ಕೊಡದಗುಡ್ಡ ಶ್ರೀ ವೀರಭದ್ರೇಶ್ವರ ಸ್ವಾಮಿ ಸರಳ ರಥೋತ್ಸವ

kodadagudda veerabhadra swamy rathotsava

ವರದಿ : ಹೆಚ್ ಎಂ ಪಿ ಕುಮಾರ್.

ದಾವಣಗೆರೆ: (ಜಗಳೂರು) ಮಾರ್ಚ್30: ಇತಿಹಾಸ ಪ್ರಸಿದ್ದ ಕೊಡದಗುಡ್ಡದ ಶ್ರೀ ವೀರಭದ್ರೇಶ್ವರ ಮಹಾಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕೊಡದಗುಡ್ಡ ಗ್ರಾಮದ ಬೆಟ್ಟದಲ್ಲಿ ನೆಲೆಸಿರುವ ವೀರಭದ್ರೇಶ್ವರ ಸ್ವಾಮಿಯ ಮಹಿಮೆ ಅಪಾರವಾಗಿದೆ. ಸೋಮವಾರ ಸಂಜೆ ವೇಳೆ ಸಾವಿರಾರು ಭಕ್ತರು ನಡುವೆ ರಥೋತ್ಸವ ಜರುಗಿತು.

ಗುಡ್ಡದ ಮೇಲಿಂದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯ ಸ್ವಾಮಿಯನ್ನು ತೇರು ಬೀದಿಗೆ ಸಕಲ ವಾಧ್ಯಗಳೊಂದಿಗೆ ತರಲಾಯಿತು.

ತೇರಿಗೆ ಮೂರು ಪ್ರದಕ್ಷಿಣೆ ನಂತರ ತೇರಿನಲ್ಲಿ ಭಕ್ತರ ಸಮ್ಮುಖದಲ್ಲಿ ಪ್ರತಿಷ್ಟಾಪಿಸಲಾಯಿತು. ಸಕಲ ಪೂಜೆಯ ನಂತರ ತೇರು ಚದುರಿದ ನಂತರ ಭಕ್ತರಿಂದ ಜಯಘೋಷಣೆ ಕುಗೂತ್ತಾ ರಥವನ್ನ ಭಕ್ತರು ಎಳೆದರು. ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ರಥದ ಕಳಸಕ್ಕೆ ಬಾಳೆ ಹಣ್ಣು, ಎಸೆದು ತಮ್ಮ ಹರಕೆಯನ್ನು ಸ್ವಾಮಿಗೆ ಸಮರ್ಥಿಸಿದರು.ರಥವನ್ನ ಎಂದಿನಂತೆ ಸುಮಾರು ದೂರ ಎಳೆದು ಪುನಃ ಪಾದಗಟ್ಟವರೆಗೂ ಎಳೆದು ತಂದು ನಿಲ್ಲಿಸಲಾಯಿತು. ರಥೋತ್ಸವಕ್ಕೆ ದಾವಣಗೆರೆ, ಚಿತ್ರದುರ್ಗ,ಶಿವಮೊಗ್ಗ,ಬಳ್ಳಾರಿ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ಭಕ್ತರು ಆಗಮಿಸಿದ್ದರು.

kodadagudda veerabhadra swamy rathotsava 1

ಶ್ರೀ ವೀರಭದ್ರೇಶ್ವರ ಸ್ವಾಮಿಯ ಮುಕ್ತಿ ಭಾವುಟ 2.20 ಲಕ್ಷಕ್ಕೆ ಹರಾಜು

ಉದ್ಯಮಿ ಶರಣಬ್ಬ ಎಂಬುವವರು ಸ್ವಾಮಿಯ ಮುಕ್ತಿ ಭಾವುಟವನ್ನ ಹರಾಜಿನಲ್ಲಿ 2 ಲಕ್ಷದ 20 ಸಾವಿರಕ್ಕೆ ಪಡೆದರು. ಭಕ್ತರಿಗೆ ತೊಂದರೆಯಾಗದಂತೆ ನೀರಿನ ವ್ಯವಸ್ಥೆಯನ್ನ ದೇವಸ್ಥಾನದ ಆಡಳಿತ ಮಂಡಳಿ ಕಲ್ಪಿಸಿತ್ತು.

ಕೊವಿಡ್ ನಿಯಮಾವಳಿಗಳನ್ನ ಜಾತ್ರೆಯಲ್ಲಿ ಆಳವಡಿಸಲಾಗಿದ್ದರು ಭಕ್ತರು ಎಂದಿನಂತೆ ತಮ್ಮ ಭಕ್ತಿಯನ್ನ ಮೆರೆದರು. ಕಳೆದ ವರ್ಷ ಕೊವಿಡ್ ಲಾಕ್ ಡೌನ್ ಹಿನ್ನೆಲೆ ರಥೋತ್ಸವ ರದ್ದಾಗಿತ್ತು, ಈ ಭಾರಿ ಕೂಡ ಕೋವಿಡ್ ಎರಡನೇ ಹಲೆ ಇರುವ ಹಿನ್ನೆಲೆ ಸರಳವಾಗಿ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಆಚರಣೆ ಮಾಡಲಾಯಿತು.

ಕೆಲ ಭಕ್ತರು ಮಾಸ್ಕ್ ಧರಿಸಿದ್ದರೆ ಕೆಲವರು ನಮಗೆ ಕೊರೊನ ಬರುವುದಿಲ್ಲ ಎಂಬಂತೆ ಮಾಸ್ಕ್ ಧರಿಸದೆ ಇದ್ದದ್ದು ಕಂಡುಬಂತು. ಪ್ರತಿ ವರುಷ ಕೊಡದಗುಡ್ಡ ವೀರಭದ್ರೇಶ್ವರ ರಥೋತ್ಸವ ನಂತರ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ ಜರುಗುತ್ತಿತ್ತು ಆದರೆ ಮಾರ್ಚ್ 29 ಸೋಮವಾರದಂದು ಒಂದೇ ದಿನ ಎರಡೂ ರಥೋತ್ಸವ ಜರುಗಿದ್ದು ವಿಶೇಷವಾಗಿತ್ತು.

ಅದ್ದೂರಿ ಜಾತ್ರೆಗೆ ಕೊವಿಡ್ ಅಡ್ಡಿ

ಜಾತ್ರೆಯ ಇತಿಹಾಸದಲ್ಲಿ ಮೊದಲಬಾರಿಗೆ ಹೊರಗಿನ ಭಕ್ತರನ್ನು ನಿರ್ಬಂಧಿಸಿ ಜಾತ್ರೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದ ಹಿನ್ನಲೆಯಲ್ಲಿ ಲಕ್ಷಾಂತರ ಭಕ್ತರ ಆಗಮನದಿಂದ ಪುನೀತಗೊಳ್ಳುತ್ತಿದ್ದ ಕೊಡದಗುಡ್ಡ ವೀರಭದ್ರೇಶ್ವರ ಜಾತ್ರೆ ಈ ಭಾರಿ ತೀರ ಸರಳವಾಗಿ ನಡೆಯಿತು.

ಕೊರೊನಾ ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡಿದ್ದರಿಂದ ಜಾತ್ರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಸ್ಥಳೀಯರಿಗೆ ಮಾತ್ರ ಅವಕಾಶ ಕಲ್ಪಿಸಿ ಹೊರಗಿನಿಂದ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿತ್ತು. ಲಕ್ಷಾಂತರ ಜನರು ಸೇರುತ್ತಿದ್ದ ಜಾತ್ರೆಗೆ ಸಾವಿರಾರು ಭಕ್ತರು ಬಂದಿದ್ದರು.

Leave a Reply

Your email address will not be published. Required fields are marked *

error: Content is protected !!