ದಾವಣಗೆರೆಯ ನಮನ ಅಕಾಡೆಮಿಯ ವತಿಯಿಂದ ನೃತ್ಯ ದಿನಾಚರಣೆ ಅಂಗವಾಗಿ ನೃತ್ಯಾರ್ಪಣ ಕಾರ್ಯಕ್ರಮ

Namana dance academy

ದಾವಣಗೆರೆ: ಏಪ್ರಿಲ್ 29ರಂದು ವಿಶ್ವದಾದ್ಯಂತ ನೃತ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದರ ಅಂಗವಾಗಿ ದಾವಣಗೆರೆಯ ಹೆಸರಾಂತ ಅಕಾಡೆಮಿಯಾದ ನಮನ ಅಕಾಡೆಮಿಯು ನೃತ್ಯಾರ್ಪಣ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಲಾಕ್ ಡೌನ್ ಸಮಯವಾಗಿದ್ದರಿಂದ ಈ ಕಾರ್ಯಕ್ರಮವನ್ನು ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಸರಳವಾಗಿ ಫೇಸ್ ಬುಕ್ ಲೈವ್ ಮೂಲಕ ಪ್ರಸಾರ ಮಾಡಲಾಯಿತು.

ನಮನ ಅಕಾಡೆಮಿಯ ಕಾರ್ಯದರ್ಶಿಗಳು ಹಾಗೂ ನೃತ್ಯ ಗುರುಗಳಾದ ಗುರು ಶ್ರೀಮತಿ ಮಾಧವಿ ಡಿ ಕೆ ಅವರ ನೇತೃತ್ವದಲ್ಲಿ ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳ ಪ್ರೋತ್ಸಾಹದಿಂದ ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ನೃತ್ಯಾರ್ಪಣ ಕಾರ್ಯಕ್ರಮದ ಉದ್ಘಾಟನೆಯನ್ನು ಕಲಾಪೋಷಕರು, ನಮನ ಅಕಾಡೆಮಿಯ ನಿರ್ದೇಶಕರು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಯುತ ದಿನೇಶ ಕೆ ಶೆಟ್ಟಿಯವರು, ಮಹಾನಗರಪಾಲಿಕೆಯ 38ನೇ ವಾರ್ಡ್ನ ಕಾರ್ಪೊರೇಟರ್ ಆದ ಶ್ರೀಯುತ ಮಂಜುನಾಥ್ ಗಡಿ ಗುಡಾಳ್ ರವರು, ನಮನ ಅಕಾಡೆಮಿಯ ನಿರ್ದೇಶಕರಾದ ಶ್ರೀಯುತ ರಾಮನಾಥ್ ಪಿ ಸಿ, ಶ್ರೀಯುತ ಅನಿಲ್ ಬಾರಂಗಲ್, ಕಾರ್ಯದರ್ಶಿಗಳು ಹಾಗೂ ನೃತ್ಯ ಗುರುಗಳಾದ ಶ್ರೀಮತಿ ಮಾಧವಿ ಡಿ ಕೆ, ಅಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಕೆ ಏನ್ ರವರು ನೆರವೇರಿಸಿದರು.

 

ದಿನೇಶ್ ಕೆ ಶೆಟ್ಟಿಯವರು ಎಲ್ಲಾ ನೃತ್ಯ ಪಟುಗಳಿಗೆ ಶುಭವನ್ನು ಹಾರೈಸುತ್ತಾ ಮಹಾ ಮಾರಿಯ ನಡುವೆಯೂ ಮನಸ್ಸಿಗೆ ಹಿತ ನೀಡುವ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಹೆಚ್ಚಾಗಿದೆ ಇಂತಹ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ನಮನ ಅಕಾಡೆಮಿಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ಮಂಜುನಾಥ್ ಗಡಿ ಗುಡಾಳ್ ರವರು ಮಾತನಾಡಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವ ಅಕಾಡೆಮಿಯು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ಜನರು ಅವರ ಸಂದೇಶವನ್ನು ಅರಿತು ಪ್ರೋತ್ಸಾಹಿಸಬೇಕು ಇಂತಹ ವಿನೂತನ ಕಾರ್ಯಕ್ರಮಕ್ಕೆ ಬಂದಿದ್ದು ಸಂತೋಷವಾಗಿದೆ ಎಲ್ಲರಿಗೂ ಅಂತರಾಷ್ಟ್ರೀಯ ನೃತ್ಯ ದಿನಾಚರಣೆಯ ಶುಭಾಶಯಗಳು ಎಂದು ಹಾರೈಸಿದರು.

ಉದ್ಘಾಟನಾ ಕಾರ್ಯಕ್ರಮದ ನಿರೂಪಣೆಯನ್ನು ಗೋಪಾಲಕೃಷ್ಣ ಅವರು ನಡೆಸಿಕೊಟ್ಟರು. ಅಕಾಡೆಮಿಯ ನೃತ್ಯ ಪಟುಗಳಾದ ಕುಮಾರಿ ಭೂಮಿಕಾ ಎಸ್ ಕಟಾರೆ, ಕುಮಾರಿ ಮನ್ವಿತ ಎ ವಿ, ಕುಮಾರಿ ನೀಲು ಎಸ್ ಅರೋರ್, ಕುಮಾರಿ ಪರಿಣಿಕ ಕೆ ವಿ, ಕುಮಾರಿ ಸಂಜನಾ ಎಸ್, ಕುಮಾರಿ ಯುಕ್ತ ಎಸ್ ಕಟಾರೆ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಚತುರಶ್ರ ಅಲಾರಿಪು, ಸರಸ್ವತಿ ಭಜನ್, ನವಿಲು ನೃತ್ಯ, ಮಹಾಲಕ್ಷ್ಮಿ ಕೌತುವಂ, ತಿಲ್ಲಾನಗಳನ್ನು ಪ್ರಸ್ತುತ ಪಡಿಸಿದರು. ಕೊನೆಯಲ್ಲಿ ಗುರುಗಳಾದ ಮಾಧವಿ ಅವರು ಎಲ್ಲಾ ಪ್ರೇಕ್ಷಕರನ್ನು ಪೋಷಕರನ್ನು ನೃತ್ಯಪಟು ಗಳನ್ನು ವಂದಿಸುವುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ನೃತ್ಯ ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಪ್ರಿಯ ತಿಪ್ಪೇಸ್ವಾಮಿ ಹಾಗೂ ರೋಶನಿ ಪ್ರಕಾಶ್ ಅವರು ನಡೆಸಿಕೊಟ್ಟರು.

Leave a Reply

Your email address will not be published. Required fields are marked *

error: Content is protected !!