10 ನೇ ತರಗತಿ ಹಾಗೂ ಐಟಿಐ ಪಾಸಾದವರಿಗೆ ಉಚಿತ ತರಬೇತಿ.! ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

ದಾವಣಗೆರೆ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಹರಿಹರದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಯಡಿಯಲ್ಲಿ
2021-22 ನೇ ಸಾಲಿನ ತಂತ್ರಜ್ಞಾನ ತರಬೇತಿಗಳ ಸಂಸ್ಥೆಗಳಿಗೆ ನೆರವು ಯೋಜನೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ( SCP – TSP ) ಮೂಲಕ 16 ರಿಂದ 45 ವರ್ಷದೊಳಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ / ಯುವತಿಯರಿಗಾಗಿ ಉದ್ಯೋಗಾವಕಾಶ ಕಲ್ಪಿಸಲು ಎಸ್.ಎಸ್.ಎಲ್.ಸಿ. / ಐ.ಟಿ.ಐ ಅವಧಿಯ ಟೂಲ್ ರೂಮ್ ಮಷಿನಿಸ್ಟ್ ಪಾಸ್ ಆಗಿರುವ ಅಭ್ಯರ್ಥಿಗಳಿಗೆ 12 ತಿಂಗಳು ತರಬೇತಿ ಕಾರ್ಯಕ್ರಮಗಳನ್ನು ಉಚಿತವಾಗಿ ನಡೆಸಲಾಗುವುದು
ತರಬೇತಿಯ ಅವಧಿಗೆ ಶಿಷ್ಯವೇತನ ನೀಡಲಾಗುವುದು . ಈ ತರಬೇತಿ ಮುಗಿದ ನಂತರ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಲಾಗುವುದು .
ಅರ್ಜಿ ಸಲ್ಲಿಸಲು ಆಸಕ್ತ ಅರ್ಹ ಅಭ್ಯರ್ಥಿಗಳು SSLC ಅಂಕಪಟ್ಟಿ , ವಿದ್ಯಾಭ್ಯಾಸ ಪ್ರಮಾಣ ಪತ್ರ , ಜಾತಿ ಮತ್ತು ಆದಾಯ ಪ್ರಮಾಣ ಪತ್ರ , ಆಧಾರ್ , ರೇಷನ್ ಕಾರ್ಡ್ , ಬ್ಯಾಂಕ್ ಪಾಸ್ ಬುಕ್ , ಭಾವಚಿತ್ರ , ಇವುಗಳ ನಕಲು ಪ್ರತಿಯೊಂದಿಗೆ ಕೇಂದ್ರಕ್ಕೆ ಭೇಟಿನೀಡತಕ್ಕದ್ದು ,
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ , ಪ್ರಾಂಶುಪಾಲರು , ಜಿ.ಟಿ.ಟಿ.ಸಿ , 22 C & D KIADB , ಇಂಡಸ್ಟ್ರಿಯಲ್ ಏರಿಯ ಹರ್ಲಾಪುರ , KSRTC ಡಿಪೋ ಹತ್ತಿರ , ಹರಿಹರ , ಪೋನ್ : 08192-243937 , 9916908111 8884488202 . 8711913947 , ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 10.11.2021