Ksrtc: ದಾವಣಗೆರೆ ಕೆಎಸ್‌ಆರ್‌ಟಿಸಿ ನಿಲ್ದಾಣ ಎದುರು ಸಂಚಾರ ದಟ್ಟಣೆ ತಡೆಗೆ ಮನವಿ

ದಾವಣಗೆರೆ: (Ksrtc) ದಾವಣಗೆರೆಯಲ್ಲಿ ದಿನೇ ದಿನೇ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು ಇದನ್ನು ತಡೆಯಲು ಕ್ರಮವಹಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ನೊಂದ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ.
ದಾವಣಗೆರೆಯಲ್ಲಿ ಕೆಎಸ್‌ಆರ್‌ರ್ಟಿಸಿ ಬಸ್ ನಿಲ್ದಾಣ ಹತ್ತಿರ ಸಂಚಾರ ದಟ್ಟಣೆ ನೋಡಿದರೆ ಬೆಂಗಳೂರಿನಲ್ಲಿ ಕೂಡ ಈ ತೊಂದರೆ ಅನುಭವಿಸಲು ಸಾಧ್ಯವಿಲ್ಲ. ಯಾಕೆಂದರೆ ಬಸ್ ನಿಲ್ದಾಣ ಎದುರುಗಡೆ ಸಂಚಾರ ಪೊಲೀಸ್ ಠಾಣೆ ಇದೆ. ಇಲ್ಲಿ ಭರತ್ ಹೋಟೆಲ್‌ನವರು ರಸ್ತೆ ನುಂಗಿದ್ದಾರೆ. ಬಂಡೆ ಹೋಟೆಲ್‌ನವರು ಫುಟ್ಪಾತ್ ನುಂಗಿದ್ದಾರೆ. ರಸ್ತೆ ಮಧ್ಯದಲ್ಲಿ ವಾಹನ ನಿಲ್ಲಿಸಿ, ತರಕಾರಿ ಮಾರುಕಟ್ಟೆಗೆ ಹೋಗುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆಯಿಂದ ದಾವಣಗೆರೆಗೆ ಬರುವ ಎಲ್ಲಾ ಸಾರ್ವಜನಿಕರಿಗೆ ವಿಪರೀತ ತೊಂದರೆಯಾಗುತ್ತಿದೆ. ಕೆಎಸ್‌ಆರ್‌ಟಿಸಿ ನಿಲ್ದಾಣದ ಎದುರು ಸುಗಮ ಸಂಚಾರಕ್ಕೆ ಹೋಟೆಲ್ ಮಾಲೀಕರಿಗೆ ಕ್ರಮ ಕೈಗೊಂಡು ತೆರವುಗೊಳಿಸಬೇಕಾಗಿ ವಿನಂತಿಸಿದ್ದಾರೆ.