ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಹುಟ್ಟುಹಬ್ಬ ಆಚರಣೆ

ದಾವಣಗೆರೆ :ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ರವರ ಹುಟ್ಟುಹಬ್ಬವನ್ನು ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಗೀತಾ ಪ್ರಶಾಂತ್ ಪಂಡಿತ್ ನೆಹರು ರವರು ದೇಶ ಕಂಡ ಅಪ್ರತಿಮ ನಾಯಕ, ಬ್ರಿಟಿಷರು ದೇಶ ಬಿಟ್ಟು ಹೋದಾಗ ದೇಶ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು, ಇಂತಹ ಸಂದರ್ಭದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಭದ್ರ ಬುನಾದಿ ಹಾಕಿದರು ಎಂದು ನೆಹರು ರವರ ಅಭಿವೃದ್ಧಿಕಾರ್ಯಗಳನ್ನು ತಿಳಿಸಿದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಮೈನುದ್ದಿನ್ ಎಚ್.ಜೆ ಮಾತನಾಡಿ ಪಂಡಿತ್ ನೆಹರೂ ರವರು ತಮ್ಮ ಅಧಿಕಾರವಧಿಯಲ್ಲಿ ಸ್ಥಾಪಿಸಿದ ಸಂಸ್ಥೆಗಳನ್ನು ಮೋದಿ ಸರ್ಕಾರ ಇಂದು ಮಾರುತಿದೆ, ಉದ್ಯೋಗ ಸೃಷ್ಟಿ, ಕೈಗಾರಿಕೋದ್ಯಮ ಅಭಿವೃದ್ಧಿ, ರೈತರ ಅಭಿವೃದ್ಧಿಗೆ ನೆಹರು ರವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಸಾಮಾಜಿಕ ಜಾಲತಾಣದ ಕೆ.ಎಲ್ ಹರೀಶ್ ಬಸಾಪುರ, ಎಸ್ಸಿ ಘಟಕದ ರಾಕೇಶ್ .ಜಿ, ಕಿಸಾನ್ ಸಂಘಟಕದ ಮೊಹಮದ್ ಜಿಕ್ರಿಯ, ಸೇವಾದಳದ ಸುನಿಲ್ ಕುಮಾರ್, ಲೇಬರ್ ಸೆಲ್ ನ ಲಿಯಕತ್ ಅಲಿ ಎಂ.ಕೆ, ಅಲೆಕ್ಸಾಂಡರ್ ಜಾನ್, ಆಯಾಜ್ ಇನ್ನು ಮುಂತಾದವರು ಭಾಗವಹಿಸಿದ್ದರು.