ಕಾಶಿ ಮಹಾ ಪೀಠದ ಮಂಗಳವೇಡಾದ ಕಾಶಿವಿಶ್ವೇಶ್ವರ ಸಾಂಸ್ಕೃತಿಕ ಭವನ ಇದೀಗ ಕೊವಿಡ್ ಕೆರ್ ಸೆಂಟರ್, ಶ್ರೀಗಳ ಕಾರ್ಯಕ್ಕೆ ಎಲ್ಲೆಡೆಯಿಂದ ಅಭೂತಪೂರ್ವ ಶ್ಲಾಘನೆ.

FB_IMG_1620060516007

ಹೆಚ್ ಎಂ ಪಿ ಕುಮಾರ್

ದಾವಣಗೆರೆ: ಸೋಲಾಪುರ್ ಜಿಲ್ಲಾ ಮಂಗಳವೇಡಾ ನಗರದಲ್ಲಿ ಕಾಶಿಪೀಠದ ಶ್ರೀ ಕಾಶಿವಿಶ್ವೇಶ್ವರ ಸಾಂಸ್ಕೃತಿಕ ಭವನವು ಲೋಕಕಲ್ಯಾಣ ಕಾರ್ಯಕ್ರಮಕ್ಕಾಗಿ ನಿರ್ಮಾಣಗೊಂಡಿದೆ. ಶ್ರೀ ಜಗದ್ಗುರು ಡಾಕ್ಟರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರು ಶ್ರೀ ಪೀಠದಿಂದ ಈ ಭವನವನ್ನು ನಿರ್ಮಿಸಿದ್ದಾರೆ.

ಇಲ್ಲಿ 4000 ಚದುರಡಿಯ ಒಂದು ಊಟದ ಮನೆ ಮತ್ತು 10000 ಚದರಡಿಯ ಒಂದು ಸಾಂಸ್ಕೃತಿಕ ಭವನವಿದ್ದು ಉಳಿದದ್ದೆಲ್ಲ ಓಪನ್ ಜಾಗವಿದೆ. ಜಾತಿ ಧರ್ಮಗಳ ಭೇದ ಭಾವ ಮಾಡದೆ ಎಲ್ಲರ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಲ್ಲಿ ಮುಕ್ತವಾದ ಅವಕಾಶವಿದೆ.

ಸೊಲಾಪುರದ ಮಂಗಳವೇಡ ನಗರದಲ್ಲಿರುವ ಕಾಶಿ ಪೀಠದ ಭವನದಲ್ಲಿ ಕೊವಿಡ್ ರೋಗಿಗಳಿಗಾಗಿ ನಿರ್ಮಿಸಿರುವ ಕೊವಿಡ್ ಕೇರ್ ಸೆಂಟರ್

ಕಳೆದ ವರ್ಷ ಕರೋನ ಮಹಾಮಾರಿಯು ಮಹಾರಾಷ್ಟ್ರದಲ್ಲಿ ಉಲ್ಬಣ ಸ್ಥಿತಿಗೆ ಏರಿದಾಗ ಸೋಲಾಪುರ ಸಂಸದರಾದ ಡಾಕ್ಟರ್ ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರ ಸೂಚನೆಯಂತೆ ಮತ್ತು ಸೋಲಾಪುರ ಜಿಲ್ಲಾಧಿಕಾರಿಗಳಾದ ಶ್ರೀ ಮಿಲಿಂದ ಶಂಬರಕರ ಅವರ ಅಪೇಕ್ಷೆ ಮೇರೆಗೆ ಏಳು ತಿಂಗಳ ಗಳವರೆಗೆ ಎಲ್ಲ ಪರಿಸರವನ್ನು ಕರೋನಾ ರೋಗಿಗಳ ಶುಶ್ರೂಷೆಗೆ ಉಚಿತವಾಗಿ ಕೊಡಲಾಗಿತ್ತು.

ಕಾಶಿ ಪೀಠದ ಸಾಂಸ್ಕೃತಿಕ ಭವನ

ಈ ವರ್ಷವೂ ಸಹ ಕರೋನಾ ರೋಗಿಗಳ ಶುಶ್ರೂಷೆಗಾಗಿ ಸೋಲಾಪುರ ಜಿಲ್ಲಾಧಿಕಾರಿಗಳ ಅಪೇಕ್ಷೆ ಮೇರೆಗೆ ಶ್ರೀ ಕಾಶಿ ಜಗದ್ಗುರು ಡಾಕ್ಟರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಮಂಗಳವೇಡಾದ ಕಾಶಿವಿಶ್ವೇಶ್ವರ ಸಾಂಸ್ಕೃತಿಕ ಭವನದ ಎರಡೂ ಭವನಗಳನ್ನು ಮತ್ತು ಸಂಪೂರ್ಣ ಪರಿಸರವನ್ನು ಕರೋನಾ ರೋಗಿಗಳ ಶುಶ್ರೂಷೆಗಾಗಿ ದಿನಾಂಕ 21-4-2021 ರಿಂದ ಉಚಿತವಾಗಿ ಕೊಡಲಾಗಿದೆ…

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!