Journalist phd: ಪತ್ರಕರ್ತ ವಿಲಾಸ್ ನಾಂದೋಡಕರ್ ಮಂಡಿಸಿದ”ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ಪತ್ರಕರ್ತರು” ಪ್ರಬಂದಕ್ಕೆ ಪಿ ಹೆಚ್ ಡಿ ಪದವಿ

journalist vilas nandodakar gets phd award at Karnataka university

ದಾವಣಗೆರೆ: ಡಾ.ವಿಲಾಸ ವಸಂತರಾಜ್ ನಾಂದೋಡಕರ್ ಅವರು ಮಂಡಿಸಿರುವ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ಪತ್ರಕರ್ತರು – ಒಂದು ಅಧ್ಯಯನ ಎಂಬ ವಿಷಯ ಕುರಿತು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿರುವ ಪ್ರೌಢ ಪ್ರಬಂಧಕ್ಕೆ ಪಿಹೆಚ್ ಡಿ ಪದವಿ ಪ್ರದಾನ ಮಾಡಲಾಗಿದೆ.

ಡಾ.ಸಂಜಯಕುಮಾರ್ ಮಾಲಗತ್ತಿ ಮಾರ್ಗದರ್ಶನದಲ್ಲಿ ನಡೆಸಿದ ಅಧ್ಯಯನ ಪತ್ರಕರ್ತರ ಜ್ವಲಂತ ಸಮಸ್ಯೆ, ಸವಲತ್ತುಗಳ ಕೊರತೆ, ಮುಂಬರುವ ವಿದ್ಯಮಾನಗಳ ಆತಂಕಗಳ ಕುರಿತು ಬೆಳಕು ಚೆಲ್ಲಿದೆ.
ಪಿಹೆಚ್ ಡಿ ಪದವಿ ಪಡೆಯುವ ಮೂಲಕ ಅವರು ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವಿಲಾಸ್ ನಾಂದೋಡ್ಕರ್ ಅವರು ಈ ಹಿಂದೆ ಈಟಿವಿ ಕನ್ನಡ ನ್ಯೂಸ್ ಚಾನೆಲ್ ಹೈದರಾಬಾದ್ ಮತ್ತು ಟಿವಿ9 ಕನ್ನಡ ಹಾಗೂ ಸುವರ್ಣ ಸುದ್ದಿವಾಹಿನಿ ನಂತರ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!