ಪತ್ರಕರ್ತರು ಮತ್ತು ಸಿಬ್ಬಂದಿಗಳು ನಿರ್ಲಕ್ಷ್ಯ ಮಾಡದೆ, ಕೋವಿಡ್ ಸೋಂಕಿನ ಬಗ್ಗೆ ಮುಂಜಾಗ್ರತೆ ವಹಿಸಿ – ಶಿವಾನಂದ ತಗಡೂರು

KUWJA ಸಂತಾಪ…
ಕೋವಿಡ್ ಸಂದರ್ಭದಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿ. ಸುದ್ದಿ ಮನೆಯಲ್ಲಿಯೂ ಸಾವಿನ ಪಟ್ಟಿ ನಿತ್ಯ ಬೆಳೆಯುತ್ತಲೇ ಇರುವುದು ದುಃಖಕರ.
ಬೆಂಗಳೂರು: ಆಕಾಶವಾಣಿ& ದೂರದರ್ಶನದಲ್ಲಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿದ ವಿ.ಎಸ್.ಸೂರ್ಯನಾರಾಯಣ ರಾವ್, ತುಮಕೂರು ಜಿಲ್ಲೆಯ ಬೆ ಕ್ರಿಯಾಶೀಲ ವಾರ್ತಾಧಿಕಾರಿ ಮಂಜುನಾಥ್, ಕೆಯುಡಬ್ಲ್ಯೂಜೆ ಯಲ್ಲಿ ಮಂಡ್ಯ ವನಸುಮ ಪತ್ರಿಕೆಯ ಹೆಸರಿನಲ್ಲಿ ಪ್ರಶಸ್ತಿ ಪ್ರತಿಷ್ಠಾಪನೆ ಮಾಡಿದ ಆ ಪತ್ರಿಕೆ ಸಂಪಾದಕ ಎಲ್.ಆರ್.ವಾಸುದೇವ ರಾವ್ ರಾಳೇಕರ್, ಮಂಡ್ಯ ಸಂಜೆ ಇಂಪು ಪತ್ರಿಕೆ ಸಂಪಾದಕ ಚಲುವರಾಜ್, ಇಂದು ಸಂಜೆ ಪತ್ರಿಕೆ ಸಂಪಾದಕ ವಿ.ನಾಗರಾಜ್, ಬೀದರ್ ಹಿರಿಯ ಪತ್ರಕರ್ತ ಪಂಡರಿ ಎಲ್ಲೇನೂರ, ದೇವನಹಳ್ಳಿ ಮೇಘವಾಯ್ಸ್ ಪತ್ರಿಕೆ ಸಂಪಾದಕ ಲಕ್ಷ್ಮೀನಾರಾಯಣ, ಹವ್ಯಾಸಿ ಪತ್ರಕರ್ತ ಎಚ್.ಗವಿಸಿದ್ದಯ್ಯ, ಮಂಗಳ ವಾರಪತ್ರಿಕೆಯ ಟಿ.ಕೆ.ಸುಬ್ರಹ್ಮಣಿ, ವಿಜಯಪುರ ಜಿಲ್ಲಾ ಕ ಕಾನಿಪ ಸಂಘದ ಕಾರ್ಯದಶಿ೯ ಶಂಶುದ್ದೀನ್ ಸೈಯದ್ ಅವರುಗಳ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಪ್ರಾರ್ಥಿಸಿದೆ.
ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡಿರುವ ಕಾರಣ, ಮಾಧ್ಯಮದಲ್ಲಿ ಕೆಲಸ ಮಾಡುವ ಎಲ್ಲಾ ಪತ್ರಕರ್ತರು ಮತ್ತು ಸಿಬ್ಬಂದಿಗಳು ನಿರ್ಲಕ್ಷ್ಯ ಮಾಡದೆ, ಕೋವಿಡ್ ಸೋಂಕಿನ ಬಗ್ಗೆ ಮುಂಜಾಗ್ರತೆ ವಹಿಸಿ ಎಚ್ಚರಿಕೆಯಿಂದ ಇರುವಂತೆ ಕೆಯುಡಬ್ಲ್ಯೂಜೆ ವಿನಂತಿಸಿದೆ. ಶಿವಾನಂದ ತಗಡೂರು KUWJ.