ಭಾಷಣ ಸ್ಪರ್ಧೆಗೆ ಅರ್ಜಿ ಆಹ್ವಾನ

ದಾವಣಗೆರೆ :ನೆಹರು ಯುವ ಕೇಂದ್ರದ ವತಿಯಿಂದ ಜಿಲ್ಲೆಯಲ್ಲಿ 2022-23ನೇ ಸಾಲಿನ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಗೆ ಯುವ ಜನರ ಆಯ್ಕೆ ಕುರಿತು ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ದಾವಣಗೆರೆ ಜಿಲ್ಲೆಯವರಾಗಿದ್ದು, 18 ರಿಂದ 25 ವಯೋಮಾನದವರಾಗಿರಬೇಕು. ಇಂಗ್ಲೀಷ್, ಹಿಂದಿ ಮತ್ತು ಕನ್ನಡ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಸ್ಪರ್ಧೆಯನ್ನು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ವರ್ಚುವಲ್‍ನಲ್ಲಿ ನಡೆಸಲಾಗುವುದು. ರಾಷ್ಟ್ರಮಟ್ಟದ ಸ್ಪರ್ಧೆಯನ್ನು ದೆಹಲಿಯಲ್ಲಿ ನಡೆಸಲಾಗುವುದು.
ಭಾಷಣದ ಸಮಯ 4 ನಿಮಿಷವಾಗಿದ್ದು, ಭಾಷಣದ ವಿಷಯವನ್ನು ಜ.24ರ ನಂತರ ತಿಳಿಸಲಾಗುತ್ತದೆ.
ಆಸಕ್ತ ಯುವಕರು ಜ.26 ರೊಳಗಾಗಿ ಹೆಸರನ್ನು ಜಿಲ್ಲಾ ಯುವ ಅಧಿಕಾರಿಗಳು ನೆಹರು ಯುವ ಕೇಂದ್ರ, ಜಿಲ್ಲಾಧಿಕಾರಿಗಳ ಕಟ್ಟಡ ರೂಂ ನಂ.42, ದಾವಣಗೆರೆ ಈ ವಿಳಾಸದಲ್ಲಿ ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂ. ಸಂ.9901863789ಗೆ ಸಂಪರ್ಕಿಸಲು ಜಿಲ್ಲಾ ಯುವ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.