ಬೀದಿನಾಯಿ ಹಾಗೂ ಹಂದಿಗಳ ಹಾವಳಿ ನಿಯಂತ್ರಿಸುವಲ್ಲಿ ವಿಫಲ: ದಾವಣಗೆರೆ ಮಹಾನಗರ ಪಾಲಿಕೆ ಗೆ ಕರವೇಯಿಂದ ಮುತ್ತಿಗೆ.
ದಾವಣಗೆರೆ : ನಗರದಲ್ಲಿ ಹೆಚ್ಚಾಗಿರುವ ಬೀದಿನಾಯಿಗಳು ಹಾಗೂ ಹಂದಿಗಳ ಹಾವಳಿಯನ್ನು ತಡೆಗಟ್ಟುವ ಬಗ್ಗೆ ಹಾಗೂ ಆಂಗ್ಲ ನಾಮಫಲಕಗಳನ್ನು ತೆರವು ಗೊಳಿಸಬೇಕೆಂದು ಮಹಾನಗರ ಪಾಲಿಕೆ ಉಪ ಆಯುಕ್ತರ ಕಪ್ಪು ಮಸಿ ಬಣ್ಣ ಕೊಡುವ ಮೂಲಕ ಪ್ರತಿಭಟನೆ ನಡೆಸಲಾಯಿತು
ಕರ್ನಾಟಕ ರಕ್ಷಣಾ ವೇದಿಕೆ ಕಳೆದ 23 ವರ್ಷಗಳಿಂದ ನಾಡು-ನುಡಿ ಭಾಷೆ ಸಂಸ್ಕೃತಿ ಸಂಸ್ಕಾರ ಕನ್ನಡಿಗರ ಬದುಕನ್ನು ಕಟ್ಟುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿರುವುದು ತಮಗೆಲ್ಲ ತಿಳಿದಿರುವ ವಿಚಾರ,ಅದರಂತೆ ಅಭಿವೃದ್ಧಿ ಹೊಂದುತ್ತಿರುವ ದಾವಣಗೆರೆ ಮಹಾನಗರದಲ್ಲಿ ಬೀದಿನಾಯಿಗಳು ಹಾಗೂ ಹಂದಿಗಳನ್ನು ನಿಯಂತ್ರಿಸುವಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರ ಪರಿಣಾಮವಾಗಿ ರಸ್ತೆಯಲ್ಲಿ ಯಾರು ನಡೆದಾಡಲಾರದಂತಹ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ-ಹಗಲೆನ್ನದೇ ಬೀದಿ ನಾಯಿಗಳಿಂದ ಹಾಗೂ ಹಂದಿಗಳಿಂದ ಕಚ್ಚಿಸಿಕೊಂಡು ಸಾರ್ವಜನಿಕರು ಆಸ್ಪತ್ರೆ ಸೇರುವಂತಾಗಿದೆ. ಮಕ್ಕಳು ಬೀದಿನಾಯಿಗಳಿಂದ ಕಚ್ಚಿಸಿಕೊಂಡು ನೂರೆಂಟು ಉದಾಹರಣೆಗಳಿವೆ. ಮೊನ್ನೆ ಮಧ್ಯಾಹ್ನ ಬಾಷಾ ನಗರದಲ್ಲಿ ಬಾಲಕ ಆರು ವರ್ಷದ ಮಹಮ್ಮದ್ ಇರ್ಫಾನ್ ಎಂಬ ಬಾಲಕನಿಗೆ ಕಣ್ಣು, ಮೂಗು, ಗದ್ದ ಕಿತ್ತು ಹೋಗುವ ಹಾಗೆ ನಾಯಿಗಳು ಕಡಿದಿವೆ. ಆ ಬಾಲಕನಿಗೆ ಮೂಗಿನ ನರ ಕಟ್ಟಾಗಿದ್ದು, ಕಣ್ಣಿನ ವೈದ್ಯರು ಕಣ್ಣು ಹೋಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಬೆಳೆಯುತ್ತಿರುವ ಬಾಲಕನು ಕುರುಡನಾಗಲು ನಗರಪಾಲಿಕೆಯ ಅಧಿಕಾರಿಗಳೇ ಕಾರಣರಾಗಿದ್ದಾರೆ.
ಈ ವಿಚಾರವನ್ನು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತಕ್ಷಣ ನಗರದಲ್ಲಿ ಬೀದಿನಾಯಿಗಳನ್ನು ಮತ್ತು ಹಂದಿಗಳನ್ನು ಬಿಡಾಡಿ ದನಗಳನ್ನು ದಾವಣಗೆರೆ ನಗರದಿಂದ ಹೊರಗಡೆ ಸಾಗಿಸಲು ಮಹಾನಗರ ಪಾಲಿಕೆ ತಮ್ಮ ಸಿಬ್ಬಂದಿವರ್ಗವನ್ನು ತಕ್ಷಣ ಕಳಿಸಿ ಅವುಗಳನ್ನು ನಿರ್ಮೂಲನೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ ಪಡಿಸುತ್ತದೆ.ಇದರ ಜೊತೆಗೆ ದಾವಣಗೆರೆ ಮಹಾನಗರದಲ್ಲಿ ಆಂಗ್ಲ ನಾಮಫಲಕಗಳು ಹೆಚ್ಚಾಗಿ ರಾರಾಜಿಸುತ್ತಿವೆ, ಈ ವಿಚಾರ ಸಂಬಂಧಿಸಿದಂತೆ ಮಹಾಪೌರರು ಮತ್ತು ಆಯುಕ್ತರಿಗೆ ಗಮನಕ್ಕೆ ತರಲಾಗಿದೆ. ಆದರೆ, ಸರ್ಕಾರ ಕನ್ನಡದ ಕಾಯಕ ವರ್ಷ ಎಂದು ಆದೇಶ ಮಾಡಿ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಂಗಡಿ-ಮುಗ್ಗಟ್ಟುಗಳ ಕನ್ನಡದ ನಾಮಫಲಕಗಳು ಹಾಕಲೇಬೇಕು ಶೇಕಡಾ 65% ರಷ್ಟು ಕನ್ನಡ ನಾಮಫಲಕ ಹಾಕಬೇಕೆಂದು ಆದೇಶಿಸಿದ್ದರೂ ಮಹಾನಗರ ಪಾಲಿಕೆ ಅಧಿಕಾರಿವರ್ಗ ಮೌನವಹಿಸಿರುವುದನ್ನು ನೋಡಿದರೆ ಅಂಗಡಿಯ ಮಾಲೀಕರೊಂದಿಗೆ ಶಾಮೀಲಾಗಿರುವುದು ನೇರವಾಗಿ ಗೊತ್ತಾಗುತ್ತದೆ ಇಂತಹ ನಾಡದ್ರೋಹಿ ಅಧಿಕಾರಿಗಳನ್ನು ತಕ್ಷಣ ವರ್ಗಾಯಿಸಬೇಕೆಂದು ಆಗ್ರಹಿಸುತ್ತೇನೆ.
ಮಹಾನಗರ ಪಾಲಿಕೆ ಪೂಜ್ಯ ಮಹಾಪೌರರಿಗೆ, ಆಯುಕ್ತರಿಗೆ ಹಾಗೂ ಅಧಿಕಾರಿಗಳಿಗೆ ಗುಲಾಬಿಹೂಗಳನ್ನು ಕೊಟ್ಟು ಆಂಗ್ಲ ನಾಮಫಲಕ ತೆರವುಗೊಳಿಸುವಂತೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಇಂಥ ಮಂಡತನದ ಅಧಿಕಾರಿಗಳು ಆಯುಕ್ತರಿಗೆ ಕಪ್ಪು ಮಸಿ ಕೊಡುವುದರ ಮೂಲಕ ಪ್ರತಿಭಟನೆ ನಡೆಸಲು ನಡೆಸಲಾಯಿತು ತಕ್ಷಣ ಆಯುಕ್ತರು ಆದೇಶಿಸಬೇಕು ಮತ್ತು ಆಂಗ್ಲ ನಾಮಫಲಕಗಳನ್ನು ತೆರವುಗೊಳಿಸಬೇಕು ಎಂದು ವಿನಂತಿಸಿಕೊಳ್ಳುತೆನೆ ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ರಾಮೇಗೌಡ ಎಂಎಸ್ .ಎಂಡಿ ರಫೀಕ್. ಜಬಿವುಲ್ಲಾ. ಜಿಎಸ್ ಸಂತೋಷ್. ಮುಬಾರಕ್. ಅನ್ವರ್. ಗೋಪಾಲ್ ದೇವರಮನೆ. ಮೋಹನ್ .ಧರ್ಮರಾಜ್. ಪರಮೇಶ್ .ರಮೇಶ್. ಯೋಗೇಶ್. ಶ್ರೀನಿವಾಸ್. ಲೋಕೇಶ್. ಮುಜಾಹಿದ್ ಭಾಷಾ .ಮುಬಾರಕ್. ಖಲೀಲ್. ದಾದಾಪೀರ್. ಗುತ್ತಿ. ಅಯೂಬ್. ಸಲೀಂ. ಇರ್ಫಾನ್. ವಾಜಿದ್ ಖಾನ್. ಮಹಿಳಾ ಘಟಕ ಜಿಲ್ಲಾಧ್ಯಕ್ಷರಾದ ಶ್ರೀಮತಿ ಬಸಮ್ಮ .ಮಂಜುಳಮ್ಮ. ಸಾಕಮ್ಮ .ಮಂಜುಳ ಮಾಂತೇಶ್ .ಅಮಿದ್ ಬಾನು. ಸುಜಾತ .ಲಲಿತಮ್ಮ. ಇಮ್ರಾನ್ ಮತ್ತಿತರು ಉಪಸ್ಥಿತರಿದ್ದರು