ಇಸಮುದ್ರದಲ್ಲಿ ಭೀಕರ ಕೃತ್ಯ: ಅತ್ಯಾಚಾರ ಎಸಗಿ ಹತ್ಯೆ: ಆರೋಪಿ ಬಂಧನಕ್ಕೆ ಒತ್ತಾಯ.

ಚಿತ್ರದುರ್ಗ : ತಾಲ್ಲೂಕಿನ, ಭರಮಸಾಗರ,ಹೋಬಳಿ ಇಸಮುದ್ರ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿ ಶಶಿಕಲಾ (13) ಅವರ ಮೇಲೆ ಅಮಾನವೀಯವಾಗಿ. ದೃಷ್ಕೃತ್ಯ ಎಸಗಿರುವ ಆರೋಪಿ
ಹಾಡುಹಗಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಭೀಕರ ಘಟನೆ ಶುಕ್ರವಾರ ದಿನಾಂಕ 23-7-2021 ರಂದು ಊರಿನ ಪಕ್ಕದ ಜಮೀನಿನಲ್ಲಿ ನಡೆದಿದೆ.
ಎಂತಹ ಅಮಾನವೀಯ ಕೃತ್ಯವೆಂದರೆ ಇಂತಹ ಘಟನೆಗಳನ್ನು ದೂರದ ಉತ್ತರ ಪ್ರದೇಶನೋ, ಬಿಹಾರನೋ ಅಂದುಕೊಂಡಿದ್ವಿ. ಆದರೆ ನಮ್ಮದೇ ತಾಲ್ಲೂಕಿನಲ್ಲಿ ನಡೆದಿರುವುದು ನೋಡಿದರೆ.
ಎಂತಹವರ ಹೃದಯವೂ ಛಿದ್ರ, ಛಿದ್ರವಾಗುತ್ತದೆ.
ಗ್ರಾಮದಿಂದ ಕೂಗಳತೇ ದೂರ ಅಷ್ಟೇ,ಅಷ್ಟೇನೂ ಬೆಳೆಯದ ಮೆಕ್ಕೆಜೋಳ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮೃತ್ಯಪಾಶವಾಗಿದ್ದು.ಇಡೀ ಗ್ರಾಮವೇ ತಲೆತಗ್ಗಿಸುವ ವಿಚಾರ!
ಶಶಿಕಲಾಗೆ ಇನ್ನೂ ಕೇವಲ 13 ವರ್ಷ,ಆಕೆಯ ತಂಗಿಗೇ ಇನ್ನೂ ಚಿಕ್ಕವಯಸ್ಸು.ಆದರೆ ಶಶಿಕಲಾ ಪ್ರಾರ್ಥಮಿಕ ಶಾಲೆಯಲ್ಲಿ ಡ್ಯಾನ್ಸ್,ಹಾಡು,ಟೀಕ್,ಟಾಕ್,ತುಂಬಾ ಕಿರಿಯ ವಯಸ್ಸಿನ ಶಶಿಕಲಾ ಪ್ರಶಸ್ತಿ,ಪುರಸ್ಕಾರ ಪಡೆದುಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿನಿ ಆಕೆಗೆ ಟ್ಯೂಷನ್ ಹೇಳಿಕೊಟ್ಟು ಆಗ್ಗಾಗ್ಗೆ ಬುದ್ದಿವಾದ ಹೇಳುತ್ತಿದ್ದ ಹೃೆಸೂಲ್ಕ್ ಶಿಕ್ಷಕ ಹಾಲೇಶಪ್ಪ ಅವರು ಭಾರವಾದ ಮನಸ್ಸು ತುಂಬ ನೋವು ತುಂಬಿಕೊಂಡೇ ಮಾತನಾಡುತ್ತಿದ್ದರು. ಅತ್ಯಾಚಾರ ಮತ್ತು ಹತ್ಯೆಗೀಡಾದ ಶಶಿಕಲಾ ತಂದೆ,ತಾಯಿಯ ನೋವಂತು ಹೇಳತೀರದಾಗಿತ್ತು.
ಬಯಲು ಬಹಿರ್ದೆಸೆಯೇ ಮೃತ್ಯುಗೆ ಕಾರಣವಾಯಿತೆ ?
ನಿರಂತರವಾಗಿ ಬರುತ್ತಿದ್ದ ಮಳೆಯಿಂದಾಗಿ ಶೌಚಾಲಯವಿಲ್ಲದ ಮನೆಯಾದರಿಂದ ಬಹಿರ್ದೆಸೆಗೆ ಬಯಲನ್ನೇ ಅಶ್ರಯಿಸಬೇಕಾಗಿತ್ತು. ಮಧ್ಯಾಹ್ನವಾಗಿತ್ತು.ಮಳೆ ಬರ್ತಾಯಿತ್ತು. ಬಯಲು ಬಹಿರ್ದೆಸೆಗೆ ಹೋದ ಬಾಲಕಿ ಶಶಿಕಲಾ ಬಹಳ ಹೋತ್ತಾದರೂ ಬಾರದೆ ಇರುವುದರಿಂದ ಅಸ್ಪತ್ರೆಯಿಂದ ಬಂದ ತಾಯಿ,ತಂದೆ ಮಗಳನ್ನು ಹುಡುಕಿ ಮೆಕ್ಕೆಜೋಳದ ಜಮೀನು ಕಡೆ ಹೋದಾಗ.ಅಲ್ಲಿ ನೋಡಿದರೆ ಹೆತ್ತ ತಾಯಿಯ ಹೃದಯವೇ ಕಿತ್ತು ಬರುವಂತಹ ದೃಶ್ಯ ತಾಯಿ ಬಾಯಿ,ಬಾಯಿ ಬಡಿದುಕೊಂಡರು ಸಾವಿನದವಡೆಗೆ ಹೋದ ಮಗಳನ್ನು ಕಂಡು ಅಳಲು ಆರಂಭಿಸಿ ಜನರನ್ನು ಕೂಗಿ ಕರೆದರು. ಮೃತಪಟ್ಟಿದ್ದ ಮಗಳು ವಾಪಸು ಬರಲು ಸಾಧ್ಯವೇ ?ಹೇಗೆ ಸಾಧ್ಯ ಹೇಳಿ?
ಶಶಿಕಲಾ ಮೇಲೆ ನಡೆದಿರುವ ಅಮಾನವೀಯ ಅತ್ಯಾಚಾರ ಮತ್ತು ಭೀಕರ ಕೊಲೆಯಂತಹ ಘಟನೆಗಳು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತಕದ ವಾತಾವರಣ ನಿರ್ಮಾಣ ಮಾಡುತ್ತಿವೆ ಅದಾಗ್ಯೂ ಪೋಲಿಸ್ ಇಲಾಖೆ, ಅವರದೇ ಆದ ಕಾರ್ಯದಲ್ಲಿ ತೋಡಗಿಸಿಕೊಂಡು ಆರೋಪಿಯನ್ನು.ಬಂಧಿಸಲು ತಲಾಷ ನಡೆಸಿದ್ದರು?
ಚಿತ್ರ ಡಾನ್ ಬಾಸ್ಕೋ ಸಂಸ್ಥೆಯ ಕಳಕಳಿ ?
ಅತ್ಯಾಚಾರ ಮತ್ತು ಹತ್ಯೆಗೀಡಾದ ಶಶಿಕಲಾ ಅಪ್ರಾಪ್ತ ವಯಸ್ಸಿನ ಬಾಲಕಿಯ ಕುಟುಂಬಕ್ಕೆ ಭೇಟಿ ಮಾಡಿ ಸಾಂತ್ವಾನ ಹೇಳಿದರು ನ್ಯಾಯಕ್ಕಾಗಿ ಹೋರಾಟ ನಡೆಸುವ ಮಾತುಗಳನ್ನಾಡಿದರು.
ಚಿತ್ರಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕರಾದ ಫಾದರ್ ಜೋಸೆಫ್,ಶ್ರೀಮತಿ ವೀಣಾ,ಮಂಜುನಾಥ್,ಮಹಾಂತೇಶ್,ಬೋಮ್ಮಣ್ಣ, ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆಯ ಅಧ್ಯಕ್ಷರಾದ ನರೇನಹಳ್ಳಿ ಅರುಣ್ ಕುಮಾರ್ ಮುಂತಾದವರು ಹಾಜರಿದ್ದರು