ಇಷ್ಟರಲ್ಲಿಯೇ ಸಂಪುಟ ವಿಸ್ತರಣೆ ಆಗಲಿದೆ ಎಂಬ ನಿರೀಕ್ಷೆ ಇದೆ – ಸುಳಿವು ನೀಡಿದ ಬಿ ಎಸ್ ವೈ

ದಾವಣಗೆರೆ: ಸಿದ್ದು ಸೊಕ್ಕಿಗೆ, ಧಿಮಾಕಿನ ಮಾತಿಗೆ ಚುನಾವಣಾ ಫಲಿತಾಂಶ ಉತ್ತರ ನೀಡಲಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕುಟುಕಿದರು.
ಚಿತ್ರದುರ್ಗ-ದಾವಣಗೆರೆ ಕ್ಷೇತ್ರದ ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ ನವೀನ್ ಪರ ದಾವಣಗೆರೆ ತಾಲೂಕಿನ ಆನಗೋಡ ಗ್ರಾಮದಲ್ಲಿ ಪ್ರಚಾರದಲ್ಲಿ ಭಾಗಿಯಾಗದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಜೆಡಿಎಸ್ ಗೆ ಬಿಜೆಪಿ ಬಿ ಟೀಮ್ ಎನ್ನುತ್ತಾರೆ. ಮೈಸೂರಿನಲ್ಲಿಯೇ ಸೋತ ಸಿದ್ದರಾಮಯ್ಯ ಹೀಗೆ ಮಾತಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಪಕ್ಷದ ನಾಯಕ ಎನ್ನುವುದನ್ನು ಮರೆತು ಬೇಕಾ ಬಿಟ್ಟಿ ಮಾತಾಡುತ್ತಿದ್ದಾರೆ.ಇವರ ಸೊಕ್ಕಿನ ಧಿಮಾಕಿನ ಮಾತುಗಳಿಗೆ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಉತ್ತರವಾಗಲಿದೆ ಎಂದರು.ಈಗಾಗಲೇ ನಾನು ಬಹಿರಂಗವಾಗಿಯೇ ಹೇಳಿರುವೆ. ಕುಮಾರಸ್ವಾಮಿ ಅವರೊಂದಿಗೆ ಮಾತಾಡಿರುವೆ. ಎಲ್ಲಿ ಜೆಡಿಎಸ್ ಅಭ್ಯರ್ಥಿ ಗಳು ಇಲ್ಲಾ ಅಲ್ಲಿ ಬಿಜೆಪಿಗೆ ಸಹಕಾರ ಎಂದಿರುವೆ. ನೂರಕ್ಕೆ ನೂರು ಸಹಕಾರ ನೀಡುತ್ತಾರೆ ಎಂದರು.
ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಉತ್ತರಿಸಲಿದ್ದಾರೆ. ನನಗೂ ಇಷ್ಟರಲ್ಲಿಯೇ ಸಂಪುಟ ವಿಸ್ತರಣೆ ಆಗಲಿದೆ ಎಂಬ ನಿರೀಕ್ಷೆ ಇದೆ ಎಂದು ಬಿಎಸ್ ವೂ ಸುಳಿವು ನೀಡಿದರು. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ದೇವೇಗೌಡರು ಆತ್ಮೀಯವಾಗಿ ಭೇಟಿ ಆಗಿದ್ದಾರೆ. ಇದಕ್ಕೂ ಚುನಾವಣೆ ಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.