ಜೀವನೋತ್ಸಾಹ ಕುಂದದಿರಲಿ : ಪ್ರೊ. ಶಂಕರ್ ಆರ್ ಶೀಲಿ

IMG-20210802-WA0014

ದಾವಣಗೆರೆ: ಸರ್ಕಾರಿ ನೌಕರನ ಜೀವನದಲ್ಲಿ ವಯೋ ನಿವೃತ್ತಿ ಎನ್ನುವುದು ಸಹಜ ನಿವೃತ್ತಿಯಿಂದ ಜೀವನೋತ್ಸಾಹವನ್ನು ಕಳೆದುಕೊಳ್ಳದೆ ಜೀವನವನ್ನು ಉತ್ಸಾಹದಿಂದ ಕಳೆಯಬೇಕು ಅದರೆಡೆಗೆ ಮನಸ್ಸನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ನಿವೃತ್ತರಾದ ಪ್ರಾಂಶುಪಾಲರಾದ ಶಂಕರ್ ಆರ್ ಶೀಲಿ ರವರು ಅಭಿಪ್ರಾಯಪಟ್ಟರು.

ಅವರು ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ ನಿವೃತ್ತರಾದ ಪ್ರಯುಕ್ತ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ನನ್ನ ಸುದೀರ್ಘ ಮೂವತ್ತಾರು ವರ್ಷಗಳ ಸೇವಾವಧಿಯಲ್ಲಿ ನಾನು ಸರಕಾರಿ ಕರ್ತವ್ಯ ನಿಭಾಯಿಸಿದ್ದೇನೆ ನನ್ನ ಕೈಲಾದ ಮಟ್ಟಿಗೆ ವಿದ್ಯಾರ್ಥಿಗಳಿನ್ನು ಪ್ರೇರೇಪಿಸಿ ಉನ್ನತ ವಿದ್ಯಾಭ್ಯಾಸ ಮಾಡುವಲ್ಲಿ ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ ಈಗಿನ ಯುವ ಅಧ್ಯಾಪಕ ಮಿತ್ರರು ಸರ್ಕಾರಿ ಕಾಲೇಜಿನ ಮಕ್ಕಳನ್ನು ತಮ್ಮ ಮಕ್ಕಳೆಂಬಂತೆ ಭಾವಿಸಿದಾಗ ಅವರ ಕಷ್ಟ ಮತ್ತು ನೋವುಗಳಿಗೆ ಸ್ಪಂದಿಸಿದಾಗ ವಿದ್ಯಾರ್ಥಿ ಜೀವನವು ಉತ್ಕೃಷ್ಟ ಮಟ್ಟಕ್ಕೆ ಹೋಗುತ್ತದೆ ಅದರಿಂದ ಅಧ್ಯಾಪಕನೂ ಸಂತೃಪ್ತ ಗೊಳ್ಳುತ್ತಾನೆ ಎಂದು ಹೇಳಿದರು.

ಅಧ್ಯಾಪಕ ವೃತ್ತಿಯು ನನಗೆ ಸಮಾಜದಲ್ಲಿ ಬಹು ದೊಡ್ಡ ಗೌರವವನ್ನು ನೀಡಿದೆ ಹಾಗಾಗಿ ನನ್ನ ಪ್ರಕಾರ ಅಧ್ಯಾಪಕ ವ್ರತ್ತಿಯರ ಶ್ರೇಷ್ಠ ವೃತ್ತಿ ಎಂದು ಭಾವಿಸುತ್ತೇನೆ. ಕಾಲೇಜಿನ ಅಧ್ಯಾಪಕರು ಪಠ್ಯದ ಜತೆಗೆ ವಾಸ್ತವ ಜಗತ್ತಿನ ವಿಷಯಗಳನ್ನು ಸೇರಿಸಿ ಉಪನ್ಯಾಸ ನೀಡಿದಾಗ ವಿದ್ಯಾರ್ಥಿಗಳು ಅದನ್ನು ಸ್ವೀಕರಿಸಿ ಅವರ ಜ್ಞಾನವನ್ನು ಹೆಚ್ಚೆು ಮಾಡಿ ಕೊಳ್ಳುತ್ತಾರೆ ಎಂದು ತಿಳಿಸಿದರು.

ಮೂವತ್ತಾರು ವರ್ಷಗಳ ಈ ಸೇವಾವಧಿಯೂ ನನಗೆ ತೃಪ್ತಿ ತಂದಿದೆ ಎಂದು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ.
ಮರಳಸಿದ್ದಪ್ಪನವರು ಶಂಕರ್ ಆರ್ ಶೀಲಿ ಯವರೊಂದಿಗೆ ಸುಮಾರು 14 ವರ್ಷಗಳಿಂದ ಕರ್ತವ್ಯವನ್ನು ನಿಭಾಯಿಸುತ್ತಿದ್ದೇನೆ ಎಂದಿಗೂ ಅವರು ಯಾರಿಗೂ ನೋವನ್ನುಂಟು ಮಾಡದೆ ಕರ್ತವ್ಯ ನಿಭಾಯಿಸಿದರು ಸರಳ ಸಜ್ಜನಿಕೆಯ ಜ್ಞಾನವಂತ ಅಧ್ಯಾಪಕರೊಬ್ಬರು ನಮ್ಮ ವಿಭಾಗದಿಂದ ನಿವೃತ್ತಿಯಾಗುತ್ತಿರುವುದು ನಮಗೆಲ್ಲಾ ಬೇಸರ ಆದರೆ ಸರ್ಕಾರದ ನಿಯಮಗಳಿಗೆ ನಾವೆಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ಎಲ್ಲಾ ಅಧ್ಯಾಪಕ ಮಿತ್ರರು ಶಂಕರ್ ಆರ್ ಶೀಲಿ ಯವರ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಎಂ.ಕಾಂ ವಿದ್ಯಾರ್ಥಿ ಗಳು ಕೂಡ ಭಾಗವಹಿಸಿ ತಮ್ಮ ನೆಚ್ಚಿನ ಗುರುಗಳ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಎಂಕಾಂ ವಿದ್ಯಾರ್ಥಿನಿ ದ್ರಾಕ್ಷಾಯಣಿ ನಿರೂಪಿಸಿ ಪ್ರಾರ್ಥಿಸಿದರು. ಕುಮಾರಿ ಶ್ರುತಿ ಸ್ವಾಗತಿಸಿದರು ಶ್ವೇತಾ ವಂದಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!