ಅಂತರಾಷ್ಟ್ರೀಯ ಸ್ನೇಹಿತರ ದಿನಾಚರಣೆ.! ಬ್ಯಾಂಡ್ ಕಟ್ಟಿ ವಿಶ್ ಮಾಡಿದ ಸ್ನೇಹಿತರು
*ಶಾಲೆಗಳಲ್ಲಿ ಬ್ಯಾಂಡ್ ಕಟ್ಟಿಕೊಂಡು ಸ್ನೇಹಿತರ ದಿನಾಚರಣೆ ಆಚರಿಸಿದ ಮಕ್ಕಳು* ಸ್ನೇಹಿತರ ದಿನ ನಿಮಿತ್ತ ಇಂದು ಹಲವು ಶಾಲೆಗಳಲ್ಲಿ ಸ್ನೇಹಿತರ ದಿನಾಚರಣೆ* ಸುಖ, ದುಖಃ, ಸಂತೋಷ, ನೋವುಗಳಲ್ಲಿ ನಮ್ಮ ಕುಟುಂಬದವರಂತೆ ನಮ್ಮೊಂದಿಗೆ ಇರುವುದು ನಮ್ಮ ಸ್ನೇಹಿತರು.*ಬ್ಯಾಂಡ್ ಕಟ್ಟಿಕೊಂಡು ಸ್ನೇಹಿತರಿಗೆ ಶುಭಾಶಯಕೋರಿದ ವಿದ್ಯಾರ್ಥಿನಿಯರು
ಮಾಯಕೊಂಡ : ಅಂಗಡಿಗೆ ಹೋಗಿ ಬ್ಯಾಂಡ್ ಖರೀದಿಸಿದ ಮಕ್ಕಳು ತಮ್ಮ ಸ್ನೇಹಿತರ ಕೈಗೆ ಬ್ಯಾಂಡ್ ಕಟ್ಟಿ ಹ್ಯಾಪಿ ್ರೇಂಡ್‌ಶಿಪ್ ಡೇ ಎಂದು ಪರಸ್ಪರ ಶುಭಾಶಯ ಕೋರಿದ ದೃಶ್ಯ ಅನೇಕ ಶಾಲಾ, ಕಾಲೇಜುಗಳಲ್ಲಿ ಕಂಡು ಬಂದಿತ್ತುಘಿ. ಅಂತರಾಷ್ಟ್ರೀಯ ಸ್ನೇಹಿತರ ದಿನ ನಿಮಿತ್ತ ಶುಕ್ರವಾರ ಹಲವು ಶಾಲೆಗಳಲ್ಲಿ ಸ್ನೇಹಿತರ ದಿನಾಚರಣೆ ಆಚರಿಸಲಾಯಿತು. ಅಂತೆಯೇ ಸೇಂಟ್ ಜಾಬ್ಸ್ ಶಾಲೆಯಲ್ಲಿಯೂ ವಿದ್ಯಾರ್ಥಿನಿಯರು ಸ್ನೇಹಿತರ ದಿನಾಚರಣೆ ಆಚರಿಸಿದರು. ್ರೆಂಡ್‌ಶ್‌ಿ ಡೇ ಇದೊಂದು ಸುಮಧುರ ಬಾಂಧವ್ಯ. ನಮಗೆ ಯಾವುದೇ ಸಮಸ್ಯೆಯಿದ್ದರೂ ಅದಕ್ಕೊಂದು ಪರಿಹಾರ ನಮ್ಮ ಗೆಳೆಯರ ಬಳಿ ಇರುತ್ತದೆ ಎಂಬ ಬಲವಾದ ನಂಬಿಕೆ. ಸುಖ, ದುಃಖ, ಸಂತೋಷ, ನೋವುಗಳಲ್ಲಿ ನಮ್ಮ ಕುಟುಂಬದವರಂತೆ ನಮ್ಮೊಂದಿಗೆ ಇರುವುದು ನಮ್ಮ ಸ್ನೇಹಿತರು. ಸ್ನೇಹ ಎಂಬ ಒಳ್ಳೆಯ ಬಾಂಧವ್ಯದ ಮಹತ್ವವನ್ನು ಸಾರಲು ಪ್ರತಿ ವರ್ಷ ಜುಲೈ 30 ರಂದು ಅಂತರಾಷ್ಟ್ರೀಯ ಸ್ನೇಹಿತರ ದಿನ ಆಚರಣೆ ಮಾಡಲಾಗುತ್ತದೆ. ಸ್ನೇಹ ಎಂಬ ಬಾಂಧವ್ಯ ಶುದ್ಧ ಸ್ವರೂಪದ್ದಾಗಿದ್ದು ರಕ್ತ ಸಂಬಂಧವಲ್ಲವಾದರು ಪ್ರೀತಿಯಿಂದ ಕೂಡಿದೆ. ಯಾವುದೇ ಜಾತಿ, ಬಣ್ಣ, ಜನಾಂಗ, ಸಂಸ್ಕೃತಿಯ ಬೇಧವಿಲ್ಲದೇ ಸ್ನೇಹದ ಬಲವಾದ ಬಂಧ ಮತ್ತು ಪ್ರೀತಿಯ ಪ್ರಾಮುಖ್ಯತೆಯನ್ನು ಸಾರಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿನಿ ದೀಕ್ಷಾ.
…….