ನವೆಂಬರ್ 8 ರಿಂದ ಮಿನಿ ಕುಕ್ಕೆ ಸುಬ್ರಹ್ಮಣ್ಯ ಎಂದೇ ಪ್ರಸಿದ್ದವಾಗಿರುವ ಜುಂಜೇಶ್ವರನ ಜಾತ್ರೆ

ಉಚ್ಚoಗಿದುರ್ಗ: ಹರಪನಹಳ್ಳಿ ತಾಲ್ಲೂಕಿನ ಮಿನಿ ಕುಕ್ಕೆ ಸುಬ್ರಹ್ಮಣ್ಯ ಎಂದು ಪ್ರಸಿದ್ದಿಯಾಗಿರುವ ಜುಂಜೇಶ್ವರ ಸ್ವಾಮಿಯ ಕ್ಷೇತ್ರಕ್ಕೆ ವಿಷ ಜಂತುಗಳಾದ ಹಾವು,ಚೇಳು,ಜರಿ ಕಡಿದಾಗ ಬಂದು ಜುಂಜೇಶ್ವರ ದರ್ಶನ ಪಡೆದರೆ ಒಳ್ಳೆಯದು ಎನ್ನುವ ಭಕ್ತರ ನಂಬಿಕೆ ಇದ್ದು ಈ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ನವೆಂಬರ್ 08 ರಿಂದ ನ.10 ರವರೆಗೆ ಸತ್ತೂರು-ಗೊಲ್ಲರಹಟ್ಟಿ ಗ್ರಾಮದಲ್ಲಿ ಜಾತ್ರೆ ನಡೆಯಲಿದೆ

ನ.08 ರಂದು ಸೋಮವಾರ ಅಗ್ನಿಕುಂಡ,ನ.09 ಭಕ್ತರೂ ಹಾಗೂ ಗ್ರಾಮಸ್ಥರಿಂದ ಬೆಲ್ಲದ ನೀರಿನ ಬಂಡಿ ಪೂಜೆ ರಾತ್ರಿ8 ಘಂಟೆಗೆ ಕೋಲು ಮೇಳ-ಭಜನೆ-ನಂದಿ ಕೋಲು ಕುಣಿತ,ನ.10 ರಂದು ಹುತ್ತದ ಪೂಜೆ ನಡೆಯುತ್ತದೆ.
ದೇವಸ್ಥಾನಕ್ಕೆ ಬರುವ ಭಕ್ತರು ಪ್ರತಿಯೊಬ್ಬರೂ ಮಾಸ್ಕ್ ಹಾಕಿಕೊಂಡು ದೇವರ ದರ್ಶನ ಪಡೆಯಬೇಕು ಗುಂಪು-ಗುಂಪಾಗಿ ಸೇರದೆ ಕರೋನ ನಿಯಮಗಳನ್ನು ಪಾಲಿಸಿ ಮೂರನೇ ಅಲೆಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ದೇವಸ್ಥಾನದ ಆಡಳಿತಧಿಕಾರಿ ಶ್ರೀಧರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.