ಕೆ.ಎಸ್. ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಕರ್ನಾಟಕ ರಾಜ್ಯ ಕುರುಬರ ಸಂಘ ಒತ್ತಾಯ

IMG-20210727-WA0013

 

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಸಮಕಾಲೀನರಾದ ಕೆ.ಎಸ್. ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಕರ್ನಾಟಕ ರಾಜ್ಯ ಕುರುಬರ ಸಂಘ ಒತ್ತಾಯಿಸಿದೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಂಘದ ಪ್ರಧಾನ ಕಾರ್ಯದರ್ಶಿ ಡಿ ವೆಂಕಟೇಶ್ ಮೂರ್ತಿ, ಈಶ್ವರಪ್ಪ ಕೂಡ ಈಗಾಗಲೇ ಡಿಸಿಎಂ ಹುದ್ದೆಯನ್ನು ನಿಭಾಯಿಸಿದ್ದಾರೆ. ಅವರ ಹೆಸರು ಕೂಡ ಸಿಎಂ ರೇಸ್ ನಲ್ಲಿದೆ. ‌ಹಾಗಾಗಿ, ಅನುಭವ ಇರುವ ಈಶ್ವರಪ್ಪ ಅವರನ್ನೇ ಸಿಎಂ ಆಗಿ ಘೋಷಿಸುವಂತೆ ಬಿಜೆಪಿ ಹೈಕಮಾಂಡ್ ಗೆ ಕೋರಿದರು.

ರಾಜ್ಯದಲ್ಲಿ ಈಗಾಗಲೇ ಸಿಎಂ ರಾಜೀನಾಮೆ ಕೊಟ್ಟಿದ್ದಾರೆ. ಸಿಎಂ ಸ್ಥಾನ ಖಾಲಿ ಇದೆ. ನಮ್ಮ ಸಮಾಜದವರಾದ ಯಡಿಯೂರಪ್ಪ ಸಮಕಾಲಿನರಾದ ಈಶ್ವರಪ್ಪನವರು ಪಕ್ಷಕ್ಕಾಗಿ ದುಡಿದಿದ್ದಾರೆ‌. ಸಚಿವ ಸ್ಥಾನ, ಉಪ ಮುಖ್ಯಮಂತ್ರಿ ಸ್ಥಾನವನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಪಕ್ಷ ಅವರನ್ನು ಗುರುತಿಸಬೇಕೆಂದು ಅವರು ಹೇಳಿದರು.

ಇದಲ್ಲದೆ ಭೈರತಿ ಬಸವರಾಜ್, ಎಂಟಿಬಿ ನಾಗರಾಜ್, ಶಂಕರ್ ಇವರೆಲ್ಲರೂ ಬೆಂಬಲ ನೀಡಿದ್ದಕ್ಕೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಈಶ್ವರಪ್ಪ ಸೇರಿದಂತೆ ಇತರೆ ಸಚಿವರನ್ನ ಮುಂದುವರಿಸ ಬೇಕು ಎಂದು ಅವರು ಆಗ್ರಹಿಸಿದರು.

ಈ ಹಿಂದೆ ಸದಾನಂದ ಗೌಡ ಹಾಗೂ ಶೆಟ್ಟರ್ ಅವರನ್ನ ಸಿಎಂ ಮಾಡಲಾಗಿತ್ತು. ಆದರೆ, ರಾಜ್ಯದಲ್ಲಿ ಶೇ. 32 ರಷ್ಟಿರುವ ಕುರುಬ ಸಮಾಜಕ್ಕೆ ಸಿಎಂ ಸ್ಥಾನ ನೀಡಿಲ್ಲ. ಹೀಗಾಗಿ ಹಿಂದುಳಿದ ವರ್ಗದ ನಾಯಕರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಈಶ್ವರಪ್ಪ ಅವರ ಹಿರಿತನಕ್ಕೆ ಅನುಗುಣವಾಗಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು. ಹಿಂದುಳಿದ ನಾಯಕರಲ್ಲಿ ಈಶ್ವರಪ್ಪನವರೆ ಆಗ್ರಗಣ್ಯರು. ಹೀಗಾಗಿ ಅವರನ್ನ ಸಚಿವ ಸ್ಥಾನದಿಂದ ಕೈ ಬಿಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಒಂದು ವೇಳೆ ಈಶ್ವರಪ್ಪ ಸೇರಿ ಸಮಾಜದ ಉಳಿದ ಸಚಿವರನ್ನು ಕೈಬಿಟ್ಟರೆ ಸಮಾಜದಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿರು.

ಈ ಸಂದರ್ಭದಲ್ಲಿ ಖಜಾಂಚಿ ದೇವರಾಜ್, ಮತ್ತು ನಿರ್ದೇಶಕರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!