ಸೂಫಿಗಳ ಸೌಹಾರ್ದ ಕೆಂದ್ರವಾದ ಜಂಡೆ ಕಟ್ಟೆ ತೆರವು ಪ್ರಕರಣ: ಪುನಃ ಕಟ್ಟೆ ನಿರ್ಮಿಸುವಂತೆ ಜೆ ಡಿ ಎಸ್ ವತಿಯಿಂದ ಪಾಲಿಕೆ ಆವರಣದಲ್ಲಿ ಪ್ರತಿಭಟನೆ

ದಾವಣಗೆರೆ: ದಾವಣಗೆರೆ ನಗರದ ಮ್ಯಾಸಬೇಡರ ಕೆರೆಯಲ್ಲಿರುವ ಜಂಡೆಕಟ್ಟೆ ಧ್ವಂಸ ಮಾಡಿರುವುದನ್ನು ಖಂಡಿಸಿ ಮಹಾನಗರ ಪಾಲಿಕೆ ಆವರಣದಲ್ಲಿ ಕರ್ನಾಟಕ ಪ್ರದೇಶ ಜನತಾ ದಳ ( ಜಾತ್ಯತೀತ) ಅಲ್ಪಸಂಖ್ಯಾತ ಯುವ ಘಟಕದಿಂದ ಪ್ರತಿಭಟನೆ ನಡೆಸಲಾಯಿತು
ದಾವಣಗೆರೆ ನಗರದ 18 ನೇ ವಾರ್ಡಿನ ಎಂ.ಬಿ ಕೆರೆಯಲ್ಲಿ ಕಾನೂನಿನ ನೆಪ ಒಡ್ಡಿ ದಶಕಗಳ ಹಳೆಯದಾದ ಸೂಫಿಗಳ ವಿಚಾರ ಧಾರೆಯ ಸೌಹಾರ್ದ ಕೆಂದ್ರವಾದ ಜಂಡೆ ಕಟ್ಟೆ ದಾವಣಗೆರೆ ಮಹಾನಗರ ಪಾಲಿಕೆಯಿಂದ ನಿನ್ನೆ ಬೆಳಿಗ್ಗೆ 5 ಘಂಟೆಗೆ ಧ್ವಂಸ ಮಾಡಿದು ಅದ್ದರಿಂದ ಸೌಹಾರ್ದ ಪ್ರೇಮಿಗಳ ನಂಬಿಕೆಗೆ ಧಕ್ಕೆಯಾಗಿದೆ ಕಾನೂನು ಕೆವಲ ಜಂಡೆ ಕಟ್ಟೆಗೆ ಮಾತ್ರ ಸೀಮಿತ ಮಾಡಿ ಧ್ವಂಸ ಮಾಡಿರುವುದು ಖಂಡನೀಯ ಪಾಲಿಕೆ ಯಿಂದ ಕಾನೂನು ಚಲಾಯಿಸುವುದು ನಿಜವಾದರೆ ಎಲ್ಲಾ ಧರ್ಮಗಳ ಅನಧಿಕೃತ ಪ್ರಾರ್ಥನಾ ಸ್ಮಳ ಗಳ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು
ಕಟ್ಟೆ ಧ್ವಂಸ ಮಾಡಿರುವು ನೋಡಿದರೆ ಯಾವುದೇ ಒಂದು ಗುಂಪಿಗೆ ತೃಪ್ತಿ ಪಡಿಸಲು ಮಾಡಿರಬಹುದು ಎಂದು ಅನುಮಾನ ಬರುತ್ತದೆ ಅದ್ದರಿಂದ ಜಂಡೆ ಕಟ್ಟೆ ಧ್ವಂಸ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಈ ಕೂಡಲೇ ಎಂ.ಬಿ.ಕೆರೆ ಯ ಸೂಫಿ ವಿಚಾರ ಧಾರೆಯ ಸೌಹಾರ್ದ ಕೆಂದ್ರವಾದ ಜಂಡೆ ಕಟ್ಟೆ ಮರು ನಿರ್ಮಾಣ ಮಾಡ ಬೇಕೆಂದು ಆಗ್ರಹಿಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು
ಆಯುಕ್ತರು ಮಹಾಪೌರ ಜೊತೆ ಚರ್ಚಿಸಿ ಮರು ನಿರ್ಮಾಣದ ಬಗ್ಗೆ ತೀರ್ಮಾನಿಸಲಾಗುವುದು ಎಂದರು
ಪ್ರತಿಭಟನೆಯಲ್ಲಿ ಜಾತ್ಯತೀತ ಅಲ್ಪಸಂಖ್ಯಾತ ಯುವಘಟಕದ ಅಧ್ಯಕ್ಷಯು ಎಂ ಮನ್ಸೂರ್ ಅಲಿ,ಜಿ ಅಮಾನುಲ್ಲಾ ಖಾನ್, ಟಿ ಅಸ್ಗರ್,ಜಮೀರ್ ಅಹಮದ್ ಖಾನ್, ಕೆ ದಾದಾಪೀರ್, ಜಬಿ ಉಲ್ಲಾ ಸೇರಿದಂತೆ ಮುಂತಾದವರು ಇದ್ದರು