ವಿಜೃಂಭಣೆಯಿಂದ ನಡೆದ ಸತ್ತೂರು ಗೊಲ್ಲರಹಟ್ಟಿ ಜುಂಜೇಶ್ವರ ಜಾತ್ರೆ:

ಉಚ್ಚಂಗಿದುರ್ಗ: ಇಲ್ಲಿಗೆ ಸಮೀಪದ ಸತ್ತೂರು-ಗೊಲ್ಲರಹಟ್ಟಿ ಗ್ರಾಮದಲ್ಲಿ ಜುಂಜೇಶ್ವರನ ಜಾತ್ರೆಯು ನ.08 ರಿಂದ 10 ರವರೆಗೆ ನಡೆಯಿತು.
ಪ್ರತಿ ವರ್ಷದಂತೆ ದೀಪಾವಳಿಗೆ ಜುಂಜೇಶ್ವರನ ಜಾತ್ರೆಯು ನಡೆಯುತ್ತದೆ ಜಾತ್ರೆಗೆ ಕರ್ನಾಟಕ ರಾಜ್ಯದ ಹಲವು ಕಡೆಯಿಂದ ಭಕ್ತರೂ ಆಗಮಿಸಿ ಹಾವು,ಚೇಳು,ಜರಿ,ಮುಂತಾದ ವಿಷ ಜಂತೂಗಳಿಂದ ನಮ್ಮನ್ನು ಕಾಪಾಡಬೇಕು ಎಂದು ಬೇಡಿಕೊಳ್ಳುವುದು,ವಿಷಜಂತುಗಳು ಕಚ್ಚಿದ ಭಕ್ತರೂ ಈ ಕ್ಷೇತ್ರಕ್ಕೆ ಬಂದು ವಿಷಜಂತುಗಳಿಂದ ನಮ್ಮನ್ನು ರಕ್ಷಿಸು ಎಂದು ತಮಗೆ ಕಚ್ಚಿದ ವಿಷಜಂತಿನ ಚಿಕ್ಕ ಬೆಳ್ಳಿ ಅಥವಾ ಹಿತ್ತಾಳೆ ಮೂರ್ತಿಯನ್ನು ನೀಡುವುದು ಇಲ್ಲಿನ ಪದ್ಧತಿಯಾಗಿದೆ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಜುಂಜೇಶ್ವರನ ದರ್ಶನ ಪಡೆದರು.
ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅರಸೀಕೆರೆ ಠಾಣೆ ಸಬ್ ಇನ್ಸ್ ಪೆಕ್ಟರ್ ಕಿರಣ್ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು ಆರೋಗ್ಯ ಇಲಾಖೆ ವತಿಯಿಂದ ಕೋವಿಡ್ -19 ಬಗ್ಗೆ ಜಾಗೃತಿ ಮೂಡಿಸಿ ವ್ಯಾಕ್ಸಿನ್ ಅವಶ್ಯಕತೆ ಇರುವ ಭಕ್ತರಿಗೆ ಸ್ಥಳದಲ್ಲೇ ವ್ಯಾಕ್ಸಿನ್ ನೋಡಿದರು.
ಹರಪನಹಳ್ಳಿ ತಾಲ್ಲೂಕು ಆಡಳಿತ ಹಾಗೂ ಹಿಂದು ಧಾರ್ಮಿಕ ದತ್ತಿ ಇಲಾಖೆ, ಗ್ರಾಮ ಪಂಚಾಯಿತಿ ಇಲಾಖೆ ಸಿಬ್ಬಂದಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿಗಳು,ಸೇವಾದಳ, ಗ್ರಾಮಸ್ಥರ ಈ ಜಾತ್ರೆಯಲ್ಲಿ ಉಪಸ್ಥಿತರಿದ್ದರು.