ಜಗಳೂರು : ಪಟ್ಟಣದ ಸಮೀಪದ ಚಿನ್ನು ಡಾಬಾದ ಬಳಿ ಅಪಘಾತದಲ್ಲಿ ಎಎಸ್‌ಐ ಸಾವು
ಜಗಳೂರು : ಜಗಳೂರು ಪಟ್ಟಣದ ಸಮೀಪದ ಚಿನ್ನು ಡಾಬಾದ ಬಳಿ ಶನಿವಾರ ಬೆಳಗ್ಗೆ ಹೊಸಪೇಟೆ ಜಿಲ್ಲೆ ಹಂಪಿ ನಿವಾಸಿ ಶಬೀರ್ ಹುಸೇನ್ (59) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರು ಕೊಟ್ಟೂರಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಹಿನ್ನೆಲೆ ಕರ್ತವ್ಯದಲ್ಲಿದ್ದರು. ಶನಿವಾರ ಬೆಳಗ್ಗೆ ಚಿತ್ರದುರ್ಗದಲ್ಲಿರುವ ತನ್ನ ಮಗಳ ಮನೆಗೆ ಹೊರಟ್ಟಿದ್ದಾರೆ. ಹೀಗಿರುವಾಗ ಜಗಳೂರು ಪಟ್ಟಣದ ಚಳ್ಳಕೆರೆ ಬೈಪಾಸ್ ರಸ್ತೆಯಲ್ಲಿ ಎದುರಿಗೆ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಇವರು ತಲೆಗೆ ಹೆಲ್ಮೆಟ್ ಹಾಕಿದ್ದರು ಕೂಡ ತಲೆಗೆ ತೀವ್ರ ಹೊಡೆತ ಬಿದ್ದಿದ್ದು ಮೃತಪಟ್ಟಿದ್ದಾರೆ. ಇನ್ನೊಂದು ಬೈಕ್‌ನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.