ಕಾಂಗ್ರೆಸ್ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕರ ಸಭೆ.

ದಾವಣಗೆರೆ: ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷದ ಶಕ್ತಿ ಹಾಗಾಗಿ ಕಾರ್ಯಕರ್ತರು ಶ್ರಮ ವಹಿಸಿ ಸಂಘಟನೆ ಮಾಡಿದರೆ ಅಧಿಕಾರದ ಅವಕಾಶ ಸಿಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ವಿಭಾಗದ ಜಿಲ್ಲಾ ಪಧಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾರ್ಯಕರ್ತರು ಪಕ್ಷದ ಜೀವಾಳ ಆದ್ದರಿಂದ ಬೇರೆ ಬೇರೆ ನಾಯಕರ ಹಿಂದೆ ಅಲೆಯುವುದನ್ನು ಬಿಟ್ಟು ತಾವೇ ಸ್ವತಃ ಬೇರು ಮಟ್ಟದಿಂದ ಪಕ್ಷವನ್ನು ಸಂಘಟಿಸಿದರೆ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ನೀವೇ ನಾಯಕರಾಗಬಹುದು ಎಂದು ಸಲಹೆ ನೀಡಿದರು.
ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ವಿಭಾಗದ ಜಿಲ್ಲಾಧ್ಯಕ್ಷ ನಂಜಾ ನಾಯ್ಕ್ ಮಾತನಾಡಿ ನನಗೆ ಈ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನಿಜಕ್ಕೂ ನನ್ನ ಅದೃಷ್ಟವೇ ಸರಿ ಏಕೆಂದರೆ ಇಲ್ಲಿ ಸುಮಾರು 164 ಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕರ ವರ್ಗಗಳಿದ್ದು ಸಮಾಜದಲ್ಲಿ ಈ ವರ್ಗದ ಕಾರ್ಮಿಕರನ್ನು ನೋಡುವ ದೃಷ್ಟಿ ಕೋನವೇ ಬೇರೆಯಾಗಿದೆ ಈಗ ಅವರೆಲ್ಲರನ್ನೂ ಗಣನೆಗೆ ತೆಗೆದುಕೊಂಡು ಸಂಘಟಿಸಿಸುವ ಕೆಲಸ ತುಂಬಾ ಪುಣ್ಯದ ಕೆಲಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನೋರ್ವ ಅತಿಥಿ ನಾಗಪ್ಪ ಮಾತನಾಡಿ ಪಕ್ಷ ಎಲ್ಲರಿಗೂ ಅವಕಾಶ ನೀಡುತ್ತದೆ ಆದರೆ ಸಂಯಮ ತಾಳ್ಮೆ ಇರಬೇಕು ಎಂದು ಹೇಳಿ ಕಾಂಗ್ರೆಸ್ ಪಕ್ಷದ ಇತಿಹಾಸದ ಬಗ್ಗೆ ತಿಳಿಸಿದರು.
ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ನಾಗರಾಜ್ ಮಾತನಾಡಿ ಕಾಂಗ್ರೆಸ್ ಪಕ್ಷವು ಶ್ರಮವಹಿಸಿ ಪಕ್ಷಕ್ಕಾಗಿ ಸಿಸ್ವಾರ್ಥ ಸೇವೆ ಸಲ್ಲಿಸುವವರನ್ನು ಗುರುತಿಸಿ ಖಂಡಿತ ಉನ್ನತ ಸ್ಥಾನ ಮಾನ ನೀಡುತ್ತದೆ ಇದಕ್ಕೆ ಉದಾಹರಣೆ ನಾನೇ ಇದ್ದೇನೆ ನನಗೆ ಹಾಗೂ ನನ್ನ ಶ್ರೀಮತಿ ಒಟ್ಟು 4 ಬಾರಿ ಪಕ್ಷ ಅವಕಾಶ ಮಾಡಿಕೊಟ್ಟು ನನ್ನ ಮೇಲೆ ನಂಬಿಕೆ ಇತ್ತು ವಿವಿಧ ಹುದ್ದೆಗಳನ್ನು ನೀಡಿದೆ ಇದಕ್ಕಾಗಿ ನಾನು ಯಾವಾಗಲೂ ಪಕ್ಷಕ್ಕೆ ಚಿರರುಣಿಯಾಗಿರುವೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಲಿಯಾಖತ್ ಅಲಿ,ಉಪಾಧ್ಯಕ್ಷ ಬಾಷಾ, ಪ್ರಧಾನ ಕಾರ್ಯದರ್ಶಿ ಹರೀಶ್ ಹೆಚ್, ಮೊಹಮ್ಮದ್ ಜಿಕ್ರಿಯಾ,ಕುಮಾರ್,ಶಶಿ, ಪ್ರಕಾಶ್ ಇನ್ನೂ ಮುಂತಾದವರು ಭಾಗವಹಿಸಿದ್ದರು.

 
                         
                       
                       
                       
                       
                       
                       
                      