application; ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಹುದ್ದೆ; ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Applications invited for various training

ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 14 ಹುದ್ದೆಗಳು ಖಾಲಿ ಇದ್ದು,‌ ಆಸಕ್ತ, ಸೂಕ್ತ ಅಭ್ಯರ್ಥಿಗಳು ಅರ್ಜಿ(application) ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆಗಳ ವಿವರ

ಎಕ್ಸಿಕ್ಯುಟಿವ್ ಕಂಪನಿ ಸೆಕ್ರೆಟರಿ- 1 ಹುದ್ದೆಆಫೀಸರ್/ ಬ್ಯುಸಿನೆಸ್ ಡೆವಲಪ್‌ಮೆಂಟ್‌ ಆಫೀಸರ್ 4ಇಂಜಿನಿಯರ್ 2ಬ್ಯುಸಿನೆಸ್ ಡೆವಲಪ್‌ಮೆಂಟ್‌ ಆಫೀಸರ್ 3ಸಂಪರ್ಕ ಅಧಿಕಾರಿ 1ಆಫೀಸರ್ 1ಎಕ್ಸಿಕ್ಯೂಟಿವ್ ಆಫೀಸರ್ ಪಿಎ 1ಆಫೀಸರ್ ಟ್ರೈನಿ 1

ವಿದ್ಯಾರ್ಹತೆ

ಎಕ್ಸಿಕ್ಯುಟಿವ್ ಕಂಪನಿ ಸೆಕ್ರೆಟರಿ – ಪದವಿ ಆಫೀಸರ್/ ಬ್ಯುಸಿನೆಸ್ ಡೆವಲ್ಮೆಂಟ್ ಆಫೀಸರ್ ಬಿಕಾಂ, ಬಿಬಿಎ, ಬಿಬಿಎಂ, ಬಿಸಿಎ, ಎಂಬಿಎ, ಇಂಜಿನಿಯರ್ ಬಿಇ ಅಥವಾ ಬಿಟೆಕ್ಬ್ಯುಸಿನೆಸ್

ಡೆವಲಪ್‌ಮೆಂಟ್‌ ಆಫೀಸರ್- ಬಿಕಾಂ, ಬಿಬಿಎಂ, ಬಿಬಿಎ, ಬಿಸಿಎ

ಸಂಪರ್ಕ ಅಧಿಕಾರಿ- ಸ್ನಾತಕೋತ್ತರ ಪದವಿ

ಆಫೀಸರ್ -ಪದವಿ

ಎಕ್ಸಿಕ್ಯೂಟಿವ್ ಆಫೀಸರ್ – ಪಿಎ ಡಿಪ್ಲೊಮಾ

ಆಫೀಸರ್ – ಟ್ರೈನಿ ಎಂಬಿಎ

karnataka highcourt; ಜಿಲ್ಲಾ ನ್ಯಾಯಾಧೀಶರ ಹುದ್ದೆ ಭರ್ತಿಗೆ ಅಧಿಸೂಚನೆ

ವಯೋಮಿತಿ

ಗರಿಷ್ಠ ವಯೋಮಿತಿ 35 ವರ್ಷ. ಸಂಪರ್ಕ ಅಧಿಕಾರಿಗೆ ವಯೋಮಿತಿ 45 ವರ್ಷ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ 5 ವರ್ಷ ವಯೋಮಿತಿ ಸಡಿಲಿಕೆ ಇದೆ.

ವೇತನ

ಈ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನ 30 ರಿಂದ 70 ಸಾವಿರ ರೂ‌. ನಿಗದಿ ಮಾಡಲಾಗಿದೆ.

ಆಯ್ಕೆ ಪ್ರಕ್ರಿಯೆ

ಕಂಪ್ಯೂಟರ್ ಸಾಕ್ಷಾರತಾ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಅರ್ಜಿಯಲ್ಲಿ ಶೈಕ್ಷಣಿಕ ಅರ್ಹತೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು

ಅರ್ಜಿ ಸಲ್ಲಿಕೆ ವಿಳಾಸ:

ಚೀಫ್ ಜನರಲ್ ಮ್ಯಾನೇಜರ್ (ಎಚ್ಆರ್), ಎಚ್ಆರ್ ವಿಭಾಗ, ಕೆಐಒಸಿಎಲ್ ಲಿಮಿಟೆಡ್, ಕೋರಮಂಗಲ, 2ನೇ ಬ್ಲಾಕ್, ಸರ್ಜಾಪುರ ರಸ್ತೆ, ಬೆಂಗಳೂರು- 560034.

ಇನ್ನು ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಕಡೆಯ ದಿನಾಂಕ ನವೆಂಬರ್ 14. ಹಾರ್ಡ್ ಕಾಪಿ ಮೂಲಕ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್ 20. ಹೆಚ್ಚಿನ ಮಾಹಿತಿಗೆ kioclltd.inಈ ವೆಬ್ಸೈಟ್ಗೆ ಭೇಟಿ ನೀಡಿ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!