Doctors Stipend:ಜೆಜೆಎಂ ಕಾಲೇಜಿನ ಗೃಹ ವೈದ್ಯರು ಮುಷ್ಕರ | ತಟ್ಟೆ ಬಾರಿಸಿ, ಶಿಷ್ಯವೇತನಕ್ಕೆ ಅಗ್ರಹಿಸಿದ ನೂರಾರು ಗೃಹ ವೈದ್ಯರು

ದಾವಣಗೆರೆ: ಬಾಕಿ ಇರುವ ಶಿಷ್ಯವೇತನ ನೀಡುವಂತೆ ಆಗ್ರಹಿಸಿ ನಿನ್ನೆಯಿಂದ ಜೆಜೆಎಂ ಕಾಲೇಜಿನ ಗೃಹ ವೈದ್ಯರು ಮುಷ್ಕರ ಆರಂಭಿಸಿದ್ದು, ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ತಟ್ಟೆ ಬಾರಿಸುವ ಮೂಲಕ ಆಡಳಿತ ಮಂಡಳಿ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ವಿದ್ಯಾರ್ಥಿಗಳು ಒಂದೆಡೆ ಸೇರಿ ತಟ್ಟೆ ಬಾರಿಸಿ, ಶಿಷ್ಯವೇತನ ನೀಡುವ ವರೆಗೂ ಮುಷ್ಕರ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.
ಕಳೆದ ವರ್ಷವೂ ಸಹ ಶಿಷ್ಯವೇತನ ಬಿಡುಗಡೆ ಮಾಡದ ಕಾರಣ ನೂರಾರು ವಿದ್ಯಾರ್ಥಿಗಳು ಸುಮಾರು ಹದಿನೈದು ದಿನಗಳ ಕಾಲ ಮುಷ್ಕರ ನಡೆಸಿದ್ದರು. ಅದರಂತೆ ಈಗಲೂ ಸಹ ವೈದ್ಯ ವಿದ್ಯಾರ್ಥಿಗಳಿಗೂ ಶಿಷ್ಯವೇತನ ನೀಡದೆ ಸಮಸ್ಯೆಯುಂಟು ಮಾಡಲಾಗಿದ್ದು, ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕಾಲೇಜು ಮಂಡಳಿ ಅಥವಾ ಸರ್ಕಾರ ಶಿಷ್ಯವೇತನ ನೀಡದಿದ್ದರೆ ಸೇವೆಯಿಂದ ಹೊರಗುಳಿಯುವ ಮೂಲಕ ಪ್ರತಿಭಟನೆ ನಡೆಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.