ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಸಿಹಿ ಹಂಚಿ ಸಂಭ್ರಮಿಸಿದ ಜಗಳೂರು ಬಿಜೆಪಿ

ಜಗಳೂರು ಬಿಜೆಪಿ
ದಾವಣಗೆರೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ ಘೋಷಿಸಿದ್ದರ ಹಿನ್ನೆಲೆಯಲ್ಲಿ ಜಗಳೂರು ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕೇಂದ್ರ ಸರ್ಕಾರವು 5300 ಕೋಟಿ ರೂ. ಅನುದಾನ ನೀಡಿರುವುದು ಬರ ಪೀಡಿತ ಕ್ಷೇತ್ರದ ಜನರಿಗೆ ಸಂತಸ ಉಂಟು ಮಾಡಿದೆ ಎಂದು ಕಾರ್ಯಕರ್ತರು ಇಲ್ಲಿನ ಗಾಂಧಿ ವೃತ್ತದಲ್ಲಿ ಸಂಭ್ರಮಿಸಿ, ಪ್ರಧಾನಿಗೆ ಅಭಿನಂದಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ. ನಾಗಪ್ಪ, ಮಾಜಿ ಪ್ರಧಾನ ಕಾರ್ಯದರ್ಶಿ ಜೆ.ವಿ.ನಾಗರಾಜ್, ಆರ್.ತಿಪ್ಪೇಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ವಿಶಾಲಾಕ್ಷಿ ಓಬಳೇಶ್, ಸದಸ್ಯರಾದ ಪಾಪಲಿಂಗಪ್ಪ, ಕಾಯಿ ರೇವಣ್ಣ, ನವೀನ್ ಕುಮಾರ್, ಬಿ.ಪಿ. ಸುಭಾನ್, ರುದ್ರಮುನಿ, ಪಕ್ಷದ ಮುಖಂಡರಾದ ಲಲಿತಮ್ಮ ಶಿವಣ್ಣ, ಕೆ.ಟಿ. ಬಡಯ್ಯ, ರಾಜೇಶ್, ಕಿರಣ್, ಮಹೇಶ್, ರಮೇಶ್, ಓಬಣ್ಣ, ನಾಗರಾಜ್ ಮುಂತಾದವರು ಭಾಗವಹಿಸಿದ್ದರು.