ಕೆ. ಆರ್ ಮಾರುಕಟ್ಟೆ ಮಳಿಗೆಗಳ ದಾಖಲೆ ಪರಿಶಿಲನೆ
ದಾವಣಗೆರೆ:ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ 19 ರಲ್ಲಿನ ಕೆ. ಆರ್ ಮಾರುಕಟ್ಟೆ ಮಳಿಗೆಗಳ ದಾಖಲೆ ಪರಿಶಿಲನೆಗೆ ಬಾಡಿಗೆದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಾಲಿಕೆ ಮಾಲಿಕತ್ವದ ಕೆ.ಆರ್ ಮಾರುಕಟ್ಟೆಯನ್ನು ಪುನರ್ ನಿರ್ಮಾಣ ಮಾಡಲಾಗಿದ್ದು, ಈ ಹಿಂದೆ ಮಾರುಕಟ್ಟೆಯಲ್ಲಿದ್ದ ಬಾಡಿಗೆದಾರರ ಮಳಿಗೆಗೆ ಸಂಬಂಧಿಸಿದ ಕರಾರು ದಾಖಲೆಗಳು, ಬಾಡಿಗೆ ಪಾವತಿಸಿದ ದಾಖಲೆಗಳ ಪರಿಶಿಲನೆಗೆ ಮುಂದಾಗಿದ್ದು, ಬಾಡಿಗೆದಾರರು ಅರ್ಜಿಗಳನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ವರೆಗೆ ಕೆ.ಆರ್ ಮಾರುಕಟ್ಟೆಯಲ್ಲಿನ ಪಾಲಿಕೆ ಸಿಬ್ಬಂದಿಯಿಂದ ಪಡೆದು ಮುಂದಿನ 7 ದಿನಗಳೊಳಗಾಗಿ ಮಳಿಗೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಲು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.