Jain: ಜಾಗತಿಕ ಮಟ್ಟದ ಶಿಕ್ಷಣಾಭಿವೃದ್ಧಿಗೆ ವೇದಿಕೆ- ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದಾವಣಗೆರೆಯಲ್ಲಿ ಅಂತರರಾಷ್ಟ್ರೀಯ ಫ್ಯಾಕಲ್ಟಿ ಡೆವಲಪ್‌ಟ್ ಪ್ರೋಗ್ರಾಂ

int2

ದಾವಣಗೆರೆ:( Jain) ನಗರದಲ್ಲಿ ಜಾಗತಿಕ ಮಟ್ಟದ ಶಿಕ್ಷಣಾಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (JIT), ದಾವಣಗೆರೆ ಹಾಗೂ ಫ್ಯೂಟ್ರೆಡ್ ಇನೋವೇಶನ್ ಸ್ಟುಡಿಯೋಸ್ (Futred Innovation Studios) ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಅಂತರರಾಷ್ಟ್ರೀಯ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ (FDP) ಅಕ್ಟೋಬರ್ 10, 2025 ರಂದು ಜೆಐಟಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಸ್ಟ್ರೇಲಿಯಾದ ಎಮೆರಿಟಸ್ ಪ್ರೊಫೆಸರ್ ಮೈಕೆಲ್ ಕ್ಲೆಮೆಂಟ್ಸ್ ಮತ್ತು ಡಾ. ಮನೀಷ್ ಮಲ್ಹೋತ್ರಾ, ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ, ಫ್ಯೂಟ್ರೆಡ್ ಇನೋವೇಶನ್ ಸ್ಟುಡಿಯೋಸ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣೇಶ್ ಡಿ. ಬಿ. ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಡಾ. ಮಂಜಪ್ಪ ಎಸ್. ಉಪಸ್ಥಿತರಿರಲಿದ್ದಾರೆ ಎಂದು ಕಾರ್ಯಕ್ರಮ ಸಂಚಾಲಕರಾದ ಡಾ. ಪ್ರೀತಾ ಪಿ. ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳು

error: Content is protected !!