ವಿವಿಧ ಯೋಜನೆಗಳಿಗೆ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನ.
ದಾವಣಗೆರೆ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮವು 2021-22 ಪರಿಶಿಷ್ಟ ಪಂಗಡದ ಅಲೆಮಾರಿ ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳಿಗೆ, ದೌರ್ಜನ್ಯ ಸಂತಸ್ತರಿಗೆ, ಮಾಜಿ ದೇವದಾಸಿಯರಿಗೆ, ಅಂತರ್ಜಾತಿ ವಿವಾಹಿತ ದಂಪತಿಗಳಿಗೆ, ವಿಧೆವೆಯರು/ ಒಂಟಿ ಮಹಿಳೆಯರು, ಮೀನುಗಾರರಿಗೆ, ವಸತಿ ರಹಿತ ನಿವೇಶನ (ಸೈಟ್) ಹೊಂದಿದ ಫಲಾಪೇಕ್ಷಿಗಳಿಗೆ ಮನೆ ನಿರ್ಮಿಸಿ ಕೊಡಲು ವಸತಿ ನಿರ್ಮಾಣ ಯೋಜನೆಯಡಿ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಗಮದ ಜಿಲ್ಲಾ ಕಛೇರಿಯಲ್ಲಿ ಆಫ್‍ಲೈನ್ ಅರ್ಜಿ ಸಲ್ಲಿಸಲು ಫೆ. 25 ಕೊನೆಯ ದಿನಾಂಕವಾಗಿರುತ್ತದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆ. 28 ಕೊನೆಯ ದಿನವಾಗಿರುತ್ತದೆ.
ವಿವಿಧ ಯೋಜನೆಗಳಿಗೆ ಸೌಲಭ್ಯ ಪಡೆಯಲು ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ ಸಮುದಾಯಕ್ಕೆ ಸೇರಿದವರಾಗಿಬೇಕು ಹಾಗೂ ಕಳೆದ ಕನಿಷ್ಠ 5 ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ವಯೋಮಿತಿ 18 ರಿಂದ 60 ವರ್ಷದೊ¼ಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ.98,000/- ಹಾಗೂ ನಗರ ಪ್ರದೇಶದವರಿಗೆ ರೂ.120,000/- ಮಿತಿಯೊಳಗಿರಬೇಕು. ಕುಟಂಬದ ಯಾವುದೇ ಸದಸ್ಯರು ಸರ್ಕಾರಿ ಅರೆ ಸರ್ಕಾರ ಸಂಸ್ಥೆಯ ನೌಕರಿಯಲ್ಲರಬಾರದು. ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು. ಜಿಲ್ಲೆಯಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಈಗಾಗಲೇ ನೊಂದಣಿ ಮಾಡಿಕೊಂಡಿರುವ ಪರಿಶಿಷ್ಟ ಪಂಗಡದ ಅಂಗವಿಕಲ ಫಲಾನುಭವಿಗಳ ಲಭ್ಯವಿರುವ ಪಟ್ಟಿಯಿಂದ ಅಂಗವಿಕಲರನ್ನು ನೇರವಾಗಿ ಸಂದರ್ಶನ ಮಾಡಿ ಸೌಲಭ್ಯ ಕಲ್ಪಿಸಲಾಗುವುದು.
ಅರ್ಜಿಯೊಂದಿಗೆ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವ ಚಿತ್ರ, ಜಾತಿ ಪ್ರಮಾಣ ಪತ್ರ, ಕುಟುಂಬದ ವಾರ್ಷಿಕ ವರಮಾನ ಪತ್ರ, ಪಡಿತರ ಚೀಟಿ / ಮತದಾರರ ಗುರುತಿನ ಚೀಟ/ ಆಧಾರ್ ಕಾರ್ಡ್‍ನ ಪ್ರತಿ, ಅರ್ಜಿದಾರರು ಹೊಂದಿರುವ ಬ್ಯಾಂಕ್ ಉಳಿತಾಯ ಖಾತೆಯ ಪ್ರತಿ. ನಿರಾಪೇಕ್ಷಣಾ ಪತ್ರ, ಖಾತೆ, ಸೈಟ್/ನಿವೇಶನಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ, ಶ್ರೀ. ಬೀರಲಿಂಗೇಶ್ವರ ಕುರುಬರ ಹಾಸ್ಟೆಲ್, ಜಯದೇವ ಸರ್ಕಲ್ (ಹದಡಿರಸ್ತೆ) ದಾವಣಗೆ ಜಿಲ್ಲಾ ಕಛೇರಿಯನ್ನು ದೂರವಾಣಿ ಸಂಖ್ಯೆ-08192-233309 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.