ಜುಲೈ 14 ರಂದು ದಾವಣಗೆರೆಯಲ್ಲಿ 2370 ಕೋವಿಶೀಲ್ಡ್ ಲಸಿಕೆ ನೀಡಲಿದೆ ಆರೋಗ್ಯ ಇಲಾಖೆ

ದಾವಣಗೆರೆ: ದಾವಣಗೆರೆಯಲ್ಲಿ ಜುಲೈ. 14 ರಂದು ಕೋವಿಡ್ ನಿರೋಧಕ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಒಟ್ಟು 2370 ಡೋಸ್ ಕೋವಿಶೀಲ್ಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ದಾವಣಗೆರೆ ತಹಸಿಲ್ದಾರರ ಕಚೇರಿ (250 ಡೋಸ್), ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನಿಯೋಜಿತ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗೆ ದಾವಣಗೆರೆಯ ಎಕ್ಸ್ ಮುನಿಸಿಪಲ್ ಶಾಲೆ (300), ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಎಂಇಎಸ್ ಕಾಲೇಜ್ ಆಫ್ ಎಜುಕೇಷನ್ (70), ಸ್ವಿಗ್ಗಿ, ಜೊಮೆಟೊ ನೌಕರರಿಗೆ (150), ಕೊಂಡಜ್ಜಿ ರಸ್ತೆ ಸವಿತಾ ಸಮುದಾಯ ಭವನ (250), ಎಲ್‌ಐಸಿ ಏಜೆಂಟರು ಮತ್ತು ಸಿಬ್ಬಂದಿಗೆ (250) ಲಸಿಕೆ ನೀಡಲಾಗುತ್ತದೆ.
ಆಜಾದ್ ನಗರ (100), ಬಾಷಾ ನಗರ, ದೊಡ್ಡಪೇಟೆ, ಚರ್ಚ್ ರಸ್ತೆ ಪಿಜೆ ಬಡಾವಣೆ, ಲೋಕಿಕೆರೆ ರಸ್ತೆಯಲ್ಲಿನ ನಗರ ಆರೋಗ್ಯ ಕೇಂದ್ರಗಳಲ್ಲಿ ತಲಾ 100 ಡೋಸ್ ಹಾಗೂ ಸಿ.ಜಿ. ಆಸ್ಪತ್ರೆಯಲ್ಲಿ ಎರಡು ದಿನಗಳು 400 ಡೋಸ್ ಕೋವಿಶೀಲ್ಡ್ 2ನೇ ಡೋಸ್ ಮಾತ್ರ ಲಸಿಕೆ ನೀಡಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.