Jain College: ಜೈನ್ ತಾಂತ್ರಿಕ ಮಹಾವಿಧ್ಯಾಲಯದಲ್ಲಿ ಇಂಜಿನಿಯರ್ಸ್ ಡೇ ಆಚರಣೆ

Engineers Day celebration at Jain Technical University

ದಾವಣಗೆರೆ: (Jain College) ಜೈನ್ ಕಾಲೇಜಿನ ಸಿವಿಲ್ ಇಂಜಿನಿಯರಿAಗ್ ವಿಭಾಗದಲ್ಲಿ ಇಂಜಿನಿಯರ್ಸ್ ಡೇ 2025 ಕಾರ್ಯಕ್ರಮವನ್ನು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥವಾಗಿ ಕಾಲೇಜು ಸಭಾಂಗಣದಲ್ಲಿ ಭವ್ಯವಾಗಿ ಆಚರಿಸಲಾಯಿತು.

ವಿಭಾಗದ ಮುಖ್ಯಸ್ಥರಾದ ಡಾ. ರಾಹುಲ್ ಪಾಟೀಲ್ ಅವರು ಸರ್ ಎಂ.ವಿ. ಅವರ ನಿಖರ ಸಮಯ ಪಾಲನೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಡಾ. ಪ್ರಕಾಶ್ ಕೆ. ಬಿ., ಅಕಾಡೆಮಿಕ್ ಡೀನ್ ಅವರು ಸರ್ ಎಂ.ವಿ. ಅವರ ದೇಶ ನಿರ್ಮಾಣಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ವಿವರಿಸಿ, ಮೈಸೂರಿನ ಅನೇಕ ಮನೆಗಳಲ್ಲಿ ಇಂದಿಗೂ ಅವರ ಚಿತ್ರವನ್ನು ಪೂಜಾ ಕೊಠಡಿಯಲ್ಲಿ ಪೂಜಿಸುತ್ತಾರೆ ಎಂಬುದನ್ನು ಹಂಚಿಕೊAಡರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಂಜಿನೀಯರ್ ಅಭಿಷೇಕ್ ಕೆ. ಆರ್., ಕಾರ್ಯನಿರ್ವಾಹಕ ಇಂಜಿನಿಯರ್, ನಗರ ಪಾಲಿಕೆ ದಾವಣಗೆರೆ, ಅವರು ಸರ ಎಂ.ವಿ. ಅವರ ಸಮಯ ಪಾಲನೆಗೆ ಸಂಬAಧಿಸಿದ ಹಲವು ಉದಾಹರಣೆಗಳನ್ನು ನೀಡಿದರು ಮತ್ತು ಅವರ ಕೆಲಸದ ಅಪ್ರತಿಮ ನಿಷ್ಠೆಯನ್ನು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಹೇಳಿದರು.

ಡಾ. ಮಂಜಪ್ಪ ಸಾರಥಿ, ಸಲಹೆಗಾರರು, ಸರ್ ಎಂ.ವಿ. ಅವರು ನೀರಾವರಿ, ಅಣೆಕಟ್ಟುಗಳು ಮತ್ತು ಕೈಗಾರಿಕಾ ಅಭಿವೃದ್ಧಿ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿ, ಅವರ ಕಾಲನಿಷ್ಠೆಯ ಮಹತ್ವವನ್ನು ಒತ್ತಿ ಹೇಳಿದರು. ಡಾ. ಗಣೇಶ್ ಡಿ. ಬಿ., ಪ್ರಾಂಶುಪಾಲರು, ಸರ್ ಎಂ.ವಿ. ಅವರ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿ, ಅವರು ಜೀವನದಲ್ಲಿ ಅನುಸರಿಸಬೇಕಾದ ಮಾದರಿ ವ್ಯಕ್ತಿತ್ವವಾಗಿದ್ದಾರೆಂದು ಹೇಳಿದರು. ಕೊನೆಗೆ ಕಾರ್ಯಕ್ರಮದ ಸಂಯೋಜಕರಾದ ಶ್ರಿ. ಭರತ್ ಎಚ್. ಎಂ. ಅವರು ಕೃತಜ್ಞತಾ ಭಾಷಣ ಮಾಡುತ್ತಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕರಿಸಿದ ಎಲ್ಲಾ ಗಣ್ಯರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಇತ್ತೀಚಿನ ಸುದ್ದಿಗಳು

error: Content is protected !!