ಡಿ ಎಸ್ ಎಸ್ ಸಂಚಾಲಕ ಮಹಾಂತೇಶ್ ಗೆ ಒಲಿದ ಪ್ರತಿಷ್ಠಿತ ‘ಕರುನಾಡ ಚೇತನ ಪ್ರಶಸ್ತಿ’

ಧಾರವಾಡ: ಹರಿಹರದ ಕರ್ನಾಟಕ ದಲಿತ ಸಂಘರ್ಷ ಸಮಿತಿ. (ಪ್ರೊ.ಬಿ.ಕೃಷ್ಣಪ್ಪ ಬಣ)ಯ ತಾಲೂಕು ಸಂಚಾಲಕ ಪಿ. ಜೆ. ಮಹಾಂತೇಶ್ ರವರಿಗೆ ಧಾರವಾಡದಲ್ಲಿ ಶನಿವಾರ ಚೇತನ ಫೌಂಡೇಷನ್ ಸಂಸ್ಥೆ ನಡೆಸಿದ ರಾಜ್ಯೋತ್ಸವ ಸಂಭ್ರಮದಲ್ಲಿ ಕರುನಾಡ ಚೇತನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಜನಪರ ಹೋರಾಟ, ಸಮಾಜ ಸೇವೆ ಪರಿಗಣಿಸಿ ಇವರಿಗೆ ಈ ಪ್ರಶಸ್ತಿ ನೀಡಲಾಯಿತು. ಸಂಸ್ಥೆ ಅಧ್ಯಕ್ಷ ಚಂದ್ರಶೇಖರ್ ಮಾಡಲಗೆರೆ, ಸವಿತಾ ಕುಸಗಲ್, ಪ್ರವೀಣ್ ಬೆಳ್ಳೂಡ್ಡಿ ಇತರರಿದ್ದರು.