ದಾವಣಗೆರೆಯಲ್ಲಿಂದು ಕರೊನಾ ಸ್ಪೋಟ ಖಾಸಗಿ ನರ್ಸಿಂಗ್ ಕಾಲೇಜಿನ 25 ವಿದ್ಯಾರ್ಥಿನಿಯರಿಗೆ ಸೋಂಕು

ದಾವಣಗೆರೆ ಕೊವಿಡ್ ಸುದ್ದಿ:
ನಿನ್ನೆ ಜಿಲ್ಲೆಯಲ್ಲಿ 9 ಜನರಲ್ಲಿ ಕಾಣಿಸಿಕೊಂಡ ಕೊರೋನ ಸೊಂಕು ಇಂದು ದಾವಣಗೆರೆ ಜಿಲ್ಲೆಯಲ್ಲಿ 47 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. 7666 ಜನರ ಗಂಟಲು ಮಾದರಿ ಪರೀಕ್ಷೆಯ ವರದಿ ಬಾಕಿ ಇದ್ದು, ಇಂದು 1801 ಜನರ ವರದಿ ನೆಗೆಟಿವ್ ಬಂದಿದೆ.
3 ಜನ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಕೇರಳದ 25 ವಿದ್ಯಾರ್ಥಿನಿಯರಿಗೆ ಕೊರೊನಾ.
ಕಾಲೇಜಿನ ವಿದ್ಯಾರ್ಥಿ/ನಿಯರು ಮತ್ತು ಸಿಬ್ಬಂದಿಗಳನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ವಿದ್ಯಾರ್ಥಿ/ನಿಯರನ್ನ ಕೊರೋನ ಟೆಸ್ಟ್ ಗೆ ಒಳಪಡಿಸಲಾಗಿದೆ, ಇಂದು ಒಟ್ಟು 25 ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಕೊರೋನ ಪಾಸಿಟಿವ್ ಬಂದಿದೆ. ಮಕ್ಕಳು ಓದುತ್ತಿದ್ದ ತರಗತಿಗಳ 132 ವಿದ್ಯಾರ್ಥಿಗಳು,
ಇಂದು ಬಂದಿರುವ ಪಾಸಿಟಿವ್ ವರದಿಗಳಲ್ಲಿ ನಗರದ ಖಾಸಗಿ ನರ್ಸಿಂಗ್ ಕಾಲೇಜಿನ 25 ವಿದ್ಯಾರ್ಥಿನಿಯರು ಪಾಸಿಟಿವ್ ಬಂದಿರುತ್ತಾರೆ. ಎಲ್ಲರೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರೂ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ವಾಸವಿದ್ದು, ಅಲ್ಲಿನ 134 ವಿದ್ಯಾರ್ಥಿನಿಯರು, 15 ಜನ ಅಡುಗೆ ಸಿಬ್ಬಂದಿ ಮತ್ತು ಪರಿಚಾರಕರ ಗಂಟಲು ಮಾದರಿ ದ್ರವ ಪಡೆಯಲಾಗಿದೆ. ವಿದ್ಯಾರ್ಥಿನಿಲಯವನ್ನು ‘containment zone’ ಎಂದು ಮಾನ್ಯ ಜಿಲ್ಲಾಧಿಕಾರಿಗಳು ಆದ್ದೇಶಿಸಿದ್ದು ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಪ್ರತಿದಿನ 10 ದಿನಗಳ ಕಾಲ flu survey ನಡೆಸಲಾಗುತ್ತದೆ.
ರೂಪಾಂತರಿ ವೈರಸ್ ಜಿಲ್ಲೆಯಲ್ಲಿ ಯಾರಲ್ಲೂ ಕಂಡು ಬಂದಿರುವುದಿಲ್ಲ.
ಇಂದು ಬಂದಿರುವ ಕೊವಿಡ್ ಪಾಸಿಟಿವ್ ಎಲ್ಲರೂ ಕೇರಳದವರು. 2 ತಿಂಗಳ ಹಿಂದೆ ಕಾಲೇಜು ಪ್ರಾರಂಭವಾದಾಗ ಬಂದಿರುತ್ತಾರೆ. ಅಲ್ಲಿಂದ ಬರುವಾಗ covid Negative report ತೆಗೆದುಕೊಂಡು ಬಂದಿದ್ದಾರೆ ಎಂದು ಹಾಸ್ಟೆಲ್ ಮೇಲ್ವಿಚಾರಕರು ತಿಳಿಸಿದ್ದಾರೆ.ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸರ್ವೇಕ್ಷಣಾ ವಿಭಾಗದಿಂದ ಸಮಗ್ರ ಮಾಹಿತಿ ಪಡೆಯುತ್ತಿದ್ದೇವೆ. ಸೋಂಕು ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ವೇಕ್ಷಣೆ ಇಲಾಖೆಯ ಡಾ.ರಾಘವನ್ ತಿಳಿಸಿದ್ದಾರೆ.
ತಾಲ್ಲೂಕುವಾರು ಕೊವಿಡ್ ಮಾಹಿತಿ
ದಾವಣಗೆರೆ 39, ಹೊನ್ನಾಳಿ 4, ಹರಿಹರ, ಚನ್ನಗಿರಿ ತಲಾ 1 ಪಾಸಿಟಿವ್ ಪ್ರಕರಣ*