ಜಗಳೂರು: ಅಲೆಮಾರಿ ಕುಟುಂಬಕ್ಕೆ ತಾಡಪಾಲ್, ನಗದುಹಣ ವಿತರಿಸಿದ ಎಸ್.ವಿ ರಾಮಚಂದ್ರಪ್ಪ

ದಾವಣಗೆರೆ: ಹಾನಿಗೊಳಗಾದ ಅಲೆಮಾರಿ ಕುಟುಂಬಕ್ಕೆ ತಾಡಪಾಲ್ ಹಾಗೂ ನಗದು ಹಣ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ನಗದು ಪ್ರೋತ್ಸಾಹಧನ ನೀಡುವ ಮೂಲಕ ಶಾಸಕ ಎಸ್.ವಿ ರಾಮಚಂದ್ರಪ್ಪ ಭರವಸೆ ನೀಡಿದರು.
ಜಗಳೂರು ಪಟ್ಟಣದ ಅಶ್ವತ್ಥರೆಡ್ಡಿ ನಗರದ ಬಳಿ ಮಳೆಗಾಳಿಗೆ ಹಾನಿಗೊಳಗಾದ ಅಲೆಮಾರಿ ಕುಟುಂಬಗಳಿಗೆ ತಾಡಪಾಲ್ ಹಾಗೂ ನಗದು ಹಣ ವಿತರಿಸಿದರು. ನಂತರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನಗದು ಪ್ರೊತ್ಸಾಹಧನ ನೀಡಿದರು.