ಬೆಂಗಳೂರಿನಲ್ಲಿ ಕನ್ನಡ ಭಾಷೆ ಕನ್ನಡಿಗರೇ ಸುರಕ್ಷಿತವಾಗಿಲ್ಲ : ಬಸವಪ್ರಭು ಶ್ರೀ

ದಾವಣಗೆರೆ: ಪರಭಾಷಿಕರಿಂದ ತುಂಬ ತುಳುಕುತ್ತಿರುವ ಬೆಂಗಳೂರಿನಲ್ಲಿ ಕನ್ನಡ ಭಾಷೆ, ಕನ್ನಡಿಗರೇ ಸುರಕ್ಷಿತವಾಗಿಲ್ಲದ ಪರಿಸ್ಥಿತಿ ದಾವಣಗೆರೆ-ಚಿತ್ರದುರ್ಗಗಳನ್ನು ಕೇಂದ್ರವಾಗಿಟ್ಟುಕೊಂಡು ನೂತನ ರಾಜಧಾನಿ ಬಸವಪ್ರಭು ಸ್ವಾಮೀಜಿ ರಾಜ್ಯ ಒತ್ತಾಯಿಸಿದರು. ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ, ಸಾನಿಧ್ಯ ವಹಿಸಿ ಮಾತನಾಡಿದರು

ಬೆಂಗಳೂರಿಗಿಂತಲೂ ರಾಜಧಾನಿಯಾಗುವ ಎಲ್ಲಾ ಅರ್ಹತೆ ಇದ್ದ ದಾವಣಗೆರೆ ಹಿಂದಿನ ಹಿರಿಯರ ದೂರದೃಷ್ಟಿ ಕೊರತೆಯಿಂದ ಅವಕಾಶ ತಪ್ಪಿತ್ತು. ಈಗಲೂ ಕಾಲ ಮಿಂಚಿಲ್ಲ ಎಂಬುದನ್ನು ಸರ್ಕಾರ ಮನಗಾಣಲಿ ಎಂದರು. ದಾವಣಗೆರೆ, ಚಿತ್ರದುರ್ಗ ಕೇಂದ್ರವಾಗಿಟ್ಟುಕೊಂಡು, ವಿಮಾನ ನಿಲ್ದಾಣ ನಿರ್ಮಿಸಬೇಕು. ನಾಡಿನ ನಾಲ್ಕೂ ದಿಕ್ಕಿಗೂ ರಸ್ತೆ ಹೊಂದಿರುವ ರಾಜ್ಯದ ಕೇಂದ್ರ ಬಿಂದುವಾದ ಈ ಊರನ್ನು ಹೊಸ ರಾಜಧಾನಿ ಘೋಷಣೆ ಮಾಡಲಿ, ತಮಿಳರು, ತೆಲುಗರು, ಮಲೆಯಾಳಿ, ಉತ್ತರ ಭಾರತೀಯರಿಂದ ಕನ್ನಡ ಭಾಷೆ, ಕನ್ನಡಿಗರು ಬೆಂಗಳೂರಿನಲ್ಲಿ ಏನೆಲ್ಲಾ ಅನುಭವಿಸುತ್ತಿದ್ದಾರೆಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿ ದಾವಣಗೆರೆ ರಾಜಧಾನಿಯಾಗುವ ಎಲ್ಲಾ ಅರ್ಹತೆ ಇರುವ ಊರಾಗಿದ್ದು ಈ ಬಗ್ಗೆ ರಾಜಕೀಯ ನಾಯಕರು, ವಿಚಾರವಂತರು, ಅಭಿವೃದ್ಧಿ ಪರ ಕಾಳಜಿಯುಳ್ಳವರು, ಮಠಾಧೀಶರು ಧ್ವನಿ ಎತ್ತಬೇಕು ಎಂದು ಅವರು ಕರೆ ನೀಡಿದರು.

ಬೆಂಗಳೂರಿನಲ್ಲಿ ವಸತಿಗಷ್ಟೇ ಅಲ್ಲ, ಕುಡಿಯುವ ನೀರಿಗೂ ಸಂಕಷ್ಟವಿದೆ. ಕಾವೇರಿ ನೀರು ಸಾಲುತ್ತಿಲ್ಲವೆಂದು ಈಗ ಲಿಂಗನಮಕ್ಕಿಯಿಂದ ಕುಡಿಯುವ ನೀರು ಒಯ್ಯಲು ಸಾವಿರಾರು ಕೋಟಿ ಯೋಜನೆ ರೂಪಿಸುತ್ತಿದ್ದಾರೆ. ಇಷ್ಟೆಲ್ಲಾ ಸಂಕಷ್ಟಪಡುವ ಬದಲು ಹೊನ್ನಾಳಿ ಬಳಿ ಅಣೆಕಟ್ಟು ಕಟ್ಟಿ ದಾವಣಗೆರೆಯನ್ನೇ ರಾಜಧಾನಿಯನ್ನಾಗಿ ಘೋಷಿಸಲಿ. ನಾಡಿನ ಅಷ್ಟ ದಿಕ್ಕಿಗೂ ಕೇಂದ್ರವಾದ ಈ ಊರಿನ ಬಗ್ಗೆಯೂ ಗಮನಹರಿಸಬೇಕು. ವಿಶ್ವ ಕ.ರ.ವೇ. ಕನ್ನಡ ರಾಜ್ಯೋತ್ಸವದ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸುವ ಮಾದರಿ ಕೆಲಸ ಮಾಡುತ್ತಿದೆ ಎಂದು ಅವರು ಶ್ಲಾಘಿಸಿದರು.

ಮಾಯಕೊಂಡ ಶಾಸಕ ಕೆಎಸ್.ಬಸವಂತಪ್ಪ ಮಾತನಾಡಿ, ನೆಲ, ಜಲ, ಭಾಷೆ. ಕನ್ನಡಿಗರ ರಕ್ಷಣೆಗೆಂದು ಸ್ಥಾಪನೆಯಾದ ಅನೇಕ ಕನ್ನಡ ಪರ ಸಂಘಟನೆಗಳು ಕೆಲಸ ಮಾಡುತ್ತಿವೆ. ಆದರೆ ಕೆಲ ಸಂಘಟನೆಗಳು, ಅವುಗಳ ಮುಖಂಡರು ಕಮರ್ಷಿಯಲು ಆಗಿರುವುದನ್ನು ಗಮನಿಸಬಹುದು. ಆದರೆ, ಈ ವಿಶ್ವ ಕರವೇ ನಿಸ್ವಾರ್ಥ ಸೇವೆ ಮಾಡುತ್ತಿದೆ. – ಜನರ ಹೃದಯವನ್ನು ಗೆದ್ದು ಕೆ.ಜಿ.ಯಲ್ಲಪ್ಪ ಮತ್ತು ತಂಡ ಕೆಲಸ ಮಾಡುತ್ತಿದೆ. ಕನ್ನಡ ಈ ಭಾಷೆ, ನೆಲ, ದಾವಣಗೆರೆಯಲ್ಲಿ ಸುಭದ್ರವಾಗಿದೆ. ನಿಮ್ಮ ಪ್ರತಿ ಕೆಲಸದ ಜೊತೆಗೆ ನಾನೂ ಇರುತ್ತೇವೆ. ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಪಾದರಸದಂತೆ ಕೆಲಸ ಮಾಡುತ್ತಿದ್ದು, ತಮ್ಮ ಆರೋಗ್ಯಕ್ಕೆ ನೀಡುವಷ್ಟೇ ಕಾಳಜಿ ಕೆಲಸ, ಜಿಲ್ಲೆಗಾಗಿ ತೋರಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮಾತನಾಡಿ, – ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಒಬ್ಬ ಮರಾಠನಾಗಿದ್ದರೂ, ಕನ್ನಡ ನಾಡು, ನುಡಿ, ನೆಲ. ಜಲ ಭಾಷೆ ಬಗ್ಗೆ ಸಾಕಷ್ಟು ಕಾಳಜಿ ವ ಹೊಂದಿದ್ದಾರೆ. ಮರಾಠರು ಅಂದರೆ ಕನ್ನಡ ವಿರೋಧಿಗಳೆಂಬ ಭಾವನೆಯನ್ನು ಅಳಿಸಿ ಹಾಕುವಂತೆ ಬೆಳಗಾವಿಯಲ್ಲಿ ರಕ್ತವನ್ನು ಹರಿಸಿ, ಕೆ.ಜಿ.ಯಲ್ಲಪ್ಪ ಹೋರಾಟ ಮಾಡಿದವರು. ಹಿಂದು, ಮುಸ್ಲಿಂ, ಕ್ರೆಸ್ತರು ಸೇರಿದಂತೆ ಎಲ್ಲಾ ಜಾತಿ, ಧರ್ಮೀಯರನ್ನು ಒಳಗೊಂಡ ವಿಶ್ವ ಕರವೇ ಕನ್ನಡ, ನಾಡು, ನುಡಿ, ನೆಲ, ಜಲಕ್ಕಾಗಿ ಮಾದರಿ ಕೆಲಸ ಮಾಡುತ್ತಿದೆ. ಹಿರಿಯರನ್ನು ಗೌರವಿಸುವ ಸಂಸ್ಕೃತಿ ಈ ವೇದಿಕೆಯಲ್ಲಿ ಕಾಣಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಜೆ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾಡಳಿತದಿಂದ ಮಾಡಿದ್ದೇವೆ. ಇಡೀ ತಿಂಗಳು ಶನಿವಾರ, ಭಾನುವಾರ ಸಂಜೆ ಇಲ್ಲಿನ ಗಾಜಿನ ಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದ್ದೆವೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ|| ಪ್ರಭಾ ಮಲ್ಲಿಕಾರ್ಜುನ್ ಸಹ ಆಶಯದಂತೆ ಕನ್ನಡವನ್ನು ಕಟ್ಟುವ ಕೆಲಸ ಆಗುತ್ತಿದೆ. ಮಕ್ಕಳಿಗೆ ಆಂಗ್ಲ ಮಾಧ್ಯಮಕ್ಕೆ ಸೇರಿಸಿದ್ದರೂ ಮನೆಯಲ್ಲಿ ಕನ್ನಡ ಭಾಷೆ ಕಲಿಸಿ. ಕನ್ನಡ ಭಾಷೆಯನ್ನು ಬಳಸಿ, ರಾಜ್ಯ ಭಾಷೆ ಕನ್ನಡವಾಗಿದ್ದು, ಸರ್ಕಾರಿ ಕಚೇರಿಗಳಲ್ಲೂ ಕನ್ನಡ ಬಳಸಲಾಗುತ್ತಿದೆ ಎಂದರು. ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ, ಉಪ ಮೇಯರ್ ಸೋಗಿ ಶಾಂತಕುಮಾರ, ಪಾಲಿಕೆ ಸದಸ್ಯ ಅಬ್ದುಲ್ ಲತೀಫ್, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ, ವಕೀಲ ರಜ್ಜಿಯಾನ್, ಗುರುಕುಲ ವಿದ್ಯಾಸಂಸ್ಥೆಯ ಆರ್.ಅಬ್ದುಲ್, ಬಿ.ಎನ್.ಇರ್ಷಾದ್ ಅಹ್ಮದ್ ಇತರರು ಇದ್ದರು. ಇದೇ ವೇಳೆ ಡಾ.ಅಶೋಕ ಪಾಳೇದ,ರಮೇಶ ಜಹಗೀರದಾರ್, ಜೆ.ಎಸ್. ವೀರೇಶ್, ಶಿವರಾಜ ಈಳಿಗೇರ, ಬಲ್ಲೂರು ರವಿಕುಮಾರ್, ಹೆಚ್. ಮಲ್ಲೇಶ, ಪಾಲವ್ವನಹಳ್ಳಿ ಪ್ರ ಸನ್ನಕುಮಾರ್, ಕೆ.ಎನ್. ವೆಂಕಟೇಶ್, ಓಂಕಾರಯ್ಯ ತವನಿಧಿ, ಪಿ.ಬಿ. ರವಿಕುಮಾರ್, ಡಾ|| ಅನೀಸ್, ಫಾರೂಕ್ ಹಷ್ಕಿ, ಎಂ.ಡಿ. ಮುಲ್ಲಾ, ಪಿ. ಬಸವರಾಜಪ್ಪ, ಎಸ್. ಪುಣ್ಯಶ್ರೀ, ಸುಜನ್ ಆಚಾರ್ಯರನ್ನು ಸನ್ಮಾನಿಸಲಾಯಿತು. ಸಂತೋಷ ದೊಡ್ಡನಿ, ಅಮ್ಮದ್ ಅಲಿ. ಮೆಹಬೂಬ್, ಸಿದ್ದೇಶ. ಭೀಮಪ್ಪ, ಬಿ.ಈ.ದಯಾನಂದ ಇತರರು ಇದ್ದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡದ ಗೀತೆಗಳನ್ನು ಹಾಡುವ ಮೂಲಕ ಶಾಸಕ ಕೆ.ಎಸ್. ಬಸವಂತಪ್ಪ ಮತ್ತು ಎಸ್ಪಿ ಉಮಾಪ್ರಶಾಂತ್ ಅವರು ಗಮನ ಸೆಳೆದರು. `ನಾಗರಹಾವು’ ಚಿತ್ರದ `ಬಾರೇ, ಬಾರೇ ಚಂದದ ಚೆಲುವಿನ ತಾರೆ’ ಹಾಡನ್ನು ಬಸವಂತಪ್ಪ ಹಾಡಿದರು. ಎಸ್ಪಿ ಉಮಾ ಪ್ರಶಾಂತ್ ಅವರು ವರ ಕವಿ ದ.ರಾ. ಬೇಂದ್ರೆ ಅವರ `ಅಂತರಂಗದಾ ಮೃದಂಗ ಅಂತು ತೋಂ ತನನ’ ಭಾವಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.

Leave a Reply

Your email address will not be published. Required fields are marked *

error: Content is protected !!