ಕರಡಿ ದಾಳಿ ವ್ಯಕ್ತಿಗೆ ಗಂಭೀರ ಗಾಯ

ಜಗಳೂರು: ತಾಲ್ಲೂಕಿನ ಅಣಬೂರು ಗೊಲ್ಲರಹಟ್ಟಿ ಗ್ರಾಮದ
ಅಜ್ಜಪ್ಪ ತಂದೆ ಈರಪ್ಪ 47 ವರ್ಷದ ಎಂಬ ವ್ಯಕ್ತಿ ಮೇಲೆ ಕರಡಿ ದಾಳಿ ಮಾಡಿರುವ ಘಟನೆ ಜರುಗಿದೆ.. ರಾತ್ರಿ ಸುಮಾರು 8 ಗಂಟೆ ವೇಳೆಯಲ್ಲಿ ಗೊಲ್ಲರಹಟ್ಟಿ ಗ್ರಾಮದಿಂದ ಊರಿನ ಪಕ್ಕದ ಕುರಿಹಟ್ಟಿಗೆ ಹೋಗುವಾಗ ಅಣಬೂರು ಗೊಲ್ಲರಹಟ್ಟಿಯ ಹೋರಭಾಗದಲ್ಲಿ ಮೂರು ಕರಡಿಗಳು ಏಕಾಏಕಿ ದಾಳಿ ಮಾಡಿದ್ದು ಕುರಿಗಾಯಿ ಎದೆಯ ಭಾಗ ಕೈಕಾಲು ಹಾಗೂ ತಲೆಗೆ ತುಂಬ ಗಂಬೀರವಾದ ಗಾಯವಾದ ಹಿನ್ನೆಲೆಯಲ್ಲಿ ವ್ಯಕ್ತಿ ಅತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗ್ರಾಮದಲ್ಲಿ ಕಳೆದ ಒಂದು ತಿಂಗಳುಗಳ ಹಿಂದೆ ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯ ಮೇಲೆ ಸಹ ಕರಡಿ ದಾಳಿ ಮಾಡಿರುವ ಘಟನೆ ಮಾಸುವ ಮುನ್ನವೆ ಮತ್ತೊಂದು ದಾಳಿ ನೆಡೆದಿದೆ. ಸಂಬಂದಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕೈಗೊಂಡು ಸೂಕ್ತ ಪರಿಹಾರ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.