ಜಿಲ್ಲೆಯ ಶೋಷಿತರ ಧ್ವನಿ ಬಾಡದ ಆನಂದರಾಜ್ ರವರಿಗೆ 49 ರ ಸಂಭ್ರಮ

IMG-20211123-WA0004

 

ದಾವಣಗೆರೆ: ಸರಳ ಸಜ್ಜನಿಕೆ, ಸರ್ವ ಧರ್ಮ ಸಮಾನತೆ ಹರಿಕಾರ ಸಹೃದಯಿ ಸ್ನೇಹಮಹಿ ಜಿಲ್ಲೆಯ ಶೋಷಿತ ವರ್ಗದ ಗಟ್ಟಿ ಧ್ವನಿಯಾಗಿರುವ ಬಾಡದ ಆನಂದರಾಜು ಅವರಿಗೆ 49 ನೇ ಜನ್ಮದಿನದ ಶುಭಾಷಯಗಳು…

ಬಾಡದ ಆನಂದರಾಜು :-
ಮದ್ಯಮ ಕುಟುಂಬದಲ್ಲಿ ಜನಿಸಿದ ಇವರು ದಾವಣಗೆರೆ ತಾಲ್ಲೂಕ ಬಾಡ ಗ್ರಾಮದ ಶ್ರೀಮತಿ ಸಾಕಮ್ಮ ಶ್ರೀಯುತ ರಾಮಪ್ಪ ಅವರ ದಂಪತಿ ಹೆಮ್ಮೆಯ ಮಗನಾಗಿ, ಅವರ ಆಶೀರ್ವಾದಿಂದ ಕಷ್ಟದಲ್ಲೂ ಹೋರಾಟ, ಸಂಘಟನೆ ಮೂಲಕ ಸುಂದರ ಬದುಕು ಕಟ್ಟಿಕೊಂಡವರು. ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಅಭಿಮಾನಿಗಳನ್ನ ಹೊಂದಿರುವ ಅಪ್ಪಟ ಕನ್ನಡಾಭಿಮಾನಿ. ಕಷ್ಟ ಎಂದರೆ ಕರಗುವ ಹೃದಯವಂತ ಬಾಡದ ಆನಂದರಾಜು ಸದಾ ಬಡವರು, ಶೋಷಿತರ ಪರವಾಗಿ ದನಿ ಎತ್ತಿ ಅವರ ಕಷ್ಟಕ್ಕೆ ಸ್ಪಂದಿಸುತ್ತಾ ಬಂದಿದ್ದಾರೆ.

ಕೋರುನಾ ಸಂತ್ರಸ್ತರಿಗೆ ನೆರವು
ಮಾನವೀಯತೆಯ ಪ್ರತಿರೂಪ, ಬಾಯಿ ಮಾತಿನ ಸಾಂತ್ವನ ಹೇಳದೇ
ಬಡವರ ಹಸಿವು ನೀಗಿಸಿ ನೆಮ್ಮದಿ ನಗು ಅರಳಿಸಿದ ಬಡವರ ಬಂಧು.
ಕೊರೊನಾ ವಾರಿಯರ್ಸ್ ಸೇರಿ ಬಡವರಿಗೆ ದುಡಿದ ಸ್ವಂತ ಹಣದಿಂದ ಸೇವೆ
ಆಹಾರ ಧಾನ್ಯ ಕಿಟ್ ಸೇರಿದಂತೆ ಇತರೆ ಸಹಾಯ ಮಾಡಿ ಮಾನವೀಯತೆ ಪ್ರತಿರೂಪ ಎನಿಸಿದ್ದಾರೆ.

ಸರ್ವ ಧರ್ಮಕ್ಕೂ ಸಮಾನತೆ
ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಸಂಸ್ಕೃತಿ ಎಂಬಂತೆ ಆಧುನಿಕ ಬಸವಣ್ಣ
ಜಾತಿ, ಧರ್ಮ, ಬಡತನ, ಸಿರಿತನಕ್ಕಿಂತ ಸ್ನೇಹ, ಪ್ರೀತಿ ತೋರಿದ ಸಹೃದಹಿ.

ಹುಟ್ಟು ಹೋರಾಟಗಾರರು
ವಿದ್ಯಾರ್ಥಿ ಜೀವನದಿಂದಲೇ ಹೋರಾಟ ಮಾಡುತ್ತಾ ಬಂದವರು, ಅಂದಿನಿಂದ ಇಂದಿನವರೆಗೂ ಶೋಷಿತರ ಪರವಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದು ಅನ್ಯಾಯ ಕಂಡರೆ ಇಂದಿಗೂ ಹೋರಾಟ ಮಾಡಿ ನ್ಯಾಯದ ಪರ ಕೆಲಸ ಮಾಡುತ್ತಿದ್ದಾರೆ.

ಸನ್ಮಾನ, ಸನ್ಮಾನಗಳು

ಇವರ ಕಾರ್ಯ ವೈಖರಿಗೆ 2002 ರಲ್ಲಿ ಕೇಂದ್ರ ಸರ್ಕಾರದ ಯುವ ಪ್ರಶಸ್ತಿ, 2004 ರಲ್ಲಿ ನಗರಸಭೆಯಿಂದ ರಾಜ್ಯೋತ್ಸವ ಪ್ರಶಸ್ತಿ 2006 ರಲ್ಲಿ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ, ಚಿತ್ರದುರ್ಗ ಮುರಘಾ ಮಠದಿಂದ ಆದರ್ಶ ದಂಪತಿ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಗೌರವ ಹರಸಿ ಬಂದಿದ್ದರು ಯಾವುದೇ ಹಮ್ಮು ಇಲ್ಲದ ಸರಳ ಸಜ್ಜನ ಮೂರ್ತಿಯಾಗಿದ್ದು, ಇವರ ಎಲ್ಲಾ ಕಾರ್ಯಕ್ಕೂ ಧರ್ಮಪತ್ನಿ ಶ್ರೀಮತಿಯವರು ಹಾಗೂ ಇಬ್ಬರು ಮಕ್ಕಳು ಬೆಂಬಲಕ್ಕೆ ನಿಂತಿದ್ದು ಒಂದು ಸಂಪ್ರದಾಯ, ಸುಂದರ ಕುಟುಂಬವಾಗಿದ್ದು

ಹೆಸರಿನಂತೆ ಬಾಡದ ಆನಂದರಾಜು ಅವರು..
ಬಾಡದಂತೆಆನಂದ ’ವಾಗಿರಲಿ ಎಂಬುದು ಗೆಳೆಯರ ಬಳಗದ ಆಶಯ, ಹುಟ್ಟು ಹಬ್ಬದ ಶುಭಾಷಯಗಳೊಂದಿಗೆ…

ಎವೈ.ಪ್ರಕಾಶ್
ಹಿಂದುಳಿದ ವರ್ಗಗಳ ಮುಖಂಡರು.

Leave a Reply

Your email address will not be published. Required fields are marked *

error: Content is protected !!