ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ.ಶಿವಗಂಗಾ ರಿಗೆ 4.50 ಲಕ್ಷ ರೂ. ವಂಚನೆ..! ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಾಂಶದ ಆಮಿಷಕ್ಕೆ ಬಲಿಯಾದ್ರಾ ಖ್ಯಾತ ಉದ್ಯಮಿ.?

ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಲಾಭಾಂಶ ಬರಲಿದೆ ಎಂದು ಆಮಿಷವೊಡ್ಡಿ ನಗರದ ಉದ್ಯಮಿ, ಚನ್ನಗಿರಿ ತಾಲೂಕಿನ ಹಿರೇಕೊಗಲೂರು ಗ್ರಾಮದ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ.ಶಿವಗಂಗಾ ಅವರಿಗೆ 4.50 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ.
ಶಿವಗಂಗಾ ಬಸವರಾಜ್ ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಲಾಭಾಂಶ ಹೆಚ್ಚು ಬರಲಿದೆ ಎಂದು ಆಮಿಷವೊಡ್ಡಿದ್ದು, ಇದಕ್ಕೆ ಸಮ್ಮತಿಸಿದ ಶಿವಗಂಗಾ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಲು ಆಸಕ್ತಿ ಇದೆ ಎಂದು ತಿಳಿಸಿ, ಅಪರಿಚಿತ ಖಾತೆಗೆ ಹಂತಹಂತವಾಗಿ 4.50 ಲಕ್ಷ ಹಣ ತೊಡಗಿಸಿದ್ದಾರೆ.
ಅಪರಿಚಿತ ವ್ಯಕ್ತಿ ಮತ್ತೆ ಕರೆಮಾಡಿ ಹೆಚ್ಚು ಹಣ ತೊಡಗಿಸುವಂತೆ ತಿಳಿಸಿದಾಗ ಅನುಮಾನಗೊಂಡ ಶಿವಗಂಗಾ ಬಸವರಾಜ್ ಯಾವುದೇ ಲಾಭಾಂಶ ಬೇಡ ತಾವು ನಿಮ್ಮ ಷೇರು ಮಾರುಕಟ್ಟೆಗೆ ತೊಡಗಿಸಿರುವ ಹಣವನ್ನು ವಾಪಸ್ಸು ನೀಡುವಂತೆ ತಿಳಿಸಿದ್ದಾರೆ.
ಇದಕ್ಕೆ ಅಪರಿಚಿತ ವ್ಯಕ್ತಿ ನಿಮ್ಮ ಹಣವು ಕಂಪನಿಯ ಖಾತೆಗೆ ಜಮಾ ಮಾಡಿಕೊಂಡಿದ್ದು, ಹಣವನ್ನು ಹಿಂದಿರುಗಿಸಲು ಬರುವುದಿಲ್ಲವೆಂದು ತಿಳಿಸಿ ಫೋನ್ ಕರೆ ಕಟ್ ಮಾಡಿದ್ದಾರೆ. ಇದರಿಂದ ತಾವು ವಂಚನೆಗೊಳಗಾಗಿರುವುದು ಅರಿವಿಗೆ ಬಂದಿರುವ ಕಾರಣ ಶಿವಗಂಗಾ ಬಸವರಾಜ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಸಿಇಎನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.
