ಕುಂಚಿಟಿಗ ಸಮುದಾಯಕ್ಕೆ ಸಚಿವ ಸ್ಥಾನ ನೀಡಿ – ಡಾ. ಹನುಮಂತನಾಥ ಸ್ವಾಮೀಜಿ

ತುಮಕೂರು/ಕೊರಟಗೆರೆ: ಬಿಜೆಪಿ ಪಕ್ಷದಲ್ಲಿ ಈಗ ಬದಲಾಗುತ್ತಿರುವ ಸಂಪುಟದಲ್ಲಿ ಕುಂಚಿಟಿಗ ಸಮುದಾಯಕ್ಕೆ ಪ್ರಾಧಾನ್ಯವನ್ನು ನೀಡಿ ಕುಂಚಿಟಿಗ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನವನ್ನು ನೀಡಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ಮನವಿ ಮಾಡಿದ್ದಾರೆ.
ಕೊರಟಗೆರೆ ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಹಲವು ರೀತಿಯ ಅನ್ಯಾಯಗಳಾಗಿದೆ ಹಲವು ಮನವಿಯನ್ನ ಸಲ್ಲಿಸಿದರೂ ಯಾವೊಂದು ಈಡೇರಿಲ್ಲ ಅದೇ ರೀತಿ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸಮುದಾಯದ ಹೆಚ್ಚಿನ ಮತದಾರರು ಮತದಾನ ಮಾಡುವ ಮೂಲಕ ಶಿರಾ ರಾಜಕೀಯ ಇತಿಹಾಸದಲ್ಲಿ ಬಿಜೆಪಿಗೆ ನೆಲೆಯನ್ನು ಕಲ್ಪಿಸಲು ಸಮುದಾಯ ಹಲವು ರೀತಿಯಲ್ಲಿ ದುಡಿದೆ ಅದೇ ರೀತಿ ಇಡೀ ರಾಜ್ಯದಲ್ಲಿ 24 ಲಕ್ಷಕ್ಕೂ ಹೆಚ್ಚು ಇರುವಂತಹ ಸಮುದಾಯಕ್ಕೆ ಮಂತ್ರಿಮಂಡದಲ್ಲಿ ಅವಕಾಶವನ್ನು ಕಲ್ಪಿಸುಸಬೇಕು ನಮಗೂ ಸಾಮಾಜಿಕ ನ್ಯಾಯದ ಅಡಿಯಲ್ಲಿ ಒಂದು ಸಚಿವ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಶ್ರೀಗಳು ಒತ್ತಾಯಿಸಿದ್ದಾರೆ.