ಜಗಳೂರು: ಕೈಗಾರಿಕಾಸಕ್ತರಿಂದ ನಿವೇಶನ ಬೇಡಿಕೆ ಸಮೀಕ್ಷೆಗೆ ಅರ್ಜಿ ಆಹ್ವಾನ

ದಾವಣಗೆರೆ: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದಿಂದ ಜಿಲ್ಲೆಯ ಜಗಳೂರು ತಾಲ್ಲೂಕಿನ ಬಗ್ಗೇನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಕೈಗಾರಿಕಾ ವಸಾಹತು ಅಭಿವೃದ್ಧಿಪಡಿಸಲು 9.36 ಎಕರೆ ಜಮೀನು ಹಂಚಿಕೆ ಮಾಡಿದ್ದು, ಜಗಳೂರು ತಾಲ್ಲೂಕಿನಲ್ಲಿ ಭಾವಿ ಕೈಗಾರಿಕೋದ್ಯಮಿಗಳು, ಉದ್ಯಮಿದಾರರಿಂದ ನಿವೇಶನಗಳ ಬೇಡಿಕೆ ಸಮೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಬಗ್ಗೇನಹಳ್ಳಿ ಗ್ರಾಮದ ಬಳಿ ಹೊಸದಾಗಿ ಕೈಗಾರಿಕಾ ವಸಾಹತು ಅಭಿವೃದ್ಧಿಪಡಿಸಲು ರಿ.ಸರ್ವೆ ನಂ. 13 ರಲ್ಲಿ 9.36 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಹಂಚಿಕೆ ಮಾಡಿದ್ದು, ಆಸಕ್ತ ಕೈಗಾರಿಕೋದ್ಯಮಿಗಳು, ಉದ್ಯಮಿದಾರರು ಬಿಳಿ ಹಾಳೆಯ ಮೇಲೆ ಲಿಖಿತವಾಗಿ ತಮ್ಮ ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಉದ್ದೇಶಿತ ಯೋಜನೆಯ ವಿವರ, ಯೋಜನೆಗೆ ಅಗತ್ಯವಿರುವ ಕೈಗಾರಿಕಾ ನಿವೇಶನದ ಅಳತೆ, ಅವಶ್ಯಕ ವಿದ್ಯುತ್ ಮುಂತಾದ ಸಂಪೂರ್ಣ ಮಾಹಿತಿ ವಿವರಗಳೊಂದಿಗೆ 5000 ರೂ. ಗಳ ಬೇಡಿಕೆ ಸಮೀಕ್ಷೆ ಇಎಂಡಿ ಯನ್ನು ಕೆಎಸ್‌ಎಸ್‌ಐಡಿಸಿ ಲಿಮಿಟೆಡ್, ದಾವಣಗೆರೆ ಇವರಿಗೆ ಪಾವತಿಯಾಗುವಂತೆ ಡಿ.ಡಿ. ಯನ್ನು ಆಗಸ್ಟ್ 31 ರ ಒಳಗಾಗಿ ಸಲ್ಲಿಸಬೇಕು.
ಕೈಗಾರಿಕಾ ನಿವೇಶನಗಳ ಬೇಡಿಕೆ ಸಮೀಕ್ಷೆಗಾಗಿ ಮಾತ್ರ ಈ ಪ್ರಕಟಣೆ ಹೊರಡಿಸಲಾಗಿದ್ದು, ಬೇಡಿಕೆಗೆ ಅನುಗುಣವಾಗಿ ವಿವಿಧ ಅಳತೆಯ ನಿವೇಶನಗಳ ಅಭಿವೃದ್ಧಿ ಆರ್ಯ ಕೈಗೊಳ್ಳಲಾಗುವುದು. ಹಾಗೂ ನಂತರದಲ್ಲಿ ನಿವೇಶನಗಳ ಹಂಚಿಕೆಗಾಗಿ ಪ್ರತ್ಯೇಕವಾಗಿ ಪ್ರಕಟಣೆ ಹೊರಡಿಸಲಾಗುವುದು.
ಹೆಚ್ಚಿನ ಮಾಹಿತಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ದಾವಣಗೆರೆ ಅಥವಾ ಕೆಎಸ್‌ಎಸ್‌ಐಡಿಸಿ, ದಾವಣಗೆರೆ ಕಚೇರಿ ಅಥವಾ ಮೊಬೈಲ್ ಸಂಖ್ಯೆ 8884415790, ದೂ.ಸಂ.08192-262466 ಕ್ಕೆ ಸಂಪರ್ಕಿಸಬಹುದು ಎಂದು ಜಂಟಿನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.