Ineternational drug Peddler : ಡ್ರಗ್ಸ್ ಪೆಡ್ಲರ್​ಗಳ ಬಂಧನ ; ಬೆಂಗಳೂರು ಪೊಲೀಸರ  ಮಿಂಚಿನ ಬೇಟೆ

International drug peddler: Arrest of drug peddlers; Bengaluru police lightning hunt

ಬೆಂಗಳೂರು:Ineternational drug Peddler : ರಾಜಧಾನಿ ಬೆಂಗಳೂರು ಪೊಲೀಸರು ಭರ್ಜರಿ ಬೇಟೆಯಾಡಿ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.

ಡ್ರಗ್ ಮಾಫಿಯಾ ಜೊತೆ ಸೇರಿಕೊಂಡು ವಿದೇಶಿಗರ ಹಾವಳಿ ಮಿತಿಮೀರಿದ್ದು, ವೀಸಾ ಅವಧಿ ಮುಗಿದಿದ್ದರೂ ಬೆಂಗಳೂರಲ್ಲಿ ವಾಸಿಸುತ್ತಿದ್ದಾರೆ. ಹಲವರು ಡ್ರಗ್ ದಂಧೆಯ ಸಲುವಾಗಿಯೇ ರಾಜ್ಯದಲ್ಲಿ ಬೇರೂರಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಒಂದಷ್ಟು ಪೆಡ್ಲರ್​ಗಳ ಹೆಡೆಮುರಿ ಕಟ್ಟಿರುವ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಐದು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಆಫ್ರಿಕಾ ಮೂಲದ ಜೊಯಲ್ ಕಾಬೊಂಗ್, ಜೊಯ್ ಸಂಡೇ ಬಂಧಿತ ಪ್ರಜೆಗಳಾಗಿದ್ದು, ಈ ಪೈಕಿ ಜೊಯಲ್ ಕಾಬೊಂಗ್​ 12 ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ. ಆತನ ಜೊತೆ ಜೊಯ್ ಸಂಡೇ ಕೂಡಾ ಹಲವು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದಳು. ವೀಸಾ ಅವಧಿ ಮುಗಿದಿದರೂ ಬೆಂಗಳೂರಲ್ಲಿ ಅಕ್ರಮವಾಗಿ ವಾಸವಾಗಿ ಡ್ರಗ್ಸ್ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೀಮಂತ್ ಕುಮಾರ್ ಸಿಂಗ್ ಖಡಕ್ ಸೂಚನೆ:

ಬೆಂಗಳೂರಿನಲ್ಲಿ ನಡೆಯುತ್ತಿದೆ ಎನ್ನಲಾಗಿರುವ ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟಹಾಕಬೇಕೆಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಬೆಂಗಳೂರಿನಲ್ಲಿ ಪೋಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆಗಸ್ಟ್ 15ರಂದು ಬೆಟ್ಟದಾಮಸಪುರ ಬಳಿ ಡ್ರಗ್ಸ್ ದಂಧೆ ಆರೋಪದಲ್ಲಿ ವಿದೇಶಿ ಪ್ರಜೆಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 2 ಕೆಜಿಗೂ ಹೆಚ್ಚು ಪ್ರಮಾಣದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​ ತಿಳಿಸಿದ್ದಾರೆ.

 

 

 

ಇತ್ತೀಚಿನ ಸುದ್ದಿಗಳು

error: Content is protected !!