ಲೇಡಿ ಸಿಂಗಂ ‘ತುಂಗಾ’ ಇನ್ನಿಲ್ಲ.! ಸ್ಮಾರ್ಟ್ “ಪೊಲೀಸ್ ಶ್ವಾನ” ಗೆ ಕಣ್ಣೀರ ವಿದಾಯ

Davanagere Lady Singam ‘Tunga’ is no more! A tearful farewell to the smart “police dog”.

ದಾವಣಗೆರೆ : ಆರೋಪಿಗಳನ್ನು ಬೆನ್ನಟ್ಟಿ ಕೊಲೆಗಾರರನ್ನು ಹಿಡಿಯುತ್ತಿದ್ದ ದಾವಣಗೆರೆ ಕ್ರೈಂ ಡಾಗ್ ತುಂಗಾ ಶುಕ್ರವಾರ ಎಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿದೆ.

ತುಂಗಾ ಅಂದ್ರೆ ಸಾಕು. ಹ್ಯಾಂಡ್ಲರ್‌ಗೆ ಮಾತ್ರವಲ್ಲದೇ ಎಸ್ಪಿ, ಡಿಜಿ, ಎಡಿಜಿಪಿ ಸೇರಿದಂತೆ ಎಲ್ಲರಿಗೂ ಅಚ್ಚುಮೆಚ್ಚು.ತುಂಗಾ ಅವಳದ್ದೇ  ಹವಾವನ್ನು ಪೊಲೀಸ್ ಇಲಾಖೆಯಲ್ಲಿ ಉಳಿಸಿಕೊಂಡಿದ್ದಳು.

ಆಗಸ್ಟ್ 15ಕ್ಕೆ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಶ್ವಾನ ಪ್ರದರ್ಶನದಲ್ಲಿ ತುಂಗಾ ತನ್ನ ಬಹುಮುಖಿ ಪ್ರದರ್ಶನ ತೋರಿದ್ದಳು. ಇದಾದ ಬಳಿಕ ತುಂಗಾಗೆ ಕೆಲ ದಿನಗಳ ಕಾಲ ಮಗುವಿನಂತೆ ಎಸ್ಪಿ ರಿಷ್ಯಂತ್ ಮಾರ್ಗದರ್ಶನದಲ್ಲಿ ಡಿಎಸ್ಪಿ ಪ್ರಕಾಶ್ ನೇತೃತ್ವದಲ್ಲಿ ಹ್ಯಾಂಡ್ಲರ್ ಶಫಿ, ನಾಗರಾಜ್, ಸಚಿನ್ ಸೇರಿದಂತೆ ಇತರರು ಮಗುವಿನಿಗಿಂತ ಚೆನ್ನಾಗಿ ನೋಡಿಕೊಂಡರು.


ತುಂಗಾದ ಮೃತದೇಹವನ್ನು ದಾವಣಗೆರೆಯ ಡಿಆರ್ ಗ್ರೌಂಡ್‌ನಲ್ಲಿ ಪೊಲೀಸರು ಗೌರವ ವಂದನೆ ಸಲ್ಲಿಸಿದರು. ತುಂಗಾ ಮೃತ ದೇಹ ನೋಡಲು ಸಾಕಷ್ಟು ಜನರು ಬಂದಿದ್ದರಲ್ಲದೇ ಕಣ್ಣೀರು ಹಾಕಿ ತುಂಗಾ ಮತ್ತೊಮ್ಮೆ ಹುಟ್ಟಿ ಬಾ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು.

ತುಂಗಾ ದಾವಣಗೆರೆ ಪೊಲೀಸ್‌ಲ್ಲಿರುವ ಡಿಟೆಕ್ಟಿವ್ ನಂಬರ್ 1. ಆಗಿದ್ದು, ತುಂಬಾ ಸ್ಮಾರ್ಟ್,  ಅಷ್ಟೇ ಚಾಣಾಕ್ಷೆ. ಪೊಲೀಸ್ ಇಲಾಖೆಯಲ್ಲಿ ಈಕೆಯನ್ನು ಬೀಟ್ ಮಾಡೋರೇ ಇಲ್ಲ.. ಈಕೆ ಅಪರಾಧಿಗಳ ಜಾಡು ಹಿಡಿದರೇ ಮಿಸ್ ಆಗೋಕೆ ಚಾನ್ಸೇ ಇಲ್ಲ. ಪೊಲೀಸ್ ಇಲಾಖೆಯಲ್ಲಿಯೇ ಈಕೆ ಲೇಡಿ ಸಿಂಗಂ ಆಗಿದ್ದಳು. ದಾವಣಗೆರೆ ಪೊಲೀಸ್ ಇಲಾಖೆಯಲ್ಲಿರುವ ಶ್ವಾನಗಳಲ್ಲಿ ತುಂಗಾ ಹೆಚ್ಚು ಚಾಣಾಕ್ಷೆ ಆಗಿದ್ದಳು.

ದಾವಣಗೆರೆ ಪೊಲೀಸರಿಗೆ ಸವಾಲಾಗಿದ್ದ ಹಲವು ಪ್ರಕರಣಗಳಿಗೆ ಇದೇ ತುಂಗಾ ಮುಕ್ತಿ ನೀಡಿದ್ದಳು. 7 ಖಾಕಿ ಡಿಪಾರ್ಟ್ಮೆಂಟ್ನಲ್ಲಿ ತುಂಗಾಗೆ ಇರುವ ಮರ್ಯಾದೆಯೇ ಬೇರೆ ಇತ್ತುಘ. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಲಾಪುರದಲ್ಲಿ ನಡೆದ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದ್ದು, ಇದೇ ತುಂಗಾ ಶ್ವಾನ..

ತುಂಗಾ ಶ್ವಾನ ಅಂದ್ರೆ ಸಾಕು ಕೊಲೆ ಸುಲಿಗೆ ಮಾಡುವ ಆರೋಪಿಗಳಿಗೆ ಏನೋ ಕಾದಿದೆ ಎಂಬರ್ಥದಲ್ಲಿ ತುಂಗಾ ಕೆಲಸ ಮಾಡಿದ್ದಳು. ಮಿಂಚಿನ ಓಟದ ತುಂಗಾ ಕೈಯಲ್ಲಿ ತಪ್ಪಿಸಿಕೊಳ್ಳೋಕೆ ಕೊಲೆಗಾರನೇ ಆಗುತ್ತಲೇ ಇರಲಿಲ್ಲ. ಜಿಲ್ಲೆಯಲ್ಲಿ ಯಾವುದೇ ಕೊಲೆ ದರೋಡೆ ನಡೆದರು ತುಂಗಾನೇ ಆರೋಪಿಗಳ ಎಡೆಮುರಿ ಕಟ್ಟುತ್ತಿದ್ದಳು. ಈಕೆ ಹಿಡಿದ ಕೇಸ್‌ಗಳಿಗೆ ಪ್ರಶಸ್ತಿ, ಸನ್ಮಾನಗಳ ಸರಮಾಲೆಗಳಿಗೆ ಲೆಕ್ಕವೇ ಇಲ್ಲ.

ದಾವಣಗೆರೆ ಜಿಲ್ಲಾ ಪೊಲೀಸ್ ಡಾಗ್ ಸ್ಕ್ವಾಡ್ನಲ್ಲಿರುವ ತುಂಗಾ ಸರಿಸುಮಾರು 70 ಕ್ಕೂ ಹೆಚ್ಚು ಕೊಲೆ ಕೇಸ್ ಗಳನ್ನು ಪತ್ತೆ ಮಾಡಿದ್ದಾಳೆ.. ತುಂಗಾ ಟ್ರೇಸ್ ಮಾಡಿದ ಕೇಸ್‌ಗಳು ಇತಿಹಾಸವನ್ನೇ ಸೃಷ್ಟಿ ಮಾಡಿವೆ. ಕೊಲೆ ನಡೆದ ಸ್ಥಳದಿಂದ 11 ಕಿಲೋಮೀಟರ್ ವರೆಗೂ ಆರೋಪಿಯ ಜಾಲ ಹಿಡಿದು ಹೋಗಿ ಆರೋಪಿಯನ್ನು ಪತ್ತೆ ಹಚ್ಚಿತ್ತು. ಅಷ್ಟರ ಮಟ್ಟಿಗೆ ಈಕೆ ಚಾಣಾಕ್ಷೆ.. ಒಟ್ಟು ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ, 4 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲು ತುಂಗಾ ಕಾರಣವಾಗಿದ್ದಾಳೆ.

ದಾವಣಗೆರೆ ಜಿಲ್ಲೆಯ ವಿವಿದೆಡೆ ಒಟ್ಟು 35 ಕಳ್ಳತನ ದರೋಡೆ ಪ್ರಕರಣದಲ್ಲಿ ಆರೋಪಿಗಳನ್ನು ಸೆರೆಯಾಗಿಸಿದೆ. 2009ರ ಆಗಸ್ಟ್‌ನಲ್ಲಿ ಹುಟ್ಟಿದ ಡಾಬರ್ಮನ್ ನಾಯಿ ಬೆಂಗಳೂರಿನಲ್ಲಿ 11 ತಿಂಗಳು ಟ್ರೈನಿಂಗ್ ಮುಗಿಸಿಕೊಂಡು ದಾವಣಗೆರೆಗೆ ತರಲಾಗಿತ್ತು. ಸತತ 12 ವರ್ಷಗಳ ಕಾಲ ಅತ್ಯುತ್ತಮ ಸರ್ವೀಸ್ ನೀಡಿರುವ ತುಂಗಾಗೆ ಯಾರು ಸರಿಸಾಟಿಯೇ ಇಲ್ಲ. ಒಟ್ಟಾರೆ ಅಂತರಾಷ್ಟ್ರೀಯ ನಾಯಿ ದಿನಾಚರಣೆ ದಿನದಂದೇ ತುಂಗಾ ಎಲ್ಲರನ್ನು ಬಿಟ್ಟು ಅಗಲಿದ್ದಾಳೆ. ಅವಳು ಇಲ್ಲದ ಜಾಗ ಇದೀಗ ಮೌನ, ತುಂಗಾ ಮತ್ತೊಮ್ಮೆ ಹುಟ್ಟಿ ಬಾ.

Leave a Reply

Your email address will not be published. Required fields are marked *

error: Content is protected !!