ಕುತೂಹಲ ಮೂಡಿಸಿದ ಇಂದಿನ ಬಿಜೆಪಿ ಶಾಸಕಾಂಗ ಸಭೆ.!

ಬೆಂಗಳೂರು: ಭಾವುಕ ಭಾಷಣದ ನಂತರ ನಿನ್ನೆ ರಾಜೀನಾಮೆ ನೀಡಿದ್ದ ಯಡಿಯೂರಪ್ಪ ಅವರ ಸ್ಥಾನಕ್ಕೆ ಮುಂದಿನ ರಾಜ್ಯದ ನಾಯಕ ಯಾರು ಎಂಬ ಬಗ್ಗೆ ಇಂದು ನಿರ್ಧಾರವಾಗುವ ಸಂಭವ ಇದೆ.
ಎರಡು ವರ್ಷಗಳ ರಾಜ್ಯದ ಜವಾಬ್ದಾರಿಯನ್ನು ಮುಂದುವರೆಸಿಕೊಂಡು ಹೋಗಿದ್ದ ಬಿಎಸ್ ವೈ ಅವರು ಸದ್ಯಕ್ಕೆ ಹಂಗಾಮಿ ಸಿಎಂ ಆಗಿಯೂ ಮುಂದುವರೆಯುತ್ತಿದ್ದು, ರಾಜ್ಯದ ಜವಾಬ್ದಾರಿ ಹೊತ್ತು ಅಚ್ಚುಕಟ್ಟಾಗಿ ನಾಯಕತ್ವ ನಿಭಾಯಿಸುವ ನಾಯಕನಿಗಾಗ ಇಂದು ಕರೆಯಲಾಗಿರುವ ಪಕ್ಷದ ಶಾಸಕಾಂಗ ಸಭೆಯಲ್ಲಿ ಅಂತಿಮ ನಿರ್ಧಾರವಾಗಲಿದೆ.
ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ ಇಂದು ಸಂಜೆ 7:30 ಕ್ಕೆ ಶಾಸಕಾಂಗ ಸಭೆಯನ್ನು ಕರೆಯಲಾಗಿದ್ದು, ಸಿಎಂ ರೇಸ್ ನಲ್ಲಿರುವ ಅಭ್ಯರ್ಥಿಗಳಲ್ಲಿ ಒಬ್ಬರನ್ನು ಅಂತಿಮಗೊಳಿಸಿ ರಾಜ್ಯದ ನೊಗವನ್ನು ಅವರ ಕೊರಳಿಗೆ ಹಾಕಲಾಗುತ್ತದೆ.
ಒಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ನಂತರ ರಾಜ್ಯದಲ್ಲಿ ಮುಂದಿನ ಸಿಎಂ ಯಾರು ಎಂಬ ಬಗ್ಗೆ ಕುತೂಹಕ ಮೂಡಿದ್ದು, ಆ ಕುತೂಹಲಕ್ಕೆ ಇಂದು ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ತೆರೆಬೀಳಲಿದೆ.