ಕುಕ್ಕುವಾಡ ಶ್ರೀ ಆಂಜನೇಯಸ್ವಾಮಿ ರಥೋತ್ಸವ

ದಾವಣಗೆರೆ: ಕುಕ್ಕುವಾಡ ಶ್ರೀ ಆಂಜನೇಯಸ್ವಾಮಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವವು ಮಾ.30 ಮತ್ತು 31ರಂದು ನಡೆಯಲಿದೆ.
ಮಾ. 30 ರಂದು 5 ಗಂಟೆಗೆ ಶ್ರೀ ಆಂಜನೇಯಸ್ವಾಮಿ ಉಚ್ಛಾಯದ ರಥೋತ್ಸವ ನಡೆಯಲಿದ್ದು, ಮಾ. 31ರಂದು ಬೆಳಿಗ್ಗೆ 9 ಗಂಟೆಗೆ ವಿವಿಧ ವಾಧ್ಯಗಳೊಂದಿಗೆ ದೇವರ ಬಾವುಟ, ಭಕ್ತರು ಕೊಟ್ಟ ಕಾಣಿಕೆಗಳ ಹರಾಜು ಮಹಾರಥೋತ್ಸವ ಜರಗುವುದು. ಸಾಯಂಕಾಲ ಮುಳ್ಳುಗದ್ದುಗೆ ಕಾರ್ಯಕ್ರಮ ನಡೆಯುವುದು.