ಸರಿಗಮಪ ಸ್ಪರ್ಧೆಗೆ ಗಾಯಕರಿಗೆ ಆಹ್ವಾನ

ದಾವಣಗೆರೆ: ಜೀವನದಿ ಟ್ರಸ್ಟ್, ದಾವಣಗೆರೆ ಇವರ ವತಿಯಿಂದ ಗಾಯಕ ಗಾಯಕಿಯರಿಗೆ ಪ್ರೋತ್ಸಾಹಿಸಲು ಸರಿಗಮಪ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 1 ಲಕ್ಷ ರೂ., ದ್ವಿತೀಯ 50, 000, ತೃತೀಯ 25,000, ನಾಲ್ಕು ಮತ್ತು ಐದನೇ ಬಹುಮಾನವಾಗಿ 10,000 ಮತ್ತು 5000 ನೀಡಲಾಗುತ್ತಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ಮೊ: 9844444883, ಮತ್ತು 9738250888 ಗೆ ವಾಟ್ಸಾಪ್ ಮೂಲಕ ತಾವು ಹಾಡಿರುವ ಹಾಡನ್ನು (ವೀಡಿಯೋ ಅಥವಾ ಆಡಿಯೋ) ಮಾಡಿ ಕಳುಹಿಸುವುದರ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿರುತ್ತದೆ. ಸ್ಪರ್ಧೆಯ ಕಾರ್ಯಕ್ರಮದ ದಿನಾಂಕವನ್ನು ನೀವು ಕಳುಹಿಸುವ ವಾಟ್ಸಾಪ್ ನಂಬರ್ ಮೂಲಕ ತಿಳಿಸಲಾಗುವುದು ಎಂದು ಟ್ರಸ್ಟ್ ನ ವಿ.ಟಿ. ರವೀಂದ್ರ ತಿಳಿಸಿದ್ದಾರೆ