ದಾವಣಗೆರೆ ಜಿಲ್ಲೆಯಲ್ಲಿ ಇಬ್ಬರನ್ನ ಬಲಿ ಪಡೆದ ಕೊವಿಡ್.! 126 ಜನರಿಗೆ ಕೊರೊನಾ ಸೊಂಕು ದೃಡ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಫೆ ಒಂದರಂದು ರಂದು ಇಬ್ಬರು ಮಹಿಳೆಯರು ಕೊವಿಡ್ ಗೆ ಬಲಿಯಾಗಿದ್ದಾರೆ.
126 ಮಂದಿಗೆ ಇಂದು ಕೊರೊನಾ ದೃಡಪಟ್ಟಿದ್ದು ಪ್ರತಿ ದಿನ ಕೊವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. 123 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1500 ಕ್ಕೆ ಬಂದಿದೆ.
ದಾವಣಗೆರೆ 48, ಹರಿಹರ 9, ಜಗಳೂರು ತಾಲೂಕಿನಲ್ಲಿ 13, ಚನ್ನಗಿರಿ ತಾಲ್ಲೂಕಿನಲ್ಲಿ 11, ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ 38 ಮಂದಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಗಳ 7ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ಖಚಿತವಾಗಿದೆ. ಇನ್ನೂ ಒಟ್ಟು ಇಂದು 123 ಜನರು ಸೊಂಕಿತರು ಗುಣಮುಖರಾಗಿದ್ದಾರೆ.
ಶಾಲೆ/ಕಾಲೇಜು ರಜೆ ನೀಡಲಾಗಿರುವ ವಿವರ (1/2/2022)
ಈ ದಿನ ತಾತ್ಕಾಲಿಕವಾಗಿ ರಜೆ ಘೋಷಿಸಿರುವ ಶಾಲೆಗಳು : 01
ಇಲ್ಲಿಯವರೆಗೆ : 42+1=43
ಇತರ :
ಪ್ಯಾರಾ ಮೆಡಿಕಲ್ ಕಾಲೇಜು : 01
ಪಿ. ಯು ಕಾಲೇಜು(ವಸತಿ ಶಾಲೆಗಳು ಸೇರಿ) : 18+1(ಈ ದಿನ)= 19
ಒಟ್ಟು = 63