ಕಿಂಗ್ ಕೋಬ್ರಾ ಹೆಡೆಯನ್ನು ನೆಕ್ಕುತ್ತಾ ಮುದ್ದಾಡಿದ ಗೋಮಾತೆ

ಸಾಮಾನ್ಯವಾಗಿ ಹಾವುಗಳನ್ನು ಕಂಡರೆ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡ ಹೆದರುತ್ತವೆ. ವಿಷಕಾರಿ ಹಾವು ಎಲ್ಲಿ ಕಚ್ಚುತ್ತದೆಯೋ ಎಂಬ ಭಯದಿಂದ ದೂರ ಉಳಿಯುತ್ತವೆ. ಅಷ್ಟೇ ಅಲ್ಲದೆ, ಹಾವುಗಳು ಪ್ರಾಣಿಗಳಿಗೆ ಹತ್ತಿರವಾಗಲು ಕೂಡ ಇಷ್ಟಪಡುವುದಿಲ್ಲ.
ಆದರೆ ಇಲ್ಲೊಂದು ಹಾವು ಹಸುವಿನ ಜೊತೆ ಸ್ನೇಹ ಬೆಳೆಸಿದೆ. ಅಷ್ಟೇ ಅಲ್ಲದೆ, ತನ್ನ ನಾಲಿಗೆಯಿಂದ ಕರಿನಾಗರವನ್ನು ಸವರುತ್ತಾ ಗೋಮಾತೆ ಮುದ್ದಾಡುತ್ತಿದೆ. ಇದು ಪ್ರಕೃತಿಯ ವೈಚಿತ್ರ್ಯವೋ.. ಅಸಾಮಾನ್ಯ ಸ್ನೇಹವೋ ತಿಳಿಯದು.
<blockquote class=”twitter-tweet”><p lang=”en” dir=”ltr”>Difficult to explain. The trust gained through pure love 💕 <a href=”https://t.co/61NFsSBRLS”>pic.twitter.com/61NFsSBRLS</a></p>— Susanta Nanda (@susantananda3) <a href=”https://twitter.com/susantananda3/status/1687139373329039360?ref_src=twsrc%5Etfw”>August 3, 2023</a></blockquote> <script async src=”https://platform.twitter.com/widgets.js” charset=”utf-8″></script>
ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಟ್ವೀಟ್ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಾಣುತ್ತಿರುವಂತೆ ಆ ಹಸು ತನ್ನ ನಾಲಿಗೆಯಿಂದ ಹಾವಿನ ಹೆಡೆಯನ್ನು ನೆಕ್ಕುತ್ತಿದೆ. ಈ ವಿಡಿಯೋ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕೆಲವರು ಇದನ್ನು ಗೋಮಾತೆ ಮತ್ತು ನಾಗದೇವರ ಸ್ನೇಹ ಎಂದು ಬಣ್ಣಿಸುತ್ತಿದ್ದಾರೆ. ಇದೆಲ್ಲವೂ ಶಿವನ ಲೀಲೆ ಎಂದು ಹೇಳುತ್ತಿದ್ದಾರೆ.