವವರಿಗೆ ತಲುಪಿಸಿದರೆ ಮಾತ್ರ ಇಲ್ಲಿ ಅಪಘಾತಗಳನ್ನು ತಡೆಯಬಹುದು ಎಂದರು.
ಇಂತಹ ಅಪಘಾತ ವಾಗುವಂತಹ ಅಡ್ಡರಸ್ತೆಗಳ ಬಳಿ ಸುರಕ್ಷಿತ ಸಾಧನೆಗಳನ್ನ ಅಳವಡಿಸಿ, ವಿದ್ಯುತ್ ದೀಪಗಳನ್ನ ಅಳವಡಿಸಿ, ವೇಗವನ್ನ ನಿಯಂತ್ರಿಸುವಂತಹ ವ್ಯವಸ್ಥೆ ಮಾಡಿದರೆ ಮಾತ್ರ ರಸ್ತೆ ಅಪಘಾತಗಳನ್ನು ತಡೆಯಬಹುದು. ಇಲ್ಲದಿದ್ದರೆ ದೊಡ್ಡ ಅಪಘಾತಗಳಾಗಿ ಹತ್ತಾರು ಜನ ಸತ್ತಾಗ ನಾವು ಚಿಂತಿತರಾಗುವುದಕ್ಕಿಂತ ಮುಂಚಿತವಾಗಿಯೇ ಮುಂಜಾಗ್ರತೆ ಕ್ರಮಗಳನ್ನು ವಹಿಸಬೇಕು ಎಂದರು.
ಬೆಂಗಳೂರಿಂದ ಬರುವ ವಾಹನ ಚಾಲಕರಿಗೆ ಈ ಕೈಮರದ ಬಳಿ ದೊಡ್ಡದಾದ ಒಂದು ಅಡ್ಡರಸ್ತೆ ಬರುತ್ತದೆ, ಗ್ರಾಮೀಣ ಜನರು ರಸ್ತೆದಾಟುತ್ತಿರುತ್ತಾರೆ, ವಾಹನಗಳು ಅಡ್ಡ ಬರುತ್ತದೆ. ಎಂಬ ಯಾವ ಕಲ್ಪನೆ ಇಲ್ಲದೆ, ವೇಗವಾಗಿ 80 ರಿಂದ 100 ಕಿಲೋಮೀಟರ್ ವೇಗದಲ್ಲಿ ವಾಹನ ಚಲಾಯಿಸಿಕೊಂಡು ಈ ಗ್ರಾಮವನ್ನು ದಾಟಿ ಹೋಗುತ್ತಾರೆ, ಹಾಗಾಗಿ ಇಲ್ಲಿ ವೇಗ ನಿಯಂತ್ರಣ ಶೀಘ್ರವಾಗಿ ಅಳವಡಿಸಬೇಕು, ಹಳದಿ ದೀಪಗಳ ಮುಖಾಂತರ ಎಚ್ಚರಿಕೆ ಸಂದೇಶವನ್ನ ಚಾಲಕರಿಗೆ ನೀಡಬೇಕು, ಬ್ಯಾರಿಕೆಢ್ ಗಳನ್ನು ರಸ್ತೆ ಬದಿಯಲ್ಲಿ ಸರಿಸಿದ್ದಾರೆ ಅವುಗಳನ್ನು ಸರಿಯಾಗಿ ಅಳವಡಿಸಬೇಕು ಆಗ ಮಾತ್ರ ಇಲ್ಲಿ ಅಪಘಾತವಾಗದಂತೆ ತಡೆಯಬಹುದು ಎಂದರು
ಹೆಚ್ಚು ವೇಗವಾಗಿ ಸಂಚರಿಸುವ ರಸ್ತೆಗಳಲ್ಲಿ ಅಡ್ಡ ಬರುವ ರಸ್ತೆಗಳನ್ನ ಸರಿಯಾಗಿ ನಿಯಂತ್ರಿಸದಿದ್ದರೆ, ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತದೆ, ರಸ್ತೆ ಅಪಘಾತಗಳಾದಾಗ ಪಶ್ಚಾತಾಪ ಪಡುವುದಕ್ಕಿಂತ ಈಗಿಲಿಂದಲೇ ನಾವು ಅವುಗಳ ಬಗ್ಗೆ ಗಮನ ಹರಿಸಿ ವೇಗವಾಗಿ ನಿಯಂತ್ರಿಸಬೇಕು ಮತ್ತು ಗ್ರಾಮೀಣ ಜನರು ಸಹ ರಸ್ತೆ ದಾಟುವಾಗ ಎಚ್ಚರಿಕೆಯಿಂದ ದಾಟಬೇಕು ಎಂಬ ಸಂದೇಶವನ್ನ ನೀಡಬೇಕು. ರಾತ್ರಿ ಹೊತ್ತು ಹೆಚ್ಚು ಅಪಘಾತಗಳಾಗುವ ಸಂಭವ ಇರುವುದರಿಂದ, ರಾತ್ರಿ ದೀಪಗಳನ್ನ ಅಳವಡಿಸಿ, ಅಲ್ಲಿ ಮುಂಜಾಗ್ರತ ಕ್ರಮವನ್ನು ವಹಿಸಬೇಕು ಎಂದು ಪತ್ರಿಕ ಪ್ರಕಟಣೆ ಮುಖಾಂತರ ಪೊಲೀಸ್ ಸಂಚಾರಿ ವಿಭಾಗಕ್ಕೆ ಮತ್ತು ಜಿಲ್ಲಾಡಳಿತಕ್ಕೆ ವಿನಂತಿಸಿಕೊಂಡಿದ್ದಾರೆ.
ಕೈಮಾರದ ಬಳಿ ಅಡ್ಡಬಡ್ಡ ಓಡಾಡುವ ವಾಹನಗಳು ಮತ್ತು ವೇಗವಾಗಿ ಸಂಚರಿಸುವ ವಾಹನಗಳನ್ನು ನೋಡಿದಾಗ ಎಂತವರಿಗಾದರೂ ಎದೆ ಜಲ್ಲೆನಿಸುತ್ತದೆ, ಇಷ್ಟು ವೇಗವಾಗಿ ಸಂಚರಿಸುವ ವಾಹನಗಳಿಗೆ ಇಲ್ಲಿ ನಿಯಂತ್ರಣವಿಲ್ಲದೆ ಹೇಗೆ ಜನ ಬದುಕುತ್ತಿದ್ದಾರೆ ಎಂದು ಆಶ್ಚರ್ಯವಾಗುತ್ತದೆ, ಸಂಚಾರಿ ವಿಭಾಗದವರು ಇಲ್ಲಿ ಒಂದಿಷ್ಟು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಮೀಣ ಜನರು, ವಯಸ್ಸಾದವರು, ಮಕ್ಕಳು ಇಲ್ಲಿ ರಸ್ತೆದಾಡುವುದಂತೂ ಅಸಾಧ್ಯವಾದ ಮಾತಾಗಿದೆ, ವೇಗದ ನಿಯಂತ್ರಣವಿಲ್ಲದೆ ಪ್ರಾಥಚಾರಿಗಳು ಸಹ ಅಪಘಾತಕೀಡಾಗುವ ಸಂಭವವಿದೆ, ಹಾಗಾಗಿ ಇದರ ಬಗ್ಗೆ ಹೆಚ್ಚು ಗಮನ ಹರಿಸಿ ಎಂದು ವಿನಂತಿಸಿಕೊಂಡಿದ್ದಾರೆ