ಕೆ ಡಿ ಪಿ ಸಭೆಯಲ್ಲಿ ” ಸ್ವಚ್ಚ ಸಂಕೀರ್ಣ ” ಕೈಪಿಡಿ ಬಿಡುಗಡೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ
ದಾವಣಗೆರೆ; ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಎ.ಬಸವರಾಜ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 14-7-2021 ರಂದು ಬೆಳಿಗ್ಗೆ ದಾವಣಗೆರೆ ಜಿಲ್ಲೆಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ( ಕೆ.ಡಿ.ಪಿ) ಜಿಲ್ಲಾಡಳಿತ ಆವರಣದಲ್ಲಿ ಇರುವ ತುಂಗಭದ್ರಾ ಸಭಾಂಗಣದಲ್ಲಿ ನಡೆಯಿತು.
ಸಭೆಗೆ ಮುನ್ನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ವತಿಯಿಂದ ಹೊರತಂದಿರುವ “ಸ್ವಚ್ಛ ಸಂಕೀರ್ಣ” ಕಸದಿಂದ ಸಂಪತ್ತಿನೆಡೆಗೆ ಹಾಗೂ ಜಲ ಜೀವನ ಮಿಷನ್ ( ಮನೆ ಮನೆಗೆ ನೀರು) ಕೈಪಿಡಿ ಯನ್ನು ಬಿಡುಗಡೆ ಮಾಡಲಾಯಿತು.
ದಾವಣಗೆರೆ ಸಂಸದರಾದ ಶ್ರೀ ಜಿ.ಎಮ್. ಸಿದ್ದೇಶ್ವರ, ಶಾಸಕರಾದ ಶ್ರೀ ಎಸ್.ಎ.ರವೀಂದ್ರನಾಥ, ಎಸ್. ವಿ.ರಾಮಚಂದ್ರ, ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ, ಜಿಲ್ಲಾ ಪಂಚಾಯತ ಸಿಇಒ ವಿಜಯ ಮಹಾಂತೇಶ್, ಪೋಲೀಸ್ ವರಿಷ್ಟಾಧಿಕಾರಿ ಸಿ ಬಿ ರಿಷ್ಯಂತ್ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿ ವರ್ಗದವರು ಹಾಜರಿದ್ದರು