Brahmin ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವಟುಗಳಿಗೆ ಉಚಿತ ಬ್ರಹ್ಮೋಪದೇಶಕ್ಕೆ ಆಹ್ವಾನ

Invitation to free Brahmopadesha for members of Gowda Saraswat Brahmin Samaj

ದಾವಣಗೆರೆ : Brahmin ವಿಶ್ವಾವಸು ನಾಮ ಸಂವತ್ಸರದ ದಿನಾಂಕ ೦೮-೦೨-೨೦೨೬ನೇ ಭಾನುವಾರ ಮಧ್ಯಾಹ್ನ ೧೨-೪೫ಕ್ಕೆ ಒದಗುವ ಅಭಿಜಿನ್ ಲಗ್ನದಲ್ಲಿಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವಟುಗಳಿಗೆ ಉಚಿತವಾಗಿ ಸಾಮೂಹಿಕ ಬ್ರಹ್ಮೋಪದೇಶವನ್ನು ಹಮ್ಮಿಕೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕಾಶೀ ಮಠಾಧೀಶರಾದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಲಿದೆ.

ಪರಮಪೂಜ್ಯ ಶ್ರೀಮತ್ ಸುಧೀಂದ್ರತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ನಡೆಯಲಿರುವ ಈ ಆಧ್ಯಾತ್ಮ ಧಾರ್ಮಿಕ ಪರಂಪರೆಯ ಅಪರೂಪದ ಸಮಾರಂಭದಲ್ಲಿ ಭಾಗವಹಿಸುವ ವಟುಗಳು ಮತ್ತು ಅವರ ಪೋಷಕರು ದಿನಾಂಕ ೧೫-೧-೨೦೨೬ ರೊಳಗೆ ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಕಛೇರಿಯಲ್ಲಿ ಹೆಸರು ನೊಂದಾಯಿಸಬೇಕಾಗಿ ದಾವಣಗೆರೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ನಿಕಟಪೂರ್ವ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ 9448135950, 9731437628 ಈ ಸನೀಹವಾಣಿಗಳಿಗೆ ಸಂಪರ್ಕಿಸಬಹುದು.

error: Content is protected !!