Kanuma: ಕಣುಮ ಮರ್ಡರ್ ಕೇಸ್; ಪತ್ರಕರ್ತನಿಂದ ಕೊಲೆ ಆರೋಪಿಗೆ 3 ಲಕ್ಷ ಸಹಾಯ.! ಆರೋಪಿಗಳ ಬಗ್ಗೆ ಎಸ್ ಪಿ ಮಾಹಿತಿ

kanuma alias santhosh murder case culprits surrendered in Holalkere police station

ದಾವಣಗೆರೆ: (Kanuma@Santhosh) ದಿನಾಂಕ:05/05/2025 ರಂದು ಸಂಜೆ 5.00 ರಿಂದ 5.30 ಗಂಟೆಯ ಮದ್ಯದ ಅವಧಿಯಲ್ಲಿ ದಾವಣಗೆರೆ ನಗರ ಉಪ ವಿಭಾಗದ ವಿದ್ಯಾನಗರ ಪೊಲೀಸ್ ಠಾಣಾ ಸರಹದ್ದಿನ ದಾವಣಗೆರೆಯ ಹದಡಿ ರಸ್ತೆಯ ಸೋಮೇಶ್ವರ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗದ ತರಳಬಾಳು ನಗರ 16 ನೇ ಕ್ರಾಸ್ ನಲ್ಲಿರುವ # 1341/5 ರ ಪವರ್ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ನ ಕಟ್ಟಡದಲ್ಲಿ ಆರೋಪಿತರಾದ ಸಂತೋಷ ಮತ್ತು ಇತರರು ಸೇರಿ ಸಂತೋಷ ಕುಮಾರ.ಕೆ @ ಕಣುಮ ಇವನನ್ನು ಹರಿತವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿದ್ದ ಘಟನೆ ನಡೆದಿತ್ತು.

ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 103/2025 ಕಲಂ 500 103, 189(2), 191(2), 191(3) ರೆ/ವಿ,190 ಬಿ ಎನ್ ಎಸ್ 2023, ಕಲಂ: 3(2)(ಎ), 3(2)(ವ-ಎ) ಎಸ್.ಸಿ/ಎಸ್.ಟಿ ಪಿಎ ಆಕ್ಟ್-1989 ರೀತ್ಯಾ ಪ್ರಕರಣ ದಾಖಲಿಸಿರುತ್ತದೆ, ಸದರಿ ಕೇಸಿನಲ್ಲಿ ದಾವಣಗೆರೆಯ ಓರ್ವ ಪತ್ರಕರ್ತರ ಕೊಲೆ ಆರೋಪಿಗೆ ಮೂರು ಲಕ್ಷ ಹಣ ನೀಡಿದ್ದ ವಿಷಯ ಬೆಳಕಿಗೆ ಬಂದಿದ್ದು, ಇನ್ನೂ ಕೆಲವರು ಹಣದ ಸಹಾಯ ಸೇರಿದಂತೆ ವಿವಿಧ ರೀತಿಯಲ್ಲಿ ಸಹಾಯ ಮಾಡಿರುವ ಬಗ್ಗೆ ಮಾಹಿತಿಯ ಆಧಾರದಲ್ಲಿ ಬಂಧಿಸಲಾಗಿದೆ.

ಸದರಿ ಕೇಸಿನಲ್ಲಿ ಆರೋಪಿತರನ್ನು ಪತ್ತೆ ಮಾಡಲು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ ಐಪಿಎಸ್, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ ಸಂತೋಷ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಂಜುನಾಥ ರವರ ಮಾರ್ಗದರ್ಶನದಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲಾ ಡಿ.ಎಸ್.ಪಿ ರವರುಗಳ ನೇತೃತ್ವದಲ್ಲಿ ಪಿಐ /ಪಿ.ಎಸ್.ಐ ಹಾಗೂ ಸಿಬ್ಬಂದಿರವರುಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿತ್ತು. ಸದರಿ ತಂಡಗಳು ತಾಂತ್ರಿಕ ನೆರವಿನೊಂದಿಗೆ ಮೇಲ್ಕಂಡ ಪ್ರಕರಣದಲ್ಲಿ ತನಿಖೆ ಕೈಗೊಂಡು ಈ ಕೆಳಕಂಡ ಆರೋಪಿತರನ್ನು ದಸ್ತಗಿರಿ ಮಾಡಿರುತ್ತದೆ.

ಆರೋಪಿಗಳ ವಿವರ:

1) ಸಂತೋಷ @ ಚಾವಳಿ ಸಂತು ತಂದೆ ಪರಮೇಶನಾಯ್ಕ, 28 ವರ್ಷ, ಲಂಬಾಣಿ ಜನಾಂಗ, ಟೈಲ್ಸ್ ಕೆಲಸ, ವಾಸ 4 ನೇ ಕ್ರಾಸ್, ಕಬ್ಬರು ಬಸಪ್ಪ ನಗರ, ಭಾರತ್ ಕಾಲೋನಿ, ದಾವಣಗೆರೆ,

2) ನವೀನ್ @ ಸೈಲೆಂಟ್ ನವೀನ್ ತಂದೆ ಮಹೇಶಪ್ಪ @ ಮಲ್ಲೇಶಪ್ಪ, 21 ವರ್ಷ, ಎ.ಕೆ ಜನಾಂಗ, ಪೇಂಟಿಂಗ್ ಕೆಲಸ, ವಾಸ 4 ನೇ ಕ್ರಾಸ್, ಹರಳಯ್ಯ ನಗರ, ಹಳೆ ಚಿಕ್ಕನಹಳ್ಳಿ, ದಾವಣಗೆರೆ,

3) ನವೀನ್ @ ಬ್ರಾಕಿ ನವೀನ್ ತಂದೆ ಮೋಹನ್ ಕುಮಾರ, 25 ವರ್ಷ, ಎ.ಕೆ ಜನಾಂಗ, ಹಮಾಲಿ ಕೆಲಸ. ವಾಸ 4 ನೇ ಕ್ರಾಸ್, ಬಾಬು ಜಗಜೀವನ್ ರಾಂ ನಗರ, ಬೂದಾಳ್ ರಸ್ತೆ, ದಾವಣಗೆರೆ,

4) ಎ.ಕಾರ್ತಿಕ್ ತಂದೆ ಅಂಜಿನಪ್ಪ, 29 ವರ್ಷ, ನಾಯಕರ ಜನಾಂಗ, ಟೈಲ್ಸ್ ಕೆಲಸ, ವಾಸ 10 ನೇ ಕ್ರಾಸ್, ಆರ್.ಎಂ.ಸಿ ರಸ್ತೆ, ಭಾರತ್ ಕಾಲೋನಿ, ದಾವಣಗೆರೆ,

5) ರಾಜ @ ತಾರಕ್ ತಂದೆ ಹನುಮಂತಪ್ಪ, 25 ವರ್ಷ, ಎ.ಕೆ ಜನಾಂಗ, ಹಮಾಲಿ ಕೆಲಸ, ವಾಸ ಬೂದಾಳ್ ರಸ್ತೆ, ಬಾಬು ಜಗಜೀವನ್ ರಾಂ ನಗರ, ದಾವಣಗೆರೆ, 6) ಬಸವರಾಜ್ @ ಪಿಂಗಿ ತಂದೆ ಮಂಜುನಾಥ, 20 ವರ್ಷ, ಕುರುಬರ ಜನಾಂಗ, ಟೈಲ್ಸ್ ಕೆಲಸ, ವಾಸ 8 ನೇಕ್ರಾಸ್, ಆರ್.ಎಂ.ಸಿ ರಸ್ತೆ, ಭಾರತ್ ಕಾಲೋನಿ, ದಾವಣಗೆರೆ,

7) ಮಾರುತಿ ತಂದೆ ನಾಗರಾಜಪ್ಪ, 25 ವರ್ಷ, ಚಲುವಾದಿ ಜನಾಂಗ, ಹೋಟೆಲ್ ಕೆಲಸ, ವಾಸ 2 ನೇ ಕ್ರಾಸ್, ಆರ್.ಎಂ.ಸಿ ರಸ್ತೆ, ಭಾರತ್ ಕಾಲೋನಿ, ದಾವಣಗೆರೆ,

8) ಪ್ರಭು ತಂದೆ ಬಸಪ್ಪ, 30 ವರ್ಷ, ಎ.ಕೆ ಜನಾಂಗ, ಹಮಾಲಿ ಕೆಲಸ, ವಾಸ ಬೂದಾಳ್ ರಸ್ತೆ, ಬಾಬು ಜಗಜೀವನ್ ರಾಂ ನಗರ, ದಾವಣಗೆರೆ,

9) ಜಯಸೂರ್ಯ @ ಪಿ.ಟಿ ತಂದೆ ಷಣ್ಮುಖಪ್ಪ, 20 ವರ್ಷ, ಹೊನ್ನಿಯರ್ ಜನಾಂಗ, 1 ನೇ ವರ್ಷದ ಬಿಕಾಂ ವಿದ್ಯಾರ್ಥಿ, ವಾಸ ಅವರಗೆರೆ, ದಾವಣಗೆರೆ ಮತ್ತು

10) ಭರತ್ @ ಸ್ಲಂ ತಂದೆ ಉಮಾಪತಿ, 26 ವರ್ಷ, ಲಂಬಾಣಿ ಜನಾಂಗ, ಆಟೋ ಡ್ರೈವರ್ ಕೆಲಸ. ವಾಸ ಆರ್.ಎಂ.ಸಿ ರಸ್ತೆ, ಭಾರತ್ ಕಾಲೋನಿ, ದಾವಣಗೆರೆ, ಹಾಲಿ ವಾಸ ಲಗ್ಗೆರೆ, ವಿಶಾಲ್ ಮಾರ್ಟ್ ಹತ್ತಿರ, ಮುನೇಶ್ವರ ದೇವಸ್ಥಾನ ರಸ್ತೆ, ಬೆಂಗಳೂರು

11) ಸಂದೀಪ್ ಬಿನ್ ನಾಗರಾಜ್ 25 ವರ್ಷ, ಪ್ರೆಸ್‌ನಲ್ಲಿ ಕೆಲಸ ಲಿಂಗಾಯಿತ ಆಂಜನೇಯ ಬಡಾವಣೆ 2ನೆ ಕ್ರಾಸ್ ದಾವಣಗೆರೆ.

12) ಸುರೇಶ್ ಆರ್ @ ಸೂರ್ಯಪ್ರಕಾಶ್ ಬಿನ್ ರಮೇಶ್ 38 ವರ್ಷ ಭೋವಿ ಜನಾಂಗ ಕದಂಬ ಕೇಸರಿ ಪ್ರೆಸ್ ರಿಪೋರ್ಟರ್ ಶ್ರೀರಾಮನಗರ ದಾವಣಗೆರೆ.

13) ಶಿವಪ್ಪ ಎ.ಕೆ @ ಕಬ್ಬಡಿ ಶಿವು @ ಚಿಕ್ಕನಹಳ್ಳಿ ಶಿವು ಬಿನ್ ಮಂಜಪ್ಪ ನಲ್ಕುಂದ 35 ವರ್ಷ ಆದಿ ಕರ್ನಾಟಕ ಜನಾಂಗ ಕೂಲಿ ಕೆಲಸ,  ಹಳೆ ಚಿಕ್ಕನಹಳ್ಳಿ ದಾವಣಗೆರೆ,

14) ವಿಜಯನಾಯ್ಕ @ ಗಡ್ಡ ವಿಜಿ ಬಿನ್ ಕೃಷ್ಣಾನಾಯ್ಕ 31 ವರ್ಷ ರಿಯಲ್ ಎಸ್ಟೇಟ್ ಕೆಲಸ ಭಾರತ್ ಕಾಲೋನಿ 5ನೇ ಕ್ರಾಸ್ ದಾವಣಗೆರೆ.

15) ವಿನಯ ಬಿನ್ ಪರಮೇಶ್ ನಾಯ್ಕ 25 ವರ್ಷ ಲಂಬಾಣಿ ಜನಾಂಗ ತರಕಾರಿ ವ್ಯಾಪಾರ ಸರಸ್ವತಿ ಬಡಾವನೆ ಡಾಬಾಸ್ಟಾಪ್ ಹತ್ತಿರ ದಾವಣಗೆರೆ.

16) ಧನಂಜಯ @ ಧನು ಬಿನ್ ನಾಗರಾಜ್ 35 ವರ್ಷ ಲಂಬಾಣಿ ಜನಾಂಗ ಬೌನ್ಸರ್ ಕೆಲಸ ತೋಳಹುಣಸೆ ಕೆಳಗಿನ ಹಟ್ಟಿ ದಾವಣಗೆರೆ

17) ರವಿ @ ಹದಡಿ ರವಿ ಬಿನ್ ತಿಪ್ಪಣ್ಣ 45 ವರ್ಷ ನಾಯಕ ಜನಾಂಗ ವ್ಯವಸಾಯ ಹದಡಿ ಗ್ರಾಮ ದಾವಣಗೆರೆ.

18) ಕಡ್ಡಿ ರಘು ಬಿನ್ ಬಸವರಾಜಪ್ಪ 38 ವರ್ಷ ನಾಯಕ ಜನಾಂಗ ಮೊಟ್ಟೆ ವ್ಯಾಪಾರ ದುರ್ಗಮ್ಮನ ದೇವಸ್ಥಾನದ ಹತ್ತಿರ ನಿಟ್ಟುವಳ್ಳಿ ದಾವಣಗೆರೆ.

19) ಮಂಜುನಾಥ್ ಎಂ @ ಕಾರದಪುಡಿ ಮಂಜ ಬಿನ್ ಮಹೇಶಪ್ಪ 23 ವರ್ಷ ಆದಿ ಕರ್ನಾಟಕ ಜನಾಂಗ ತರಕಾರಿ ವ್ಯಾಪಾರ ಹಳೆ ಚಿಕ್ಕನಹಳ್ಳಿ ದಾವಣಗೆರೆ.

20) ಸಂತೋಷ್ ಕುಮಾರ್ @ ಇಟಗಿ ಸಂತು ಬಿನ್ ಚಂದ್ರಪ್ಪ 35 ವರ್ಷ ಭೋವಿ ಜನಾಂಗ ರಿಯಲ್ ಎಸ್ಟೇಟ್ ಕೆಲಸ, ಭಾರತ್ ಕಾಲೋನಿ 6ನೇ ಕ್ರಾಸ್ ದಾವಣಗೆರೆ.

ಸದರಿ ಪ್ರಕರಣದಲ್ಲಿ ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ್ದ ಆಟೋ, ಬೈಕ್‌ಗಳು, ಲಾಂಗ್ ಗಳು, ಚಾಕುಗಳು, 3 ಜನ ಆರೋಪಿತರು ಕೃತ್ಯ ನಡೆದ ಸಮಯದಲ್ಲಿ ಧರಿಸಿದ್ದ ಬಟ್ಟೆಗಳನ್ನು ಅಮಾನತ್ತುಪಡಿಸಿಕೊಂಡಿರುತ್ತದೆ.

ಮತ್ತು ಮೇಲ್ಕಂಡ ಆರೋಪಿತರಲ್ಲದೇ ಇನ್ನೂ ಕೆಲವು ಜನ ಆರೋಪಿತರು ಸದರಿ ಪ್ರಕಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ತನಿಖೆ ಮುಂದುವರೆದಿರುತ್ತದೆ, ಇವರಲ್ಲಿ ಕೆಲವರನ್ನು ನೂತನವಾಗಿ ರೌಡಿ ಶೀಟರ್ ಕೇಸ್ ಪ್ರಾರಂಭಿಸಲು ತಯಾರಿ ನಡೆಸಲಾಗಿದೆ ಎಂದು ದಾವಣಗೆರೆ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾಧ್ಯಮದವರಿಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!